ಆರ್ ಬಿಐ ಸಮ್ಮತಿ ಇಲ್ಲದೇ ನೋಟು ನಿಷೇಧ!

ಆರ್ ಬಿಐ ಸಮ್ಮತಿ ಇಲ್ಲದೇ ನೋಟು ನಿಷೇಧ!

ನವದೆಹಲಿ, ಮಾ.11, ನ್ಯೂಸ್ ಎಕ್ಸ್ ಪ್ರೆಸ್: ಪ್ರಧಾನಿ ನರೇಂದ್ರ ಮೋದಿ ಕೈಗೊಂಡಿದ ನೋಟು ನಿಷೇಧದ ಕ್ರಮದಿಂದ ಅದೆಷ್ಟು ಬಡಜನರು ಬ್ಯಾಂಕ್‍ ಮುಂದೆ ಸಾಲಿನಲ್ಲಿ ನಿಂತು ತಮ್ಮ ಪ್ರಾಣ ಕಳೆದುಕೊಂಡು ಬೀದಿಗೆ ಬಿದ್ದಿದರು. ಅಕ್ಷರಶಃ ಇಡೀ ಭಾರತದ ಜನರನ್ನು ನೋಟು ನಿಷೇಧದಿಂದ, ತಮ್ಮ ಹಣವನ್ನು ಪಡೆಯಲು ಬ್ಯಾಂಕ್‍ ನ ಮುಂದೆ ಸರತಿ ಸಾಲಿನಲ್ಲಿ ನಿಲ್ಲುವಂತೆ ಮಾಡಿತ್ತು. ಈ ನೋಟು ನಿಷೇಧದಿಂದ ಅನುಕೂಲಕ್ಕಿಂತ ಅನಾನುಕೂಲವೇ ಹೆಚ್ಚಾಗಿದೆ ಹೇಳಬಹುದು. ಆದರೆ, ಇದೀಗ ನೋಟು ನಿಷೇಧದಕ್ಕೆ ಸಂಬಂಧಿಸಿದಂತೆ ಅಘಾತಕಾರಿ ಸತ್ಯ ಹೊರಬಿದ್ದಿದೆ.

ಅದು ಲೋಕಸಭೆ ಚುನಾವಣೆಗೆ ದಿನಾಂಕ ನಿಗದಿಯಾಗಿರುವಂತೆಯೇ ಈ ಆಘಾತಕಾರಿ ಸುದ್ದಿ ಎದುರಾಗಿದ್ದು ಪ್ರಧಾನಿ ಮೋದಿಗೆ ಹಿನ್ನಡೆ ಉಂಟಾಗುವ ಸಾಧ್ಯತೆ ಇದೆ ಎನ್ನಲಾಗಿದೆ. ಭಾರತೀಯ ರಿಸರ್ವ್ ಬ್ಯಾಂಕ್ (ಆರ್ಬಿಐ) ನಿರ್ದೇಶಕ ಮಂಡಳಿ ಸಮ್ಮತಿ ಸೂಚಿಸುವ ಮೊದಲೇ ಮೋದಿಯವರು ನೋಟು ನಿಷೇಧದ ಘೋಷಣೆ ಮಾಡಿದ್ದರು ಎಂದು ಇದೀಗ ಬಹಿರಂಗವಾಗಿರುವ ಮಾಹಿತಿ ಲಭ್ಯವಾಗಿದೆ.

ಭಾರತೀಯ ರಿಸರ್ವ್ ಬ್ಯಾಂಕಿನ ನಿರ್ದೇಶಕ ಮಂಡಳಿಯ ಅನುಮೋದನೆಗೆ ಕಾಯದೆ, 2016ರ ನವೆಂಬರ್ ನಲ್ಲಿ ಪ್ರಧಾನಿ ಮೋದಿ ರೂ. 500 ಮತ್ತು ರೂ. 1000 ಮುಖಬೆಲೆಯ ನೋಟುಗಳನ್ನು ನಿಷೇಧ ಮಾಡಿದ್ದರು ಎನ್ನುವ ಸಂಗತಿ ಆರ್ಟಿಐ ಅಡಿಯಲ್ಲಿ ಕೇಳಲಾದ ಮಾಹಿತಿಯಿಂದ ತಿಳಿದುಬಂದಿದೆ.

