ನರೇಂದ್ರ ಮೋದಿ ಕ್ರೀಡಾಂಗಣದಲ್ಲಿ ವಿಶ್ವಕಪ್‌ ಟೂರ್ನಿ

ನರೇಂದ್ರ ಮೋದಿ ಕ್ರೀಡಾಂಗಣದಲ್ಲಿ ವಿಶ್ವಕಪ್‌ ಟೂರ್ನಿ

ಇತ್ತೀಚಿನ ದಿನಗಳಲ್ಲಿ ಕ್ರಿಕೆಟ್ ಒಂದು ಹೆಸರಾಂತ ಕ್ರೀಡೆಯಾಗಿದೆ. ಈ ಕ್ರೀಡೆಯನ್ನು ಚಿಕ್ಕ ಮಕ್ಕಳಿಂದ ಹಾಗೂ ದೊಡ್ಡವರು ಸಹ ಹೆಚ್ಚಾಗಿ ಇಷ್ಟಪಡುತ್ತಿದ್ದಾರೆ. ವಿಶ್ವಕಪ್ ಟೂರ್ನಿ ಇನ್ನೇನು ಕೆಲವೇ ದಿನಗಳಲ್ಲಿ ಪ್ರಾರಂಭವಾಗಲಿದೆ.
ಭಾರತದ ಹೆಮ್ಮೆಯ ಕ್ರೀಡಾಂಗಣ ಎಂದು ಹೆಸರು ಪಡೆದುಕೊಂಡಿರುವ ನರೇಂದ್ರ ಮೋದಿ ಸ್ಟೇಡಿಯಂನಲ್ಲಿ ಐಸಿಸಿ ಏಕದಿನ ವಿಶ್ವಕಪ್ ಪ್ರಾರಂಭವಾಗುವ ಒಂದು ದಿನದ ಮೊದಲು ಉದ್ಘಾಟನಾ ಸಮಾರಂಭವನ್ನು ಆಯೋಜಿಸಲಾಗಿದೆ. ಅಕ್ಟೋಬರ್ 4 ರಂದು ಅದ್ಧೂರಿ ಓಪನಿಂಗ್ ಸೆರಮನಿ ನಡೆಯಲಿದೆ ಭಾರತದ ಹೆಮ್ಮೆಯ ಕ್ರೀಡಾಂಗಣ ಎಂದು ಹೆಸರು ಪಡೆದುಕೊಂಡಿದೆ.
ಕಳೆದ ವರ್ಷ, ಆಸ್ಟ್ರೇಲಿಯಾದಲ್ಲಿ 2022ರ ಟಿ 20 ವಿಶ್ವಕಪ್ ಪ್ರಾರಂಭವಾಗುವ ಮೊದಲು ಎಲ್ಲಾ ನಾಯಕರು ಜಂಟಿಯಾಗಿ ಮಾಧ್ಯಮಗಳನ್ನು ಉದ್ದೇಶಿಸಿ ಮಾತನಾಡಿದ್ದರು. ಐಸಿಸಿ ಈ ವರ್ಷವೂ ಇದೇ ರೀತಿಯ ಪ್ಲಾನ್ ಆಯೋಜಿಸಿದೆ. ಉದ್ಘಾಟನಾ ಸಮಾರಂಭಕ್ಕೆ ಎಲ್ಲ ತಂಡದ ನಾಯಕರು ಹಾಜರಿರುವ ಸಾಧ್ಯತೆ ಇದೆ.
12 ವರ್ಷಗಳ ಕಾಯುವಿಕೆಯ ನಂತರ ಐಸಿಸಿ ಏಕದಿನ ವಿಶ್ವಕಪ್‌ ಭಾರತಕ್ಕೆ ಮರಳಿದೆ. ಅಕ್ಟೋಬರ್-ನವೆಂಬರ್ ನಲ್ಲಿ ನಡೆಯಲಿರುವ ಟೂರ್ನಿಗೆ ಇದೇ ಮೊದಲ ಬಾರಿ ದೇಶವು ಸಂಪೂರ್ಣವಾಗಿ ಆತಿಥ್ಯ ವಹಿಸುತ್ತದೆ.
ಇದೀಗ ಏಕದಿನ ವಿಶ್ವಕಪ್‌ನ 11 ನೇ ಆವೃತ್ತಿಯು ಅಕ್ಟೋಬರ್ 5 ರಿಂದ ನವೆಂಬರ್ 19 ರವರೆಗೆ ದೇಶದ ವಿವಿಧ ಮೈದಾನದಲ್ಲಿ ನಡೆಯಲಿದೆ. ಅಹಮದಾಬಾದ್ನಾ ನರೇಂದ್ರ ಮೋದಿ ಕ್ರೀಡಾಂಗಣ ಅಕ್ಟೋಬರ್ 14 ರಂದು ಭಾರತ ಮತ್ತು ಪಾಕಿಸ್ತಾನ ನಡುವಿನ ಆರಂಭಿಕ ಪಂದ್ಯ, ಫೈನಲ್ ಪಂದ್ಯಕ್ಕೆ ಸಾಕ್ಷಿಯಾಗಲಿದೆ.
ವರದಿಗಾರ.ಕೋಲಾರ ರೆಡ್ಡಿ

ಫ್ರೆಶ್ ನ್ಯೂಸ್

Latest Posts

Featured Videos