ನರ್ಮದಾ ವೈನಿ ನಿಧನ

ನರ್ಮದಾ ವೈನಿ ನಿಧನ

ಮಾ.19, ನ್ಯೂಸ್ ಎಕ್ಸ್ ಪ್ರೆಸ್: ‘ದಿಕ್ಕು’ ಎಂಬ ಯೋಜನೆ ರೂಪಿಸಿ ನೂರಾರು ಬಡಮಕ್ಕಳ ಬದುಕಿಗೆ ಹೊಸ ದಿಕ್ಕು ತೋರಿದ ನರ್ಮದಾ ವೈನಿ ಇನ್ನಿಲ್ಲ.

ಕೊಳಗೇರಿ ಮಕ್ಕಳ ಬದುಕನ್ನು ಬೆಳಗುವ ಉದಾತ್ತ ಉದ್ದೇಶ ಹೊತ್ತ ‘ದಿಕ್ಕು’ ಯೋಜನೆಯ ಬಗ್ಗೆ ಅವರಿಗಿದ್ದ ಕಾಳಜಿ ಅವರ ಮಾತುಗಳಲ್ಲೇ ವ್ಯಕ್ತವಾಗುತ್ತಿತ್ತು.

ವಯಸ್ಸು 50ರ ಆಸುಪಾಸು ಅಷ್ಟೆ! ಕಳೆದ 15 ದಿನಗಳಿಂದ ಅನಾರೋಗ್ಯದಿಂದ ಬಳಲುತ್ತಿದ್ದ ಅವರು ಬಹುಅಂಗಾಂಗ ವೈಫಲ್ಯದಿಂದ ರ ನಿಧನರಾದರು. ಅದುವರೆಗೂ ಯಾವುದೇ ಆರೋಗ್ಯ ಸಂಬಂಧೀ ಸಮಸ್ಯೆ ಇಲ್ಲದೆ ಇದ್ದ ಅವರ ಅಕಾಲಿಕ, ಅನಿರೀಕ್ಷಿತ ಮರಣಕ್ಕೆ ಸ್ಪಷ್ಟ ಕಾರಣ ತಿಳಿದುಬಂದಿಲ್ಲ.

ಕನ್ನಡದ ಪ್ರಸಿದ್ಧ ಸಾಹಿತಿ, ವಿಮರ್ಶಕ ಕೀರ್ತಿನಾಥ ಕುರ್ತಕೋಟಿ ಅವರ ಸೊಸೆ, ನರ್ಮದಾ ಕುರ್ತಕೋಟಿ ಅವರು, ಮಾವನವರ ಸಾಮಾಜಿಕ ಆಶಯಗಳನ್ನು ಜೀವಂತವಾಗಿರಿಸುವ ಸಲುವಾಗಿ, ತಮ್ಮ ಕುಟುಂಬದೊಟ್ಟಿಗೆ ಸೇರಿ ‘ಕುರ್ತಕೋಟಿ ಮೆಮೊರಿಯಲ್ ಟ್ರಸ್ಟ್’ ಸಂಸ್ಥೆಯನ್ನು ಹುಟ್ಟುಹಾಕಿದ್ದರು.

ಈ ಟ್ರಸ್ಟ್ ಮೂಲಕ ವಿವಿಧ ಪುಸ್ತಕಗಳನ್ನು ಹೊರತಂದು ಅದರಿಂದ ಬಂದ ಹಣವನ್ನು ಕೊಳಗೇರಿ ಮಕ್ಕಳ ಬದುಕಿಗೆ ನೆರವಾಗಲು ವಿನಿಯೋಗಿಸುವ ‘ದಿಕ್ಕು’ ಯೋಜನೆಯನ್ನು ಜಾರಿಗೆ ತಂದಿದ್ದರು.

ಸದಾ ಹಸನ್ಮುಖಿ ನರ್ಮದಾ ರಾಮಣ್ಣ ಕುರ್ತಕೋಟಿ ಅವರ ಲವಲವಿಕೆಯ ಮಾತು, ಜೀವನೋಲ್ಲಾಸ ಸ್ಫುರಿಸುವ ಕಣ್ಣುಗಳು, ಕೊಳಗೇರಿ ಮಕ್ಕಳಿಗಾಗಿ ಬಿಸಿಲು, ಮಳೆ ಎನ್ನದೆ ಜೋಳಿಗೆ ಹಾಕಿ ಓಡಾಡುತ್ತಿದ್ದ ಸಾಮಾಜಿಕ ಕಾಳಜಿ ಎಲ್ಲವೂ ಇನ್ನು ನೆನಪು ಮಾತ್ರ.

 

ಫ್ರೆಶ್ ನ್ಯೂಸ್

Latest Posts

Featured Videos