ನಟಿಗೆ ಲೈಂಗಿಕ ಕಿರುಕುಳ ನೀಡುತ್ತಿದ್ದ ಫೋಟೋಗ್ರಾಫರ್.!

ನಟಿಗೆ ಲೈಂಗಿಕ ಕಿರುಕುಳ ನೀಡುತ್ತಿದ್ದ ಫೋಟೋಗ್ರಾಫರ್.!

ತಮಿಳುನಾಡು, . 26, ನ್ಯೂಸ್ ಎಕ್ಸ್ ಪ್ರೆಸ್:  ರಷ್ಯನ್ ನಟಿಗೆ ಲೈಂಗಿಕ ಕಿರುಕುಳ ನೀಡಿದಕ್ಕೆ ಪೋಟೋಗ್ರಾಫರ್ ಅನ್ನು ತಮಿಳುನಾಡು ಪೊಲೀಸರು ಬಂಧಿಸಿದ್ದಾರೆ. ಲೈಂಗಿಕ ಕಿರುಕುಳ ನೀಡುತ್ತಿದ್ದ ಆರೋಪಿಯನ್ನು ರೂಪೇಶ್ ಕುಮಾರ್ ಎಂದು ಗುರುತು ಮಾಡಲಾಗಿದೆ.  ನನ್ನ ಫೋಟೋಗಳನ್ನು ಸಾಮಾಜಿಕ ಜಾಲತಾಣಗಳಲ್ಲಿ ಅಪ್ಲೋಡ್ ಮಾಡುತ್ತೇನೆ ಎಂದು ಕಿರುಕುಳ ನೀಡುತ್ತಿದ್ದಾನೆ ಎಂದು ನಟಿ ದೂರಿನಲ್ಲಿ ವಿವರಿಸಿದ್ದಾರೆ.

ನಟಿಯ ದೂರಿನ ಆಧಾರದ ಮೇರೆಗೆ ಫೋಟೋಗ್ರಾಫರ್ ನನ್ನು ಪೊಲೀಸರು ಬಂಧನಕ್ಕೆ ಒಳಪಡಿಸಿದ್ದಾರೆ. ರಷ್ಯನ್ ನಟಿ ರಾಘವ ರಾಲೆನ್ಸ್ ನಟಿಸಿರುವ ‘ಕಾಂಚನ 3’ ಚಿತ್ರದಲ್ಲಿ ನಟಿಸಿದ್ದಾರೆ.

ಆರೋಪಿ ರೂಪೇಶ್ ಕುಮಾರ್ ಪಬ್ ನಲ್ಲಿ ನಟಿಯನ್ನು ಭೇಟಿಯಾಗಿದ್ದು, ಅಲ್ಲಿ ಅವಕಾಶ ಕೊಡಿಸುತ್ತೇನೆ, ನೀವು ಜಾಹೀರಾತುಗಳಿಗಾಗಿ ಫೋಟೋಶೂಟ್ ಮಾಡಿಸಿಕೊಳ್ಳಿ ಎಂದು ಕೇಳಿದ್ದಾನೆ.

ಅದಕ್ಕೆ ನಟಿ ಒಪ್ಪಿಕೊಂಡಿದ್ದು, ನುಂಗಂಬಾಕ್ಕಂ ಪ್ರದೇಶದಲ್ಲಿನ ಹೋಟೆಲ್ ನಲ್ಲಿ ಫೋಟೋಶೂಟ್ ಮಾಡಲು ನಿರ್ಧಾರ ಮಾಡಿದ್ದಾರೆ. ಪೋಟೋ ಶೂಟ್ ಸಮಯದಲ್ಲಿ ರೂಪೇಶ್ ಹಲವು ಭಂಗಿಗಳಲ್ಲಿ ನನ್ನ ಫೋಟೋಗಳನ್ನು ತೆಗೆದಿದ್ದಾನೆ. ಆ ಫೋಟೋಗಳನ್ನು ನನ್ನ ವಾಟ್ಸಪ್ ಕಳುಹಿಸಿ, ನನ್ನ ಜೊತೆ ಮಲಗಬೇಕು ಎಂದು ಕೇಳಿದ್ದಾನೆ. ಅದಕ್ಕೆ ನಾನು ಒಪ್ಪಲಿಲ್ಲ ಒಂದು ವೇಳೆ ನೀನು ಸಹಕರಿಸದಿದ್ದರೆ ನಿನ್ನ ಫೋಟೋಗಳನ್ನು ಮಾರ್ಪ್ ಮಾಡಿ ಸಾಮಾಜಿಕ ಜಾಲತಾಣಗಲ್ಲಿ ಅಪ್ಲೋಡ್ ಮಾಡುವುದಾಗಿ ಬೆದರಿಕೆ ಹಾಕಿದ್ದಾನೆ.

ಫ್ರೆಶ್ ನ್ಯೂಸ್

Latest Posts

Featured Videos