ನಟಿ ಆ್ಯಮಿ ಮಗುವಿನ ಅಮ್ಮ

ನಟಿ ಆ್ಯಮಿ ಮಗುವಿನ ಅಮ್ಮ

ನವದೆಹಲಿ, ಸೆ. 24 : ಬಹುಭಾಷ ನಟಿ ಆ್ಯಮಿ ಈಗ ಗಂಡು ಮಗುವಿನ ಅಮ್ಮ. ಮದುವೆ ಮುನ್ನ ಗರ್ಭಿಣಿಯಾಗಿ ಎಲ್ಲರ ಹುಬ್ಬೇರುವಂತೆ ಮಾಡಿದ್ದ ಆ್ಯಮಿ, ಇದೀಗ ಗಂಡು ಮಗುವಿಗೆ ಜನ್ಮ ನೀಡುವ ಮೂಲಕ ಮತ್ತೊಮ್ಮೆ ಸುದ್ದಿಯಾಗಿದ್ದಾರೆ. ‘ಫೋಟೊದಲ್ಲಿ ಆ್ಯಮಿ ಬೆಡ್ ಮಲಗಿ ತಮ್ಮ ಮಗುವಿಗೆ ಹಾಲುಣಿಸುತ್ತಿದ್ದರೆ, ಭಾವಿ ಪತಿ ಜಾರ್ಜ್ ಪನಯೋಟು, ಆ್ಯಮಿ ಹಣೆಗೆ ಮುತ್ತಿಡುತ್ತಿದ್ದಾರೆ. ’ತಮ್ಮ ಮಗುವನ್ನು ಸ್ವಾಗತ ಮಾಡುತ್ತಿರುವ ಫೋಟೊವೊಂದನ್ನು ಇನ್ಸ್ಟಾಗ್ರಾಂನಲ್ಲಿ ಪೋಸ್ಟ್ ಮಾಡಿರುವ ಆ್ಯಮಿ, ಆಡ್ರಿಯಾಸ್ನನ್ನು ಪ್ರಪಂಚಕ್ಕೆ ಸ್ವಾಗತ ಮಾಡುತ್ತಿದ್ದೇವೆ ಎಂದು ಬರೆದುಕೊಂಡಿದ್ದಾರೆ. ಒಂದು ಗಂಟೆ ಹಿಂದಷ್ಟೇ ಫೋಟೊವನ್ನು ಅಪ್ಲೋಡ್ ಮಾಡಿದ್ದು, ಈವರೆಗೂ 3 ಲಕ್ಷಕ್ಕೂ ಹೆಚ್ಚು ಮಂದಿ ವೀಕ್ಷಣೆ ಮಾಡಿದ್ದಾರೆ. ಸ್ಟಾರ್ ದಂಪತಿಗೆ ಅಭಿನಂದನೆಗಳ ಮಹಾಪೂರವೇ ಹರಿದುಬರುತ್ತಿದೆ.
ಅವರೊಂದಿಗೆ ನಿಶ್ಚಿತಾರ್ಥವಾಗಿದ್ದ ಸುದ್ದಿಯನ್ನು ತಮ್ಮ ಇನ್ಸ್ಟಾಗ್ರಾಂನಲ್ಲಿ ಜಾಕ್ಸನ್ ಹಂಚಿಕೊಂಡು ಅಭಿಮಾನಿಗಳಿಗೆ ಸಿಹಿ ಸುದ್ದಿಯನ್ನು ನೀಡಿದ್ದರು. ಅಲ್ಲದೆ, ನಿಶ್ಚಿತಾರ್ಥದ ಬಳಿಕ ಆಫ್ರಿಕಾ ಪ್ರವಾಸ ಮಾಡಿ ಸಖತ್ ಎಂಜಾಯ್ ಮಾಡಿದ್ದರು. ಇದಕ್ಕೆ ಸಂಬಂಧಿಸಿದ ಪೋಟೋಗಳನ್ನು ಹಂಚಿಕೊಂಡಿದ್ದರು.

ಫ್ರೆಶ್ ನ್ಯೂಸ್

Latest Posts

Featured Videos