‘ನಾರಿ ಮುನಿದರೆ ಮಾರಿ’

‘ನಾರಿ ಮುನಿದರೆ ಮಾರಿ’

ಮುಳಗುಂದ, ಡಿ. 3 : ‘ನಾರಿ ಮುನಿದರೆ ಮಾರಿ’ ಮುಳಗುಂದ ಮಹಿಳೆಯರು ಸಾಬೀತು ಮಾಡಿದ್ದಾರೆ. ಗಂಡಂದಿರ ಕುಡಿತದ ಚಟದಿಂದ ಬೇಸತ್ತ ಪತ್ನಿಯರು ಅಕ್ರಮ ಮದ್ಯ ಮಾರಾಟ ಮಾಡುವವರನ್ನೇ ಅಟ್ಟಾಡಿಸಿಕೊಂಡು ಹೊಡೆದ ಘಟನೆ ಸಮೀಪದ ಹೊಸೂರು ಗ್ರಾಮದಲ್ಲಿ ನಡೆದಿದ್ದು, ಶಿದ್ಧಲಿಂಗೇಶ್ವರ, ಅಂಬೇಡ್ಕರ್, ವಾಲ್ಮೀಕಿ, ನೇತ್ರಾವತಿ, ಗ್ರಾಮದೇವತೆ, ಪಾವನಗಂಗಾ ಮಹಿಳಾ ಸ್ವಸಹಾಯ ಗುಂಪುಗಳು ಹಾಗೂ ಇತರ ಮಹಿಳಾ ಸಂಘಟನೆಗಳು ಸೇರಿಕೊಂಡು ಅಕ್ರಮವಾಗಿ ಮದ್ಯ ಮಾರುವವರ ವಿರುದ್ಧ ಸಮರ ಸಾರಿದರು.
ಮದ್ಯ ಮಾರುತ್ತಿದ್ದವರ ಮನೆಗೆ ನುಗ್ಗಿ ಅಕ್ರಮವಾಗಿ ಸಂಗ್ರಹಿಸಿದ್ದ ಬಗೆಬಗೆಯ ಮದ್ಯದ ಪ್ಯಾಕೆಟ್ಗಳನ್ನು ಹೊರಗೆ ತಂದು ಬೀದಿಗೆ ಹಾಕಿದರು.

ಫ್ರೆಶ್ ನ್ಯೂಸ್

Latest Posts

Featured Videos