ಯಾರು ಈ ನೈನಾ?:

ಯಾರು ಈ ನೈನಾ?:

ಬೆಳಗಾವಿ, ಆ.25 : ನೈನಾ ಯಾವುದೇ ಪೊಲೀಸ್ ಅಧಿಕಾರಿಯಲ್ಲ, ಸೆಲೆಬ್ರಿಟಿಯೂ ಅಲ್ಲ. ಲ್ಯಾಬ್ರಡರ ರಿಟ್ರಿವರ್ ತಳಿಗೆ ಸೇರಿದ್ದ ಶ್ವಾನ. 2009 ಅಕ್ಟೋಬರ್ 21ರಂದು ಜನಿಸಿದ ನೈನಾ (ಶ್ವಾನ). 2010 ಮೇ 25ರಿಂದ 2011 ಏಪ್ರಿಲ್ 5ರವರೆಗೆ ಬೆಂಗಳೂರಿನ ಆಡುಗೋಡಿಯಲ್ಲಿರುವ ಕರ್ನಾಟಕ ರಾಜ್ಯ ಪೊಲೀಸ್ ಶ್ವಾನದಳ ತರಬೇತಿ ಶಾಲೆ ಸಿಎಆರ್ (ದಕ್ಷಿಣ)ದಲ್ಲಿ ತರಬೇತಿ ಪಡೆದಿತ್ತು.
ಪತ್ತೆ ಹಚ್ಚುತ್ತಿದ್ದ ನೈನಾ: ಕೊಲೆ, ದರೋಡೆ ಸೇರಿದಂತೆ ಜಿಲ್ಲೆಯ ಪೊಲೀಸರಿಗೆ ಕಗ್ಗಂಟಾದ ಅಪರಾಧ ಪ್ರಕರಣಗಳಲ್ಲಿ ಆರೋಪಿಗಳನ್ನು ಪತ್ತೆ ಹಚ್ಚುವಲ್ಲಿ ಯಶಸ್ವಿಯಾಗಿತ್ತು. ಹೀಗಾಗಿ ಪೊಲೀಸ್ ಇಲಾಖೆಯ ಶ್ವಾನದಳದ ಸಿಬ್ಬಂದಿಗೆ ಅಚ್ಚುಮೆಚ್ಚಾಗಿತ್ತು. 9 ವರ್ಷ 10 ತಿಂಗಳು ವಯಸ್ಸಿನ ನೈನಾ ಶನಿವಾರ ಇಲಾಖೆಯನ್ನು ಅಗಲಿದೆ. ನಗರ ಸೇರಿದಂತೆ ಜಿಲ್ಲೆಯ ಪೊಲೀಸ್ ಇಲಾಖೆ ವ್ಯಾಪ್ತಿಯಲ್ಲಿನ ಹಲವು ಪ್ರಕರಣಗಳನ್ನು ಭೇದಿಸಲು ಪೊಲೀಸರಿಗೆ ನೆರವಾಗಿದ್ದ ನೈನಾ ಶನಿವಾರ ಹೃದಯಾಘಾತದಿಂದ ಕೊನೆಯುಸಿರೆಳೆದಿದೆ.
ನೈನಾ ಸಾವಿನ ಸುದ್ದಿ ತಿಳಿದ ಶ್ವಾನದಳದ ಸಿಬ್ಬಂದಿ ಕೂಡ ಭಾವುಕರಾದರು. ನಗರ ಪೊಲೀಸ್ ಇಲಾಖೆ ವತಿಯಿಂದ ಆಯುಕ್ತ ಲೋಕೇಶಕುಮಾರ ಸಕಲ ಸರ್ಕಾರಿ ಗೌರವದೊಂದಿಗೆ ತಮ್ಮ ಗೃಹ ಕಚೇರಿ ಆವರಣದಲ್ಲಿ ಶನಿವಾರ ಸರ್ಕಾರಿ ಗೌರವದೊಂದಿಗೆ ಅಂತ್ಯಕ್ರಿಯೆ ನೆರವೇರಿಸಿದರು.

ಫ್ರೆಶ್ ನ್ಯೂಸ್

Latest Posts

Featured Videos