ಫುಟ್ ಪಾತ್ ಗಳೆ ಮೂತ್ರ ವಿಸರ್ಜನೆಯ ತಾಣ!

ಫುಟ್ ಪಾತ್ ಗಳೆ ಮೂತ್ರ ವಿಸರ್ಜನೆಯ ತಾಣ!

ಕೆ.ಆರ್. ಮಾರುಕಟ್ಟೆ, ಆ. 5: ಎಲ್ಲಿ ನೋಡಿದರಲ್ಲಿ ಫುಟ್ ಪಾತ್ ಮೇಲೆ ಮೂತ್ರ ವಿಸರ್ಜನೆ ಮಾಡುವ ಪರಿಣಾಮ ಇಲ್ಲಿನ ಯಾವುದೇ ರಸ್ತೆ ಗಲ್ಲಿಗೆ ಹೋದರೂ ಕಸ, ಅನೈರ್ಮಲ್ಯ ,ಕೆಟ್ಟವಾಸನೆ ಪಾದಾಚಾರಿಗಳು ಸಾರ್ವಜನಿಕರನ್ನು ಕಾಡುತ್ತಿರುವ ಸಮಸ್ಯೆಗಳು.

ಮೈಸೂರು ರಸ್ತೆ, ಜಲ್ಲಿ ಮೊಹಲ್ಲಾ ರಸ್ತೆ, ಚಿಕ್ಕಪೇಟೆ ಸೇರಿದಂತೆ ಯಾವ ರಸ್ತಗಳಿಗೆ ಹೋದರೂ ಕಸ ಕೊಚ್ಚೆ ನೀರಿನ ವಾಸನೆಗೆ ಓಡಾಡುವದೆ ಕಷ್ಟಕರವಾಗಿದೆ.

ಬೆಳಿಗ್ಗೆ ಎದ್ದು ಬಿಬಿಎಂಪಿ ನೌಕರರು ಫುಟ್ ಪಾತ್ ಮೇಲಿನ ಕಸ ಸ್ವಚ್ಚ ಮಾಡಿ ಸೊಳ್ಳೆ ಹಾಗೂ ನೊಣ ನಿಯಂತ್ರಣ ಮಾಡುವ ಉದ್ದೇಶದಿಂದ ಡಿಡಿಟಿ ಪೌಡರ್ ಸಿಂಪಡಿಸಿ ಹೋದ ಕೆಲವೆ ಕ್ಷಣಗಳಲ್ಲಿ ಇಲ್ಲಿನ ತರಕಾರಿ ಹೋವಿನ ವ್ಯಾಪಾರಿಗಳು, ಪುಟ್ ಪಾತ್ ಹೋಟೆಲ್ ಮತ್ತೆ ಕಸ ಹಾಕುತ್ತಾರೆಂದು  ಆಟೋ ಚಾಲಕ ರವೀಂದ್ರ ಗಂಭೀರ ಆರೋಪ ಮಾಡಿದರು.

ಆಟೋ ನಿಲ್ದಾಣದಲ್ಲಿದ್ದ ಶೌಚಾಲಯ ನಿರ್ವಹಣೆ ಇಲ್ಲದೆ ಮುಚ್ಚಲಾಗಿದ್ದು, ಅದರ ಮುಂದೆಯೆ ಮೂತ್ರ ವಿಸರ್ಜನೆ ಮಾಡುವುದರಿಂದ ಕೊಳಗೇರಿ ಆಗಿ ಮಾರ್ಪಟ್ಟಿದೆ. ಸ್ವಲ್ಪ ದೂರದಲ್ಲೇ ಮತ್ತೊಂದು ಬಿಬಿಎಂಪಿ ನಿರ್ವಹಣೆಯ ಶೌಚಾಲಯ ಇದ್ದರೂ, ಫುಟ್ ಪಾತ್ ಮೇಲೆ ಮೂತ್ರ ವಿಸರ್ಜನೆ ಮಾಡುವುದರಿಂದ ನಮ್ಮ ಆಟೋ ಗಳಿಗೆ ಗಿರಾಕಿಗಳು ಬರುತ್ತಿಲ್ಲ ಎಂದು ಬೇಸರ ವ್ಯಕ್ತ ಪಡಿಸಿದ ರವೀಂದ್ರ, ‌ದಂಡ ವಿಧಿಸುವುದಾಗಿ ಬಿಬಿಎಂಪಿ ಅಧಿಕಾರಿಗಳು ಕೇವಲ ಬಾಯಿ ಮಾತಿಗಷ್ಟೆ ಸೀಮಿತವಾಗಿದ್ದು, ಕಾರ್ಯರೂಪಕ್ಕೆ ಬಂದಿಲ್ಲ ಎಂದು ಬೇಸರ ವ್ಯಕ್ತಪಡಿಸಿದರು.

ಫ್ರೆಶ್ ನ್ಯೂಸ್

Latest Posts

Featured Videos