ಮತ ಚಲಾಯಿಸಿದ ನಾರಾಯಣ ಮೂರ್ತಿ ದಂಪತಿ

ಮತ ಚಲಾಯಿಸಿದ ನಾರಾಯಣ ಮೂರ್ತಿ ದಂಪತಿ

ಬೆಂಗಳೂರು: ಇಂದು ನಡೆಯುತ್ತಿರುವ ಲೋಕಸಭಾ ಚುನಾವಣೆಯಲ್ಲಿ ಸಕ್ರಿಯವಾಗಿ ಭಾಗವಹಿಸಿದ್ದಾರೆ. ಕರ್ನಾಟಕ ರಾಜ್ಯವು ಪ್ರಸ್ತುತ ಮೊದಲನೇ ಹಂತದ ಮತದಾನದಲ್ಲಿ ತೊಡಗಿದ್ದು, 14 ಲೋಕಸಭಾ ಸ್ಥಾನಗಳಿಗೆ ಇಂದು ಚುನಾವಣೆ ನಡೆಯುತ್ತಿದೆ.

ಇಂದು ಇನ್ಫೋಸಿಸ್ ಸಂಸ್ಥಾಪಕ ನಾರಾಯಣ ಮೂರ್ತಿ ಹಾಗೂ ಅವರ ಪತ್ನಿ ಸುಧಾಮೂರ್ತಿ ಬೆಂಗಳೂರು ದಕ್ಷಿಣ ವಿಧಾನಸಭಾ ಕ್ಷೇತ್ರದ ಭಾರತೀಯ ವಿದ್ಯಾ ಸಂಸ್ಥೆ ಮತಗಟ್ಟೆಯಲ್ಲಿ ತಮ್ಮ ಮತದಾನದ ಹಕ್ಕನ್ನು ಚಲಾಯಿಸಿದ್ದಾರೆ.

ಮತದಾನ ಮಾಡಿದ ಬಳಿಕ ಮಾಧ್ಯಮಗಳಿಗೆ ಪ್ರತಿಕ್ರಿಯೆ ನೀಡಿದ ಸುಧಾಮೂರ್ತಿ, “ನಾನು ಎಲ್ಲರಿಗೂ ಹೇಳಲು ಬಯಸುತ್ತೇನೆ – ಮನೆಯಲ್ಲಿ ಕುಳಿತುಕೊಳ್ಳಬೇಡಿ, ಹೊರಗೆ ಬಂದು ಮತ ಚಲಾಯಿಸಿ. ನಿಮ್ಮ ನಾಯಕನನ್ನು ನೀವೇ ಆಯ್ಕೆ ಮಾಡಿ. ಗ್ರಾಮೀಣ ಪ್ರದೇಶದವರಿಗೆ ಹೋಲಿಸಿದರೆ ನಗರದ ಜನರು ಕಡಿಮೆ ಮತ ಚಲಾಯಿಸುತ್ತಾರೆ ಎಂದು ನನಗೆ ಯಾವಾಗಲೂ ಅನಿಸುತ್ತದೆ. ಯುವಕರು ಹೊರಗೆ ಬಂದು ಮತ ಚಲಾಯಿಸಿ ಎಂದು ನಾನು ವಿನಂತಿಸುತ್ತೇನೆ” ಎಂದು ಸುಧಾ ಹೇಳಿದರು.

 

ಫ್ರೆಶ್ ನ್ಯೂಸ್

Latest Posts

Featured Videos