ಮೈಸೂರು ದಸರಾಕ್ಕೆ 20 ಅಡಿ ದೀಪಾಲೆ ಕಂಬ

ಮೈಸೂರು ದಸರಾಕ್ಕೆ 20 ಅಡಿ ದೀಪಾಲೆ ಕಂಬ

ಮೈಸೂರು, ಸೆ. 18 : ಮೈಸೂರು ದಸರಾ ಹಿನ್ನಲೆ 20 ಅಡಿ ಎತ್ತರದ ದೀಪಾಲೆ ಕಂಬವನ್ನು ಬಣ್ಣ ಬಣ್ಣದ ವಿದ್ಯುತ್ ದೀಪಗಳಿಂದ ಮಾಡಿಸಿ ಮೈಸೂರಿಗೆ ತರಿಸಲಾಗುತ್ತಿದೆ. ಆಕರ್ಷಣೀಯ ಮಾಡಲು ಹಲವು ಯೋಜನೆಗಳನ್ನು ಜಿಲ್ಲಾಡಳಿತ ಹಮ್ಮಿಕೊಂಡಿದೆ. ಹೆಚ್ಚು ಹೆಚ್ಚು ಪ್ರವಾಸಿಗರನ್ನು ಆಕರ್ಷಿಸುವ ನಿಟ್ಟಿನಲ್ಲಿ ಇದೇ ಮೊದಲ ಬಾರಿಗೆ 20 ಅಡಿ ದೀಪಾಲೆ ಕಂಬವನ್ನು ಮೈಸೂರು-ಬೆಂಗಳೂರು ಟೋಲ್ಗೇಟ್ ಬಳಿ ಹಾಕಿ ಸ್ವಾಗತ ಕೋರಲಾಗುತ್ತಿದೆ.
ಪಶ್ಚಿಮ ಬಂಗಾಳದಲ್ಲಿ 20 ಅಡಿ ಎತ್ತರದ ದೀಪಾಲೆ ಕಂಬವನ್ನು ಬಣ್ಣ ಬಣ್ಣದ ವಿದ್ಯುತ್ ದೀಪಗಳಿಂದ ಮಾಡಿಸಿ ಮೈಸೂರಿಗೆ ತರಿಸಲಾಗುತ್ತಿದೆ. ಇದಕ್ಕಾಗಿ 2.50 ಲಕ್ಷ ರೂ. ವೆಚ್ಚ ಮಾಡಲಾಗುತ್ತಿದೆ. ಈ ಬಾರಿ ಪಶ್ಚಿಮ ಬಂಗಾಳ ಮಾದರಿಯಲ್ಲಿ ವಿದ್ಯುತ್ ದೀಪಗಳ ಅಲಂಕಾರ ಮಾಡಲಾಗುತ್ತಿದೆ. ಈಗಾಗಲೇ ನಗರದ ಪ್ರಮುಖ ರಸ್ತೆಗಳು, ವೃತ್ತಗಳಲ್ಲಿ ದೀಪಗಳನ್ನು ಅಳವಡಿಸುವ ಕಾಮಗಾರಿ ಬರದಿಂದ ಸಾಗಿದೆ.

ಫ್ರೆಶ್ ನ್ಯೂಸ್

Latest Posts

Featured Videos