ಹೊತ್ತಿ ಉರಿದ ನಂದಿ ಬೆಟ್ಟ80 ಎಕರೆ ಅರಣ್ಯ ನಾಶ

ಹೊತ್ತಿ ಉರಿದ ನಂದಿ ಬೆಟ್ಟ80 ಎಕರೆ ಅರಣ್ಯ ನಾಶ

ಚಿಕ್ಕಬಳ್ಳಾಪುರ: ನಂದಿ ಗಿರಿಧಾಮದ ಸುಲ್ತಾನಪೇಟೆ ಭಾಗದಿಂದ ಗಿರಿಧಾಮದ
ಟಿಪ್ಪು ಬೇಸಿಗೆ ಆರಮನೆಯ ಹಿಂಭಾಗದವರೆಗೂ ಬೆಂಕಿ ಹೊತ್ತಿಕೊಂಡು ಬೆಟ್ಟದಮೇಲಿನ ಕೋಟೆಯ ಕಾಲ್ನಡಿಗೆ
ಮಾರ್ಗದ ಸುತ್ತಮುತ್ತಲೂ ಸಂಪೂರ್ಣ ಬೆಂಕಿ ಆವರಿಸಿ ಆತಂಕ ಸೃಷ್ಟಿಯಾಗಿದೆ. ಸುಮಾರು 80 ಎಕರೆಯಷ್ಟು
ಪ್ರದೇಶ ಬೆಂಕಿಗೆ ಆಹುತಿಯಾಗಿದೆ.

ನಂದಿಬೆಟ್ಟ ಸಾಕಷ್ಟು
ಎತ್ತರ ಹಾಗೂ ವಿಶಾಲವಾಗಿದ್ದು, ನಂದಿಬೆಟ್ಟದ ತಪ್ಪಲಿನ ಜಾಗ ಯಾರೂ ಹೋಗಲಾಗದಷ್ಟು ಕಲ್ಲು ಮುಳ್ಳುಗಳ
ದುರ್ಗುಮ ಹಾದಿ. ಹೀಗಾಗಿ ಬೆಂಕಿ ಬಿದ್ದ ಜಾಗಕ್ಕೆ ಹೋಗಿ ಬೆಂಕಿ ನಂದಿಸೋದು ಅಸಾಧ್ಯವಾದ ಕೆಲಸ, ಇದ್ರಿಂದ
ನಂದಿಬೆಟ್ಟದಲ್ಲಿ ಬೆಂಕಿ ಹೊತ್ತಿಕೊಂಡರೂ ತಾನಾಗೇ ನಂದಿ ಹೋಗಬೇಕೆ ಹೊರತು ಯಾರೂ ಬೆಂಕಿಯ ಜಾವಲೆಯನ್ನು
ಬಲವಂತವಾಗಿ ನಂದಿಸಲಾಗವುದಿಲ್ಲ. ಹೀಗಾಗಿ ಪ್ರತಿ ವರ್ಷವೂ ಬೇಸಿಗೆಯಲ್ಲಿ ಇಂತಹ ಅವಘಡಗಳು ಮರುಕಳಿಸುತ್ತಲೇ
ಇರುತ್ತವೆ.

ಬೆಂಕಿ ಹೊತ್ತಿಕೊಂಡ
ವಿಷಯ ತಿಳಿದ ನಂಧಿಗಿರಿಧಾಮದ ಸಿಬ್ಬಂದಿ ಸಾಕಷ್ಟು ಹರಸಾಹಸ ಪಟ್ಟು ಬೆಂಕಿ ನಂದಿಸಲು ಪ್ರಯತ್ನಿಸಲು
ಯತ್ನಿಸಿದರಾದರೂ ಸಿಬ್ಬಂದಿಯ ಪ್ರಯತ್ನ ಫಲಪ್ರದವಾಗಿಲ್ಲ, ಆದರೂ ಬೆಂಕಿ ಬೆಟ್ಟದ ಮೇಲೆ ತಾಗದಂತೆ ಗಂಟೆಗಟ್ಟಲೇ
ಹರಸಾಹಸಪಟ್ಟು ಸಿಬ್ಬಂದಿ ಬೆಂಕಿ ನಂದಿಸಿದ್ದಾರೆ.

ಫ್ರೆಶ್ ನ್ಯೂಸ್

Latest Posts

Featured Videos