ನಲಪಾಡ್, ಮೆಕ್ಕಾ ಯಾತ್ರೆ ಹೈಕೋರ್ಟ್ ಗೆ ಮನವಿ

ನಲಪಾಡ್, ಮೆಕ್ಕಾ ಯಾತ್ರೆ ಹೈಕೋರ್ಟ್ ಗೆ ಮನವಿ

ಬೆಂಗಳೂರು, ಮೇ. 4, ನ್ಯೂಸ್ ಎಕ್ಸ್ ಪ್ರೆಸ್: ವಿದ್ವತ್ ಮೇಲೆ ಹಲ್ಲೆ ಪ್ರಕರಣದ ಆರೋಪಿ ಮೊಹಮ್ಮದ್ ನಲಪಾಡ್ ಜಾಮೀನು ಪಡೆದು ಹೊರಗಿದ್ದಾರೆ. ಆದರೆ, ಇಂದು ನಲಪಾಡ್ ಜಾಮೀನು ಷರತ್ತು ಸಡಲಿಕೆ ಕೋರಿ ಹೈಕೋರ್ಟ್ ಗೆ ಅರ್ಜಿ ಸಲ್ಲಿಸಿದ್ದಾರೆ. ನಲಪಾಡ್ ಮೇ .4 ರಿಂದ ಜೂನ್. 1 ವರೆಗೆ ಮೆಕ್ಕಾಗೆ ತೆರಳಬೇಕಿದೆ. ಈ ಹಿನ್ನೆಲೆಯಲ್ಲಿ ಜಾಮೀನು ಷರತ್ತು ಸಡಿಲಿಸಿ ಎಂದು ಅನುಮತಿ ಕೋರಿ ನಲಪಾಡ್ ಪರ ಹಿರಿಯ ವಕೀಲ ಸಿ.ವಿ.ನಾಗೇಶ್ ಹೈಕೋರ್ಟ್ ಗೆ ಮನವಿ ಮಾಡಿದರು. ಇಂದು ಕೋರ್ಟ್ ಸಮಯ ಮುಗಿದಿರುವುದರಿಂದ ವಿಚಾರಣೆ ನಡೆಸುವುದಿಲ್ಲ ಅಂತಾ ಹೈಕೋರ್ಟ್ ಏಕಸದಸ್ಯ ಪೀಠ ತಿಳಿಸಿ ವಿಚಾರಣೆಯನ್ನು ಮೇ. 8ಕ್ಕೆ ಮುಂದೂಡಿದರು.

ನಲಪಾಡ್ ಸಲ್ಲಿಸಿದ್ದ ಮಧ್ಯಂತರ ಅರ್ಜಿಯನ್ನು ನ್ಯಾಯಮೂರ್ತಿ ಕೆ.ಎಸ್. ಮುದಗಲ್ ಅವರಿದ್ದ ರಜಾ ಕಾಲದ ಏಕಸದಸ್ಯ ನ್ಯಾಯಪೀಠದ ಮುಂದೆ ವಿಚಾರಣೆ ಬಂದಿತ್ತು.

ದಿನದ ಕಲಾಪ ಅವಧಿಯು ಮುಗಿದ ಕಾರಣ ವಿಚಾರಣಯನ್ನು ಮೇ 8ಕ್ಕೆ ಮುಂದೂಡಿತು.ಇದಕ್ಕೂ ಮುನ್ನ ನಲಪಾಡ್ ಪರ ಹಿರಿಯ ವಕೀಲ ಸಿವಿ ನಾಗೇಶ್ ಹಾಜರಾಗಿ, ಪ್ರಕರಣ ಸಂಬಂಧ ಅರ್ಜಿದಾರರಿಗೆ ಹೈಕೋರ್ಟ್ ಈ ಹಿಂದೆ ಜಾಮೀನು ಮಂಜೂರು ಮಾಡಿದೆ.

 

ಫ್ರೆಶ್ ನ್ಯೂಸ್

Latest Posts

Featured Videos