ಆರ್ಬಿಐ ನಿರ್ದೇಶಕ ಮಂಡಳಿಯು ನವೆಂಬರ್ 8ರಂದು ನೋಟು ರದ್ದತಿ ಘೋಷಣೆ ಹೊರ ಬೀಳುವ ಎರಡೂವರೆ ಗಂಟೆಗಳ ಮೊದಲು ಸಭೆ ಸೇರಿತ್ತು. ಈ ಸಭೆಯು ಹಣಕಾಸು ಸಚಿವಾಲಯದ ಕರಡು ಪ್ರಸ್ತಾವ ಚರ್ಚೆಗೆ ತೆಗೆದುಕೊಂಡು ಅನುಮೋದನೆ ನೀಡುವ ಮುನ್ನವೇ ಮೋದಿಯವರು ನೋಟು ನಿಷೇಧದ ಬಗ್ಗೆ ಘೋಷಣೆ ಹೊರಡಿಸಿದ್ದರು!

ನೋಟು ನಿಷೇಧದ ಪರ ಸರ್ಕಾರ ಮಂಡಿಸಿದ ಬಹುತೇಕ ವಾದಗಳನ್ನು ನಿರ್ದೇಶಕ ಮಂಡಳಿ ಅನುಮೋದನೆ ಮಾಡಿರಲಿಲ್ಲ. ಕಪ್ಪು ಹಣ ಚಲಾವಣೆಯಲ್ಲಿರುವ ನೋಟುಗಳ ಬದಲಿಗೆ, ಬದಲಿಗೆ ರಿಯಲ್ ಎಸ್ಟೇಟ್ ಮತ್ತು ಚಿನ್ನದ ರೂಪದಲ್ಲಿದೆ. ಹೀಗಾಗಿ ನೋಟು ರದ್ದತಿ ಅಂತಹ ಪರಿಣಾಮ ಬೀರುವುದಿಲ್ಲ. ಇದು ದೇಶದ ಆರ್ಥಿಕ ಬೆಳವಣಿಗೆ ಮೇಲೆ ಕೆಟ್ಟ ಪರಿಣಾಮ ಬೀರಲಿದೆ ಎಂದು ಆರ್.ಬಿ.ಐ. ನಿರ್ದೇಶಕರು ಹೇಳಿದ್ದರು ಎನ್ನಲಾಗಿದೆ.

ನರೇಂದ್ರ ಮೋದಿ ನೋಟು ರದ್ದತಿ ಘೋಷಣೆ ಮಾಡಿದ್ರುವ ಮಾಹಿತಿ ಪಡೆಯಲು ನಿರ್ದೇಶಕ ಮಂಡಳಿಯ ಸಭಾ ನಡಾವಳಿ ವಿವರ ಕೇಳಿ ಆರ್ಬಿಐಗೆ ಆರ್ ಟಿ ಐ ಕಾರ್ಯಕರ್ತ ವೆಂಕಟೇಶ್ ನಾಯಕ್ ಅರ್ಜಿ ಸಲ್ಲಿಸಿ ಮನವಿ ಮಾಡಿದ್ದರು. ಮೊದಲಿಗೆ ಈ ಮಾಹಿತಿಯನ್ನು ನೀಡಲು ನಿರಾಕರಿಸಿದ್ದು, ನಂತರದಲ್ಲಿ ಈ ವಿವರಗಳನ್ನು ಬಹಿರಂಗಪಡಿಸಲಾಗಿದೆ. ಇದೀಗ ಚುನಾವಣೆ ಸಂದರ್ಭದಲ್ಲಿ ಈ ಅಪಘಾತಕಾರಿ ಸುದ್ದಿ ಬಯಲಿಗೆ ಬಂದಿದ್ದು, ಇದು ವಿಪಕ್ಷಗಳಿಗೆ ಮೋದಿ ವಿರುದ್ಧ ಮತ್ತೂಂದು ಚುನಾವಣಾ ಅಜೆಂಡಾ ಲಭಿಸಿದೆ ಎಂದು ಹೇಳಲಾಗುತ್ತಿದೆ.

ಫ್ರೆಶ್ ನ್ಯೂಸ್

Latest Posts

Featured Videos