ನ್ಯಾ.ಎ.ಜೆ.ಸದಾಶಿವ ವರದಿ ಅವೈಜ್ಞಾನಿಕ

ನ್ಯಾ.ಎ.ಜೆ.ಸದಾಶಿವ ವರದಿ ಅವೈಜ್ಞಾನಿಕ

ಪಾವಗಡ: ನ್ಯಾ.ಎ.ಜೆ.ಸದಾಶಿವ ಆಯೋಗ ವರದಿ ಜಾರಿಯಾಗಬಾರದೆಂದು ಒತ್ತಾಯಿಸಿ ಕೊರಚ, ಕೊರಮ, ಲಂಬಾಣಿ, ಭೋವಿ (ಕೊಲಂಭೋ) ನೌಕರರ ಒಕ್ಕೂಟ ಶನಿವಾರ ಪಟ್ಟಣದ ನಿರೀಕ್ಷಣಾ ಮಂದಿರದಲ್ಲಿ ಪತ್ರಿಕಾಗೋಷ್ಟಿಯಲ್ಲಿ ಸರ್ಕಾರವನ್ನು ಒತ್ತಾಯಿಸಿದರು.
ಪರಿಶಿಷ್ಟ ಜಾತಿಯಲ್ಲಿರುವ 101 ಜಾತಿಗಳು ಒಂದಲ್ಲಾ ಒಂದು ರೀತಿಯಲ್ಲಿ ಸಾಮಾಜಿಕ ಶೋಷಣೆ ಅನುಭವಿಸಿವೆ. ಇಂದಿಗೂ ಕೂಡ ಸಾಮಾಜಿಕ ಅಸಮಾನತೆಯನ್ನು ಅನುಭವಿಸಿಕೊಂಡು ಬಂದಿವೆ ಎಂಬುವುದು ಕಟು ಸತ್ಯ ವರದಿಯನ್ನು ಚರ್ಚೆಗೆ ಒಳಪಡಿಸದೆ ಭಾದಿತ ಸಮುದಾಯಗಳಿಗೆ ಗೊತ್ತಿಲ್ಲದೆ ವಿಧಾನ ಸಭೆ, ನ್ಯಾಯಾಲಯದ ವ್ಯಾಪ್ತಿಗೆ ತರದೆ ಏಕಪಕ್ಷೀಯವಾಗಿ ಗೌಪ್ಯವಾಗಿ ಕೇಂದ್ರ ಸರ್ಕಾರಕ್ಕೆ ಶಿಫಾರಸ್ಸು ಮಾಡಿ ಎನ್ನುವುದು ಪ್ರಜಾ ಸತ್ತಾತ್ಮಕ ನಡುವಳಿಯಲ್ಲ ಎಂದರು.
ನೌಕರರ ಒಕ್ಕೂಟದ ತಾಲ್ಲೂಕು ಖಜಾಂಚಿ ಹನುಮಂತರಾಯಪ್ಪ. ಆರ್ ಮಾತನಾಡಿ, ಮೀಸಲಾತಿಯನ್ನೇ ರದ್ದು ಮಾಡಬೇಕೆಂಬ ಕೂಗು ಬಲವಾಗಿ ಕೇಳಿ ಬರುತ್ತಿರುವಾಗ ಪರಿಶಿಷ್ಟ ಜಾತಿಯಲ್ಲಿರುವ ಎಲ್ಲಾ ಸಮುದಾಯಗಳು ಹೊಡೆದು ಆಳುವ ನೀತಿ ಅನುಷ್ಠಾನಕ್ಕೆ ಹೊರಟಿರುವ ದುಷ್ಟ ಶಕ್ತಿಗಳ ವಿರುದ್ಧ ಹೋರಾಡಬೇಕಾಗಿದೆ. ಸಂವಿಧಾನದ ಮೂಲ ಆಶಯಗಳಿಗೆ ಚ್ಯುತಿ ಬಾರದಂತೆ ಕಾಪಾಡಿಕೊಂಡು ಬರುವುದು ನಮ್ಮ ಕರ್ತವ್ಯ. ನಮ್ಮ ಒಳ ಜಗಳವು ಸಂವಿಧಾನಕ್ಕೆ ತೋರುವ ಅಗೌರವ ಆಗುತ್ತದೆ ಎಂದರು.

 

ಫ್ರೆಶ್ ನ್ಯೂಸ್

Latest Posts

Featured Videos