‘ನಮ್ಮದು ಒಳ್ಳೆಯ ಸಂಸ್ಕೃತಿ’: ಸದಾನಂದ ಗೌಡ

‘ನಮ್ಮದು ಒಳ್ಳೆಯ ಸಂಸ್ಕೃತಿ’: ಸದಾನಂದ ಗೌಡ

ಪೀಣ್ಯದಾಸರಹಳ್ಳಿ, ಜು. 24 :  ‘ನಮ್ಮದೇಶ ಒಳ್ಳೆಯ ಸಂಸ್ಕೃತಿ ಪರಂಪರೆ ,ಆಚಾರ-ವಿಚಾರ  ಇರುವ ದೇಶ ಎಂದು’ ಕೇಂದ್ರ ಸಚಿವ ಡಿ.ವಿ ಸದಾನಂದಗೌಡ ಹೇಳಿದರು.

ಹಾವನೂರು ಬಡಾವಣೆಯ ವಾಸ್ಕ್ ಯೋಗಕೇಂದ್ರದಲ್ಲಿ ಗಣಪತಿ ಹೋಮ, ಮೃತ್ಯುಂಜಯ ಹೋಮ, ಮಹಾ ಸುದರ್ಶನ ಹೋಮ ಪೂಜೆಯಲ್ಲಿ ಪಾಲ್ಗೊಂಡು ಪ್ರಸಾದ ಸ್ವೀಕರಿಸಿ ಅವರು ಮಾತನಾಡಿದರು. ‘ಹೋಮ,ಹವನಗಳು ನನಗೆ ದೇಶದ ಸೇವೆ ಮಾಡಲಿಕ್ಕೆ ಶಕ್ತಿ ಕೊಡುತ್ತವೆ. ಜಗತ್ತು ಅತ್ಯಂತ ಯಶಸ್ವಿ ರಾಷ್ಟ್ರವಾಗಬೇಕು, ಅದಕ್ಕೆ ಮೋದಿಯಂತಹ ನಾಯಕತ್ವಬೇಕು. ನಮ್ಮದು ಒಳ್ಳೆಯ ಸಂಸ್ಕೃತಿ, ಪರಂಪರೆ, ಒಳ್ಳೆಯ ಆಚಾರ-ವಿಚಾರ ಇರುವ ದೇಶ. ಯೋಗ ಕೇವಲ ವ್ಯಾಯಮ, ಇದು ಮನಸ್ಸು ಮತ್ತು ದೇಹ ಕ್ರೋಢೀಕರಿಸಿ ವ್ಯಕ್ತಿತ್ವ ವಿಕಸನಕ್ಕೆ ದಾರಿದೀಪವಾಗಿದೆ. 180 ರಾಷ್ಟ್ರಗಳು ಯೋಗವನ್ನು ಒಪ್ಪಿಕೊಂಡಿವೆ’ ಎಂದರು.

ಬಿಜೆಪಿ ಅಧ್ಯಕ್ಷ ಎಸ್.ಮುನಿರಾಜು  ಮಾತನಾಡಿ ‘ಇಲ್ಲಿನ ಆಚಾರ-ವಿಚಾರ, ಸಂಪ್ರದಾಯ ಬೇರೆ ಯಾವ ದೇಶದಲ್ಲೂ ಇಲ್ಲ. ಐದು ವರ್ಷಗಳಿಂದ ದೇಶ ಬದಲಾಗುತ್ತಿದೆ. ಹಾಗೇ ಅಭಿವೃದ್ಧಿಯಾಗುತ್ತಿದೆ. ಅದಕ್ಕೆ ಮೋದಿಯೇ ಕಾರಣ. ನಾವೆಲ್ಲರೂ ಭಾರತೀಯರೆಂದು ಎದೆ ತಟ್ಟಿ ಹೇಳಬಹುದು’ ಎಂದರು.

ಈ ಸಮಾರಂಭದಲ್ಲಿ ಯೋಗಗುರು ಉಮಾಮಹೇಶ್ವರ್, ಬಿಜೆಪಿ ಮುಖಂಡ ಟಿ.ಎಸ್.ಗಂಗರಾಜು, ಪಾಲಿಕೆ ಸದಸ್ಯರಾದ ಉಮಾದೇವಿ ನಾಗರಾಜು, ಎನ್.ಲೋಕೇಶ್, ಬಿಎಂ ನಾರಾಯಣ್ ಮತ್ತಿತರರು ಇದ್ದರು.

ಫ್ರೆಶ್ ನ್ಯೂಸ್

Latest Posts

Featured Videos