ಜೋಡಿ ನಂದಿ ವಿಗ್ರಹ ಪತ್ತೆ

ಜೋಡಿ ನಂದಿ ವಿಗ್ರಹ ಪತ್ತೆ

ಮೈಸೂರು, ಜು. 20 : ಭೂಮಿ ಅಗೆಯುತ್ತಿದ್ದ ವೇಳೆಯಲ್ಲಿ ಸುಮಾರು 15 ಅಡಿ ಉದ್ದ ಹಾಗು 12 ಅಡಿ ಎತ್ತರವಾದ ಒಂದು ವಿಗ್ರಹ ಕಾಣಿಸಿದೆ. ತಾಲೂಕಿನ ಜಯಪುರ ಹೋಬಳಿಯ ಅರಸಿನಕೆರೆ ಗ್ರಾಮದಲ್ಲಿ ಜೋಡಿ ನಂದಿ ವಿಗ್ರಹಗಳು ಪತ್ತೆ. ಬಳಿಕ ಅದರ ಎದುರಿಗೆ ಚಿಕ್ಕದಾದ ಮತ್ತೊಂದು ವಿಗ್ರಹವೂ ಪತ್ತೆಯಾಗಿದೆ.
ಇದುವರೆಗೂ ಈ ನಂದಿ ವಿಗ್ರಹಗಳ ಕೊಂಬುಗಳನಷ್ಟೇ ನೋಡುತ್ತಿದ್ದ ಗ್ರಾಮಸ್ಥರು ಜೋಡಿ ಬಸವಣ್ಣ ಎಂದು ಪೂಜಿಸುತ್ತಿದ್ದರು. ಇದೀಗ ತಾವೇ ಹಣ ಸಂಗ್ರಹಿಸಿ ಜೆಸಿಬಿ ಯಂತ್ರಗಳ ಮೂಲಕ ಮಣ್ಣನ್ನು ತೆಗೆಸಿದಾಗ ಈ ನಂದಿ ವಿಗ್ರಹಗಳನ್ನ ಗೋಚರಿಸಿವೆ. ವಿಷಯ ತಿಳಿದ ಕೂಡಲೇ ಯದುವೀರ್ ಒಡೆಯರ್ ಆ ಗ್ರಾಮಕ್ಕೆ ಭೇಟಿ ನೀಡಿ, ವಿಗ್ರಹಗಳನ್ನು ವೀಕ್ಷಿಸಿದ್ದಾರೆ. ಈ ಹಿಂದೆ ರಾಜಮನೆತನದವರು ಈ ವಿಗ್ರಹಗಳನ್ನು ಸ್ಥಾಪಿಸಿದ್ದರು ಎನ್ನಲಾಗಿದ್ದು, ಇತಿಹಾಸ ತಜ್ಞರು ಈ ಬಗ್ಗೆ ಅಧ್ಯಯನ ನಡೆಸಿದ್ದಾರೆ.
ಹಿಂದೊಮ್ಮೆ ಜಯಚಾಮರಾಜ ಒಡೆಯರ್ ಇಲ್ಲಿಗೆ ಭೇಟಿ ನೀಡಿ ಹೂತು ಹೋಗಿದ್ದ ನಂದಿ ವಿಗ್ರಹಗಳನ್ನು ಹೊರತೆಗೆಯಲು ಪ್ರಯತ್ನಿಸಿದ್ದರು. ಆಗ ನೀರು ತುಂಬಿಕೊಂಡಿತ್ತು.

ಫ್ರೆಶ್ ನ್ಯೂಸ್

Latest Posts

Featured Videos