ಮಾದಕ ವಸ್ತು ಮಾರಾಟ ನೈಜೀರಿಯಾ ಪ್ರಜೆ ಅರೆಸ್ಟ್

ಮಾದಕ ವಸ್ತು ಮಾರಾಟ ನೈಜೀರಿಯಾ ಪ್ರಜೆ ಅರೆಸ್ಟ್

ಬೆಂಗಳೂರು, ನ. 23: ಮಾದಕ ವಸ್ತುಗಳನ್ನು ಮಾರಾಟ ಮಾಡುತ್ತಿದ್ದ ನೈಜೀರಿಯಾ ಪ್ರಜೆಯನ್ನು ಸಿಸಿಬಿ ಪೊಲೀಸರು ಬಂಧಿಸಿ 2 ಲಕ್ಷ ರೂ.ಮೌಲ್ಯದ ಗಾಂಜಾ ಮತ್ತಿತರ ವಸ್ತುಗಳನ್ನು ವಶಪಡಿಸಿಕೊಂಡಿದ್ದಾರೆ.

ನೈಜೀರಿಯಾದ ಇಜಿಕಿ ನೆಗ್ವ್ಯೂ ಬಂಧಿತ ಆರೋಪಿಯಿಂದ ಒಂದು ಕೆಜಿ ಗಾಂಜಾ, 20 ಗ್ರಾಂ ಕೊಕೈನ್, ಎರಡು ಮೊಬೈಲ್, ತೂಕದ ಯಂತ್ರ, ಒಂದು ಸಾವಿರ ಹಣ ವಸ್ತುಗಳನ್ನು ವಶಪಡಿಸಿಕೊಂಡಿದ್ದಾರೆ.

ಬಾಗಲೂರು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಲಾಗಿದೆ. ಬಾಗಲೂರು ವ್ಯಾಪ್ತಿಯ ಕರಗದಮ್ಮ ನಿಲಯ, 3 ಮಹಡಿಯಲ್ಲಿ ವಾಸವಾಗಿದ್ದ ಆರೋಪಿ ವಿವಿಧ ರೀತಿಯ ಮಾದಕ ವಸ್ತುಗಳನ್ನು ಮನೆಯಲ್ಲಿಟ್ಟುಕೊಂಡು ಮಾರಾಟ ಮಾಡಲು ಸಜ್ಜಾಗಿದ್ದನು.

ಮಾಹಿತಿ ಪಡೆದ ಸಿಸಿಬಿ ಘಟಕದ ಮಾದಕ ದ್ರವ್ಯ ನಿಗ್ರಹ ದಳದ ಅಧಿಕಾರಿಗಳು ದಾಳಿ ಮಾಡಿ ನೈಜೀರಿಯಾ ಪ್ರಜೆಯನ್ನು ಬಂಧಿಸಿ ಮಾದಕ ವಸ್ತುಗಳನ್ನು ವಶಪಡಿಸಿಕೊಂಡಿದ್ದಾರೆ. ಈತನಿಗೆ ನೈಜೀರಿಯಾದ ಮತ್ತೊಬ್ಬ ವ್ಯಕ್ತಿ ಸೈ ಇಗ್ಬು ಎಂಬಾತ ಮಾದಕ ವಸ್ತುಗಳನ್ನು ಕಡಿಮೆ ಬೆಲೆಗೆ ನೀಡುತ್ತಿದ್ದನೆಂದು ಪೊಲೀಸರು ತಿಳಿಸಿದ್ದಾರೆ

 

ಫ್ರೆಶ್ ನ್ಯೂಸ್

Latest Posts

Featured Videos