ಫಿಲಿಪೈನ್ಸ್​ ನಲ್ಲಿ ನಡುಗಿದ ಭೂಮಿ: 8 ಸಾವು

ಫಿಲಿಪೈನ್ಸ್​ ನಲ್ಲಿ ನಡುಗಿದ ಭೂಮಿ: 8 ಸಾವು

ಮನಿಲಾ, . 23, ನ್ಯೂಸ್ ಎಕ್ಸ್ ಪ್ರೆಸ್: ಉತ್ತರ ಫಿಲಿಪೈನ್ಸ್ ನಲ್ಲಿ 6.1 ರಷ್ಟ್ರು ಪ್ರಮಾಣದ ಭೂಕಂಪನ ಸಂಭವಿಸಿದೆ. ಈ ಘಟನೆಯಲ್ಲಿ ಇದುವರೆಗೂ 8 ಜನರು ಸಾವನ್ನಪ್ಪಿದ್ದಾರೆ ಎನ್ನಲಾಗಿದೆ. ಇಲ್ಲಿನ ಫಿಲಿಪೈನ್ಸ್ ಇನ್ ​ಸ್ಟಿಟ್ಯೂಟ್​ ಆಫ್ ವೋಲ್ಕೋನಾಲಜಿ ಆಂಡ್ ಸಿಸ್ಮೋಲಾಜಿ ಕೇಂದ್ರದ ಭೂಕಂಪನದ ಪ್ರಮಾಣವನ್ನು ಸ್ಪಷ್ಟಪಡಿಸಿದ್ದು, ಝಾಂಬಾಲೇಸ್ ಪ್ರದೇಶದ ಕಾಸ್ಟಿಲೇಜೋಸ್ ಭೂಕಂಪನದ ಕೇಂದ್ರ ಬಿಂದು ಅಂತಾ ಗುರುತಿಸಿದೆ. ಅಲ್ಲಿನ ಕಾಲಾಮಾನದ ಪ್ರಕಾರ ನಿನ್ನೆ ಸಂಜೆ 5 ಗಂಟೆ ಸುಮಾರಿಗೆ ಈ ಘಟನೆ ಸಂಭವಿಸಿದೆ. ಪೋರಾಕ್ ಪ್ರದೇಶದಲ್ಲಿ ಘಟನೆ ತೀವ್ರತೆ ಜಾಸ್ತಿಯಾಗಿದ್ದು, ಹಲವು ಕಟ್ಟಡಗಳು ಧರೆಗೆ ಉರುಳಿವೆ. ಕ್ಯಾಮರಾದಲ್ಲಿ ಸೆರೆಯಾಗಿದೆ.

ಫ್ರೆಶ್ ನ್ಯೂಸ್

Latest Posts

Featured Videos