ಮಗವಿನ ಹೆಸರು ‘ನರೇಂದ್ರ ಮೋದಿ’ ಅಲ್ಲ ಅಲ್ತಾಫ್ ಮೋದಿ!

ಮಗವಿನ ಹೆಸರು ‘ನರೇಂದ್ರ ಮೋದಿ’ ಅಲ್ಲ ಅಲ್ತಾಫ್  ಮೋದಿ!

ಲಕ್ನೋಮೇ. 30, ನ್ಯೂಸ್‍ ಎಕ್ಸ್ ಪ್ರೆಸ್‍: ಲೋಕಸಭೆ ಚುನಾವಣೆ ಫಲಿತಾಂಶದ ದಿನ, ಮೇ 23 ರಂದು ಉತ್ತರ ಪ್ರದೇಶದ ಗೊಂಡಾ ಜಿಲ್ಲೆಯ ವಝೀರ್ ಗಂಜ್ ಪರ್ಸಾಪುರ ಎಂಬ ಹಳ್ಳಿಯಲ್ಲಿ ಮುಸ್ಲಿಂ ದಂಪತಿಗೆ ಗಂಡುಮಗುವೊಂದು ಜನಿಸಿತ್ತು.  ಆ ಮಗುವಿಗೆ  ‘ನರೇಂದ್ರ ದಾಮೋದರ ದಾಸ್ ಮೋದಿ’ ಎಂದು ಪತಿ-ಪತ್ನಿ ನಾಮಕರಣ ಮಾಡಿದ್ದರು.

ಮೋದಿ ಅವರ ವರ್ಚಸ್ಸಿನಿಂದ ಪ್ರೇರಿತರಾಗಿ ನವಜಾತ ಶಿಶುವಿಗೆ ಅವರ ಹೆಸರನ್ನೇ ಇರಿಸಿದ್ದ ಮುಸ್ಲಿಂ ಕುಟಂಬ, ತನ್ನ ಸಂಬಂಧಿಕರ ಒತ್ತಡಕ್ಕೆ ಮಣಿದು ಹೆಸರನ್ನು ಬದಲಾಯಿಸಿದೆ. ಹಿಂದು ಹೆಸರಿನ ಬದಲು ‘ ಮೊಹಮ್ಮದ್‌ ಅಲ್ತಾಫ್‌ ಆಲಂ ಮೋದಿ’ ಎಂದು ತಾಯಿ ಮೆಹನಾಜ್‌ ಬೇಗಂ ಮಗುವಿನ ಹೆಸರನ್ನು ಬದಲಾಯಿಸಿದ್ದಾರೆ.  ಹಿಂದು ಹೆಸರಿಟ್ಟ ಕಾರಣ ಕೆಲವು ಸಂಬಂಧಿಕರು ನಾಮಕರಣ ಕಾರ್ಯಕ್ರಮಕ್ಕೆ ಬರಲು  ಹಿಂಜರಿದಿದ್ದರು. ಹಾಗಾಗಿ ಮಗು ದೊಡ್ಡವನಾದ ಅವನ ಹೆಸರಿನಿಂದಾಗಿ ಅವನಿಗೆ ಮತ್ತಷ್ಟು ಮುಜುಗರ ಉಂಟಾಗಬಾರದು ಎಂಬ ಕಾರಣಕ್ಕೆ ಹೆಸರು ಬದಲಾಯಿಸಿದೆ ಎಂದು ಬೇಗಂ ಹೇಳಿದ್ದಾರೆ.

ಫ್ರೆಶ್ ನ್ಯೂಸ್

Latest Posts

Featured Videos