ನಟಿ ‘ನವನೀತ್’ ಈಗ ಸಂಸದೆ!

ನಟಿ ‘ನವನೀತ್’  ಈಗ   ಸಂಸದೆ!

ಮುಂಬೈ, ಮೇ. 28, ನ್ಯೂಸ್‍ ಎಕ್ಸ್ ಪ್ರೆಸ್‍:  ಕನ್ನಡದ ಖ್ಯಾತ ನಟ ದರ್ಶನ್‌ ಅವರ ಜೊತೆ ‘ದರ್ಶನ್‌’ ಚಿತ್ರದಲ್ಲಿ ನಟಿಸಿದ್ದ ನಟಿ ನವನೀತ್‌ ಕೌರ್‌ ರಾಣಾ ಇದೀಗ ಲೋಕಸಭೆಗೆ ಆಯ್ಕೆಯಾಗಿದ್ದಾರೆ.

ಯುವ ಸ್ವಾಭಿಮಾನ ಪಕ್ಷದ ಅಭ್ಯರ್ಥಿ ಅಮರಾವತಿ ಕ್ಷೇತ್ರದಲ್ಲಿ ಸ್ಪರ್ಧಿಸಿದ್ದ ನವನೀತ್‌, 2 ಬಾರಿ ಸಂಸದರಾಗಿ ಆಯ್ಕೆಯಾಗಿದ್ದ ಶಿವಸೇನೆಯ ಆನಂದ್‌ರಾವ್‌ ಅವರನ್ನು 36000 ಮತಗಳಿಂದ ಸೋಲಿಸಿ  ನವನೀತ್‌ ಅಚ್ಚರಿಯ ಗೆಲುವು ಸಾಧಿಸಿದ್ದಾರೆ. ನವನೀತ್‌ ಅವರ ಪತಿ ರವಿ ರಾಣಾ ಅಮರಾವತಿ ಕ್ಷೇತ್ರದಲ್ಲಿ ವಿಧಾನಸಭಾ ಸದಸ್ಯರಾಗಿದ್ದಾರೆ.   ಮುಂಬೈನಲ್ಲಿ ಜನಿಸಿದ ನವನೀತ್‌ ಕೌರ್‌ ತಂದೆ-ತಾಯಿ ಪಂಜಾಬ್‌ ಮೂಲದವರಾಗಿದ್ದು, ತಂದೆ ಸೇನಾಧಿಕಾರಿಯಾಗಿದ್ದರು. ಪಿಯುಸಿ ಅಧ್ಯಯನ ಅರ್ಧಕ್ಕೆ ಕೈಬಿಟ್ಟು ಮಾಡೆಲಿಂಗ್‌ ಕ್ಷೇತ್ರ ಪ್ರವೇಶಿಸಿ, ನಂತರ ಕನ್ನಡ, ತೆಲುಗು, ಮಲಯಾಳಿ, ಹಿಂದಿ ಮತ್ತು ಪಂಜಾಬಿ ಚಿತ್ರಗಳಲ್ಲಿ ಇವರು ನಟಿಸಿದ್ದಾರೆ.

ಫ್ರೆಶ್ ನ್ಯೂಸ್

Latest Posts

Featured Videos