ಪ್ರಸಾದಕ್ಕೆ ವಿಷ ಹಾಕಿದ ಪಾತಕಿಗಳಿಗೆ ಶಿಕ್ಷೆಯಾಗಬೇಕು: ಸಿದ್ದರಾಮಯ್ಯ

ಪ್ರಸಾದಕ್ಕೆ ವಿಷ ಹಾಕಿದ ಪಾತಕಿಗಳಿಗೆ ಶಿಕ್ಷೆಯಾಗಬೇಕು: ಸಿದ್ದರಾಮಯ್ಯ

ಮೈಸೂರು: ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಇಂದು ಮೈಸೂರಿನ ಕೆ.ಆರ್. ಆಸ್ಪತ್ರೆಗೆ ಭೇಟಿ ನೀಡಿ ವಿಷಾಹಾರ ಸೇವನೆಯಿಂದ ಅಸ್ವಸ್ಥರಾಗಿ ಚಿಕಿತ್ಸೆ ಪಡೆಯುತ್ತಿರುವವರ ಯೋಗಕ್ಷೇಮ ವಿಚಾರಿಸಿದರು. ಅಸ್ವಸ್ಥರಿಗೆ ನೀಡುತ್ತಿರುವ ಚಿಕಿತ್ಸಾ ಸೌಲಭ್ಯದ ಬಗ್ಗೆ ಅವರು ವೈದ್ಯರಿಂದ ಮಾಹಿತಿ ಪಡೆದರು.

ಈ ವೇಳೆ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಫುಡ್‌ಪಾಯಿಸನ್‌ನಿಂದ ಇದು ಆಗಿಲ್ಲ. ಯಾರೋ ಪಾತಕಿಗಳು ಪ್ರಸಾದದಲ್ಲಿ ವಿಷ ಬೆರಿಸಿದ್ದಾರೆ. ಈ ಬಗ್ಗೆ ಉನ್ನತ ಮಟ್ಟದ ತನಿಖೆಯಾಗಬೇಕು ಎಂದು ಸುಳ್ವಾಡಿಯ ವಿಷ ಪ್ರಸಾದ ಪ್ರಕರಣ ಸಂಬಂಧಿಸಿ ಸಿದ್ದರಾಮಯ್ಯ ಅವರು ಪ್ರತಿಕ್ರಿಯಿಸಿದ್ದಾರೆ.
ಈಗಾಗಲೇ ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ ಪ್ರಕರಣದ ತನಿಖೆಗೆ ಆದೇಶ ಮಾಡಿದ್ದಾರೆ. ನಾನು ಕೂಡ ಸಿಎಂ ಬಳಿ ಮಾತನಾಡಿ ಉನ್ನತಮಟ್ಟದ ತನಿಖೆಗೆ ಆಗ್ರಹಿಸುತ್ತೆನೆ. ಈ ಘೋರ ದುರಂತದ ಘಟನೆಗೆ ಕಾರಣರಾದ ಪಾತಕಿಗಳಿಗೆ ಶಿಕ್ಷೆಯಾಗಬೇಕು ಎಂದರು.
ಈ ಸಂದರ್ಭದಲ್ಲಿ ಕೆಪಿಸಿಸಿ ಅಧ್ಯಕ್ಷರಾದ ದಿನೇಶ್ ಗುಂಡೂರಾವ್, ಚಾಮರಾಜನಗರ ಜಿಲ್ಲೆಯ ಉಸ್ತುವಾರಿ ಸಚಿವ ಪುಟ್ಟರಂಗ ಶೆಟ್ಟಿ, ಸಂಸದ ಧ್ರುವ ನಾರಾಯಣ, ಹನೂರು ಶಾಸಕ ನರೇಂದ್ರ, ಮಾಜಿ ಸಂಸದ ವಿಜಯ ಶಂಕರ್, ಮಾಜಿ ಶಾಸಕ ಮಂಜುನಾಥ, ಸೋಮಶೇಖರ ಮತ್ತಿತರರು ಉಪಸ್ಥಿತರಿದ್ದರು.

ಫ್ರೆಶ್ ನ್ಯೂಸ್

Latest Posts

Featured Videos