ನಮ್ರತಾ ಗೌಡ ಫೋಟೋ ಶೂಟ್ ಗೆ ಅಭಿಮಾನಿಗಳು ಫಿದಾ

ನಮ್ರತಾ ಗೌಡ ಫೋಟೋ ಶೂಟ್ ಗೆ ಅಭಿಮಾನಿಗಳು ಫಿದಾ

ಬೆಂಗಳೂರು: ಕಿರುತರೆ ನಟಿ ನಮ್ರತಾ ಗೌಡ ಅವರು  ಹಲವಾರು ಧಾರವಾಹಿಗಳ ಮುಖಾಂತರ ಕನ್ನಡಿಗರ ಮನಸ್ಸನ್ನು ಕದ್ದಿದ್ದರು. ನಮ್ರತಾ ಗೌಡ, ಬಿಗ್‌ಬಾಸ್ ಮನೆಯಿಂದ ಹೊರಬರುತ್ತಿದ್ದಂತೆ ಸೋಶಿಯಲ್ ಮೀಡಿಯಾದಲ್ಲಿ ಸಿಕ್ಕಾಪಟ್ಟೆ ಆಕ್ಟಿವ್ ಆಗಿದ್ದಾರೆ. ಇತ್ತೀಚಿಗೆ ಬ್ಲೂ ಮತ್ತು ರೆಡ್‌ ಕಲರ್‌ ಸೀರೆಯುಟ್ಟ ಫೋಟೊಗಳನ್ನು ಪೋಸ್ಟ್ ಮಾಡಿದ್ದಾರೆ. ನೆಟ್ಟಿಗರು ಈ ರಾಯಲ್‌ ಲುಕ್ ನೋಡಿ ಮಹಾರಾಣಿ ಎಂದು ಕರೆದಿದ್ದಾರೆ.

ಸೀರೆಯುಟ್ಟು ನಾನಾ ರೀತಿ ಪೋಸ್ ನೀಡಿ ನಮ್ರತಾ ಇನ್‌ಸ್ಟಾಗ್ರಾಂನಲ್ಲಿ ಪೋಸ್ಟ್ ಮಾಡಿದ್ದಾರೆ. ‘ಐ ಡಿಸರ್ವ್‌ ದಿ ವರ್ಲ್ಡ್‌ ಸೋ ಐಯಾಮ್ ಗೋನಾ ಗಿವ್ ಇಟ್‌ ಟು ಮೈ ಸೆಲ್ಫ್‌’ ಎಂದು ಇದಕ್ಕೆ ಶೀರ್ಷಿಕೆ ನೀಡಿದ್ದಾರೆ.

ನೀಲಿ ಬಣ್ಣದ ಕೆಂಪು ಜರಿಯಂಚಿನ ಸೀರೆಯುಟ್ಟು ನಮ್ರತಾ ಫೋಟೋಗಳಿಗೆ ಫೋಸ್ ಕೊಟ್ಟಿದ್ದಾರೆ. ಇದಕ್ಕೆ ಒಪ್ಪುವಂತೆ ಗ್ರ್ಯಾಂಡ್ ಕಿವಿಯೋಲೆ, ನೆಕ್ಲೇಸ್‌, ನೆತ್ತಿ ಬೈತಲೆಯನ್ನು ಸಹ ಧರಿಸಿದ್ದಾರೆ. ನಮ್ರತಾ, ಟ್ರೆಡಿಶನಲ್‌ ಲುಕ್‌ಗೆ ಫ್ಯಾನ್ಸ್ ಫಿದಾ ಆಗಿದ್ದಾರೆ.

 

ಫ್ರೆಶ್ ನ್ಯೂಸ್

Latest Posts

Featured Videos