ನಾಪತ್ತೆಯಾಗಿದ್ದ ಪೊಲೀಸ್ ತಿಹಾರ್ ಜೈಲಿನ ಕೈದಿಯಾಗಿ ಪತ್ತೆ !

ನಾಪತ್ತೆಯಾಗಿದ್ದ ಪೊಲೀಸ್ ತಿಹಾರ್ ಜೈಲಿನ ಕೈದಿಯಾಗಿ ಪತ್ತೆ !

ಮೀರಠ್, ಮೇ. 8, ನ್ಯೂಸ್ ಎಕ್ಸ್ ಪ್ರೆಸ್: 1 ತಿಂಗಳ ರಜೆ ಮೇಲೆ ತೆರಳಿದ್ದ ಪೊಲೀಸ್ ಪೇದೆಯೊಬ್ಬರು 5 ತಿಂಗಳಿಂದ ನಾಪತ್ತೆಯಾಗಿದ್ದು, ಆದರೆ ಆತ 1987ರ ಹಶೀಂಪುರ ಹತ್ಯಾಕಾಂಡ ಪ್ರಕರಣಕ್ಕೆ ಸಂಬಂಧಿಸಿದಂತೆ ತಿಹಾರ್ ಜೈಲಿನಲ್ಲಿ ಜೀವಾವಧಿ ಶಿಕ್ಷೆಯಲ್ಲಿ ಕಳೆಯುತ್ತಿದ್ದಾನೆ ಎನ್ನುವ ಅಂಶ ಇದೀಗ ಉತ್ತರ ಪ್ರದೇಶ ಪೊಲೀಸ್ ಇಲಾಖೆಗೆ ಮನವರಿಕೆಯಾಗಿದೆ.

ಇಲಾಖಾ ವಿಚಾರಣೆ ಬಳಿಕ ಬಿಜನೋರ್ನ ಭದ್ರಾಪುರ ಪೊಲೀಸ್ ಠಾಣೆಯ ಪೇದೆ ಕನ್ವರ್ ಪಾಲ್ ಸಿಂಗ್ (55)ನನ್ನು ಶುಕ್ರವಾರ ಸೇವೆಯಿಂದ ವಜಾಗೊಳಿಸಲಾಗಿದೆ.

ನವೆಂಬರ್ 15ರಂದು ಸಿಂಗ್ 1 ತಿಂಗಳ ರಜೆ ಮೇಲೆ ತೆರಳಿದ್ದ. ಹುಟ್ಟೂರು ಶಾಮ್ಲಿಯಿಂದ ವಾಪಾಸು ಬರುವಾಗ ಸಿಹಿತಿಂಡಿ ತರುವಂತೆ ಸಹೋದ್ಯೋಗಿಗಳು ಆತನನ್ನು ಕೇಳಿದ್ದರು. ಆದರೆ ಹಿಂದೆ ಉತ್ತರಪ್ರದೇಶದ ಪ್ರಾಂತೀಯ ಸಶಸ್ತ್ರ ಪೊಲೀಸ್ ಪಡೆಯ ಸಿಬ್ಬಂದಿಯಾಗಿದ್ದ ಈತನನ್ನು 2018ರ ಅಕ್ಟೋಬರ್ 31ರಂದು ದೆಹಲಿ ಹೈಕೋರ್ಟ್, ಆರೋಪಿ ಎಂದು ಘೋಷಿಸಿದ್ದ ಅಂಶ ಯಾರಿಗೂ ತಿಳಿದಿರಲೇ ಇಲ್ಲ. 1987ರ ಮೇ 22ರಂದು 42 ಜನ ಮುಸ್ಲಿಮರನ್ನು ಗುಂಡಿಟ್ಟು ಕೊಂದ ಆರೋಪಕ್ಕೆ ಸಂಬಂಧಿಸಿದಂತೆ 15 ಜನ ಇತರರ ಜತೆಗೆ ಈತನಿಗೂ ಜೀವಾವಧಿ ಶಿಕ್ಷೆ ಘೋಷಿಸಲಾಗಿತ್ತು.

 

ಫ್ರೆಶ್ ನ್ಯೂಸ್

Latest Posts

Featured Videos