ಮತ್ತೆ ಬಣ್ಣದ ಲೋಕಕ್ಕೆ ನಟಿ ಅಭಿನಯ ಎಂಟ್ರಿ!

ಮತ್ತೆ ಬಣ್ಣದ ಲೋಕಕ್ಕೆ ನಟಿ ಅಭಿನಯ ಎಂಟ್ರಿ!

ಬೆಂಗಳೂರು, ಮೇ. 22, ನ್ಯೂಸ್ ಎಕ್ಸ್ ಪ್ರೆಸ್:  7 ವರ್ಷಗಳಿಂಡ ಸ್ಯಾಂಡಲ್ ವುಡ್ ನಿಂದ ದೂರವಾಗಿದ್ದ ಹಿರಿಯ ನಟಿ ಅಭಿನಯ ಮತ್ತೆ ಚಿತ್ರರಂಗಕ್ಕೆ ಮರಳುತ್ತಿದ್ದಾರೆ. ನಿರ್ದೇಶಕ ಪ್ರದೀಪ್ ರಾಜ್ ಹಾಗೂ ಲೋಹಿತ್ ಸಂಪರ್ಕದಲ್ಲಿದ್ದ ಅಭಿ ಇದೀಗ ತಾವು ಸ್ವತಂತ್ರವಾಗಿ ಫೀಚರ್ ಫಿಲ್ಮ್ ಒಂದರ ತಯಾರಿ ನಡೆಸಿದ್ದಾರೆ.  ಈ ಚಿತ್ರದ ಮೂಲಕ ಅಭಿನಯ ಮತ್ತೆ ಬಣ್ಣದ ಲೋಕಕ್ಕೆ ಮರಳುತ್ತಿದ್ದಾರೆ.

“ಕ್ರಶ್”ಎಂಬ ಹೆಸರಿನ ಈ ಚಿತ್ರದಲ್ಲಿ “ರಂಗ್ ಬಿ ರಂಗಿ” ಖ್ಯಾತಿಯ ಆರ್ಯ ಹಾಗೂ ಹೊಸ ಪ್ರತಿಭೆ ಪ್ರತಿಭಾ ಈ ಚಿತ್ರದ ಮುಖ್ಯ ತಾರಾಂಗಣದಲ್ಲಿದ್ದಾರೆ. ಅಭಿನಯ ಈ ಚಿತ್ರದಲ್ಲಿ ತಾಯಿಯ ಪಾತ್ರ ಮಾಡುತ್ತಿದ್ದು ಅವರಾಗಲೇ ಏಳು ದಿನಗಳ ಶೂಟಿಂಗ್ ಮುಗಿಸಿದ್ದಾರೆ. “ಕ್ರಶ್” ಗೆ ವಿನೀತ್ ರಾಜ್ ಮೆನನ್ ಸಂಗೀತ ನೀಡಿದ್ದರೆ ಸತೀಶ್ ಛಾಯಾಗ್ರಹಣವಿದೆ. ಇದಾಗಲೇ ಶೇ. 50 ಭಾಗದ ಚಿತ್ರೀಕರಣ ಮುಗಿಸಿರುವ  ಮುಂದಿನ ಹಂತದ ಶೂಟಿಂಗ್ ಮುಂಬರುವ ವಾರದಲ್ಲಿ ಮಂಗಳೂರಿನಲ್ಲಿ ನಡೆಯಲಿದೆ.

ಫ್ರೆಶ್ ನ್ಯೂಸ್

Latest Posts

Featured Videos