ದೋಸ್ತಿ ಸರ್ಕಾರ ಅಲುಗಾಡಿಸಲು ಯಾರಿಂದಲೂ ಸಾಧ್ಯವಿಲ್ಲ : ಡಿಕೆಶಿ

ದೋಸ್ತಿ ಸರ್ಕಾರ ಅಲುಗಾಡಿಸಲು ಯಾರಿಂದಲೂ ಸಾಧ್ಯವಿಲ್ಲ : ಡಿಕೆಶಿ

ಹುಬ್ಬಳ್ಳಿ, ಮೇ. 15, ನ್ಯೂಸ್ ಎಕ್ಸ್ ಪ್ರೆಸ್: ಮೈತ್ರಿ ಸರ್ಕಾರವು ಸುಭದ್ರವಾಗಿದ್ದು, ಯಾರಿಂದಲೂ ಈ ಸರ್ಕಾರವನ್ನು ಅಲುಗಾಡಿಸಲು ಸಾಧ್ಯವಿಲ್ಲ ಎಂದು ಸಚಿವ ಡಿಕೆ ಶಿವಕುಮಾರ್ ತಿಳಿಸಿದ್ದಾರೆ.ಹುಬ್ಬಳ್ಳಿಯಲ್ಲಿ ಮಾಧ್ಯಮ ಪ್ರತಿನಿಧಿಗಳೊಂದಿಗೆ ಮಾತನಾಡಿದ ಅವರು, ಜನರು ಬಿಜೆಪಿಗೆ ಅಧಿಕಾರ ಕೊಟ್ಟಿದ್ದರು. ಆದರೆ, ಅವರು ಅದನ್ನು ಉಳಿಸಿಕೊಳ್ಳಲಿಲ್ಲ. ಬಿಜೆಪಿಯವರು ಅಧಿಕಾರ ಉಳಿಸಿಕೊಳ್ಳದೇ, ಈಗ ಮೈತ್ರಿ ಸರ್ಕಾರ ಬಿದ್ದೋಗುತ್ತದೆ. ಮೇ. 23ರಕ್ಕೆ ಪತನವಾಗುತ್ತದೆ ಎಂದು ಕನಸು ಕಾಣುತ್ತಿದ್ದಾರೆ. ಆದರೆ, ಮೈತ್ರಿ ಸರ್ಕಾರ ಯಾವುದೇ ಕಾರಣಕ್ಕೂ ಬೀಳುವುದಿಲ್ಲ ಎಂದು ತಿಳಿಸಿದರು.

ಇದೇ ವೇಳೆ ಈಶ್ವರಪ್ಪ ಅವರ ಕಾಂಗ್ರೆಸ್ ನವರು ನಾಮರ್ಧರು ಎಂಬ ಮಾತಿಗೆ ಪ್ರತಿಕ್ರಿಯಿಸಿದ ಅವರು, ಈ ಮಾತನ್ನು ಹೇಳಲು ಈಶ್ವರಪ್ಪ ಅವರಿಗೆ ನಾಚಿಕೆ ಆಗೋದಿಲ್ವಾ.? ನಾವು ಗಂಡಸರೇ ಅಲ್ವಾ ಎಂದಿದ್ದಾರೆ. ಈಶ್ವರಪ್ಪ ಬಳಿ ಶಕ್ತಿ ಇದ್ದರೇ, ನಮ್ಮ ಬಳಿ ಬಂದು ನಾವು ಗಂಡಸರೋ, ಅಲ್ಲವೋ ಎಂದು ಪರೀಕ್ಷೆ ಮಾಡಿಕೊಳ್ಳಲಿ ಎಂದು ಸವಾಲು ಹಾಕಿದರು.

ಫ್ರೆಶ್ ನ್ಯೂಸ್

Latest Posts

Featured Videos