ಮೈಸೂರು – ಕಾಚಿಗುಡ ರೈಲು

  • In State
  • March 5, 2019
  • 228 Views
ಮೈಸೂರು – ಕಾಚಿಗುಡ ರೈಲು

ಮಾ. 5, ನ್ಯೂಸ್ ಎಕ್ಸ್ ಮೈಸೂರು: ಇಂದು ಸಂಸದ ಪ್ರತಾಪ್ ಸಿಂಹ ರವರು ಮೈಸೂರು ಮತ್ತು ಕಾಚಿಗುಡ (ಹೈದ್ರಾಬಾದ್) ನಡುವಿನ ರೈಲಿಗೆ ಹಸಿರು ನಿಶಾನೆ ತೋರಿಸಿದರು.

ಮೈಸೂರಿನ ಕೇಂದ್ರ ರೈಲು ನಿಲ್ದಾಣದಲ್ಲಿ ಹಸಿರು ನಿಶಾನೆ ತೋರುವ ಮೂಲಕ ರೈಲು ವಿಸ್ತರಣೆಗೆ ಚಾಲನೆ ನೀಡಿದ ಪ್ರತಾಪ್ ಸಿಂಹ, ಮೈಸೂರು ಹೈದ್ರಾಬಾದ್ ನಡುವೆ ಸಾಕಷ್ಟು ವಾಣಿಜ್ಯ ವ್ಯವಹಾರ ಇದೆ. ಇದರಿಂದ ಮೈಸೂರು ಮತ್ತು  ಕಾಚಿಗೂಡ ಎಕ್ಸ್ಪ್ರೆಸ್ ಪ್ರಯಾಣಿಕರ ಅಗತ್ಯತೆ ಪೂರೈಸಲಿದೆ ಎಂದು ಮಾತನಾಡಿದರು

ಕಳೆದ 10 ವರ್ಷಗಳಲ್ಲಿ ಮೈಸೂರು ಮತ್ತು  ಕಾಚಿಗೂಡ ಭಾಗಕ್ಕೆ ಒಂದೆ ಒಂದು ಟ್ರೈನ್ ಕೂಡ ತರಲು ಸಾದ್ಯವಾಗಲಿಲ್ಲ.ನಮ್ಮದೇ ಪಕ್ಷದ ಎಂಪಿ ಇದ್ದರು, ಆದರು ಕೂಡು ಅವರು ತರೋದಿಕ್ಕೆಸಾದ್ಯವಾಗಲಿಲ್ಲ. ಆದರೆ ಪ್ರಧಾನ ಮಂತ್ರಿ ನರೇಂದ್ರ ಮೋದಿ ನೆರವಿನಿಂದ ನಾನು ಇಗಾಗಲೆ 6 ರೈಲು ತಂದಿದ್ದೇನೆ. ಬ್ರಿಟಿಷ್ ಕಾಲದ ರೈಲು ವ್ಯವಸ್ಥೆಯಲ್ಲಿ ಬದಲಾವಣೆ ತರಬೇಕಾದರೆ ಮೋದಿಯಂತ ಪ್ರಧಾನಿ, ಪಿಯೂಸ್ ಗೋಯಲ್ ಅಂತಾ ಸಚಿವರಿರಬೇಕು ಎಂದು ಹೇಳಿದರು

ಇನ್ನು ಮುಂದೆ ಮೈಸೂರಿನಿಂದ ಕೇವಲ 205 ರೂ ಗಳಲ್ಲಿ ಹೈದ್ರಬಾದ್ ತಲುಪಬಹುದು ಎಂದ ಪ್ರತಾಪ್ ಸಿಂಹ, 2 ವರ್ಷಗಳಲ್ಲಿ ಮೈಸೂರು ರೈಲ್ವೆಯಲ್ಲಿ ಯಾವುದೇ ಕೆಲಸ ಇರಬಾರದು. ಈ ನಿಟ್ಟಿನಲ್ಲಿ ಮುಂದೆ ಸ್ಯಾಟಲೈಟ್ ರೈಲು ನಿಲ್ದಾಣ ಆದ ಮೇಲೆ ಎಲ್ಲಾ ಕೆಲಸ ಮಾಡುತ್ತೇನೆ. ನಾನು ಬೇರೆಯವರ ತರ ಕಮಿಷನ್ , ಜಾತಿ ಆಧಾರದ ಮೇಲೆ ರಾಜಕಾರಣ ಮಾಡಲ್ಲ. ರಾಜಕಾರಣ ಮಾಡಲು ಮೈಸೂರಿಗೆ ಬಂದಿಲ್ಲ, ಸೇವೆ ಮಾಡಲು ಬಂದಿದ್ದೇನೆ ಎಂದರು.

ನಾನು ನನ್ನ ಮಗಳ ಭವಿಷ್ಯ ಯೋಚನೆ ಮಾಡಲ್ಲ. ಸಾರ್ವಜನಿಕರ ಭವಿಷ್ಯಕ್ಕೆ ಬೆಲೆ ಕೊಡುತ್ತೇನೆ.ಮಕ್ಕಳು, ಮರಿಮಕ್ಕಳ ಭವಿಷ್ಯಕ್ಕೆ ಬೆಲೆ ಕೊಡುವ ರಾಜಕಾರಣಿ ನಾನಲ್ಲ ಎಂದು ಪರೋಕ್ಷವಾಗಿ ಮಾಜಿ ಪ್ರಧಾನಿ ಎಚ್.ಡಿ.ದೇವೇಗೌಡ ಕುಟುಂಬಕ್ಕೆ ಪ್ರತಾಪ್ ಸಿಂಹ ಟೀಕೆ ಮಾಡಿದರು.

ಈ ಸಂದರ್ಭದಲ್ಲಿ ಪರಿಷತ್ತಿನ ಸದಸ್ಯ ಮರಿತಿಬ್ಬೇಗೌಡ , ರೈಲ್ವೆ ವಿಭಾಗೀಯ ವ್ಯವಸ್ಥಾಪಕಿ ಅಪರ್ಣ ಗರ್ಗೆ ಸೇರಿ ಹಲವರು ಭಾಗಿಯಾಗಿದ್ದರು.

ಫ್ರೆಶ್ ನ್ಯೂಸ್

Latest Posts

Featured Videos