ನಟ ರಾಣಾಗೆ ತಾಯಿಯಿಂದಲೇ ಮೂತ್ರಪಿಂಡ ದಾನ

ನಟ ರಾಣಾಗೆ ತಾಯಿಯಿಂದಲೇ ಮೂತ್ರಪಿಂಡ ದಾನ

ಚೆನ್ನೈ,ಜು. 22 : ಕಿಡ್ನಿ ಸಮಸ್ಯೆಯಿಂದ ಬಳಲುತ್ತಿದ್ದ ಟಾಲಿವುಡ್ ನಟ ರಾಣಾ ದಗ್ಗುಬಾಟಿ ಅವರ ಕುಟುಂಬದವರೊಂದಿಗೆ ಷಿಕಾಗೋಗೆ ತೆರಳಿದ್ದರು. ಅವರ ಆರೋಗ್ಯ ಹದಗೆಟ್ಟಿದ್ದರಿಂದಾಗಿ ಅವರಿಗೆ ತಕ್ಷಣ ಮೂತ್ರಪಿಂಡ ಕಸಿ ಅಗತ್ಯವಿತ್ತು. ಮೂಲಗಳ ಪ್ರಕಾರ ಇದೀಗ ರಾಣಾ ಅವರಿಗೆ ಮೂತ್ರಪಿಂಡ ಕಸಿ ಶಸ್ತ್ರ ಚಿಕಿತ್ಸೆಯು ಯಶಸ್ವಿಯಾಗಿದೆ.
ರಾಣಾ ಅವರ ತಾಯಿ ಲಕ್ಷ್ಮಿ ಅವರೇ ತಮ್ಮ ಮೂತ್ರಪಿಂಡವನ್ನು ದಾನ ಮಾಡಿದ್ದು, ಕಿಡ್ನಿ ಶಸ್ತ್ರಚಿಕಿತ್ಸೆಯು ಯಶಸ್ವಿಯಾಗಿ ನಡೆದಿದ್ದು, ರಾಣಾ ಅಪಾಯದಿಂದ ಪಾರಾಗಿದ್ದಾರೆ.  ಖಾಸಗಿ ಆಸ್ಪತ್ರೆಯಲ್ಲಿ ಕಿಡ್ನಿ ಕಸಿ ಶಸ್ತ್ರ ಚಿಕಿತ್ಸೆ ನಡೆದಿದೆ ಎನ್ನಲಾಗುತ್ತಿದೆ. ಅವರು ಕನಿಷ್ಠ ಒಂದು ತಿಂಗಳಾದರೂ ವಿಶ್ರಾಂತಿ ಪಡೆಯುವ ಅಗತ್ಯವಿದ್ದು, ಸೆಪ್ಟೆಂಬರ್‌ನಲ್ಲಿ ಮರಳಿ ಚಿತ್ರೀಕರಣದಲ್ಲಿ ಪಾಲ್ಗೊಳ್ಳಲಿದ್ದಾರೆ ಎನ್ನಲಾಗಿದೆ.

ಸದ್ಯ ರಾಣಾ ವೆನು ಉದುಗಳ ನಿರ್ದೇಶನದ ‘ವಿರಾಟ ಪರ್ವ’ ಸಿನಿಮಾದಲ್ಲಿ ಪೊಲೀಸ್​ ಅಧಿಕಾರಿಯಾಗಿ ಅಭಿನಯಿಸುತ್ತಿದ್ದು, ಇದರಲ್ಲಿ ಸಾಯಿ ಪಲ್ಲವಿ ನಾಯಕಿಯಾಗಿದ್ದಾರೆ.

ಫ್ರೆಶ್ ನ್ಯೂಸ್

Latest Posts

Featured Videos