ಬೆಂಗಳೂರು: ಪ್ರತಿಯೊಬ್ಬರಿಗೂ ತಮ್ಮ ಮುಖ ಸುಂದರವಾಗಿರಬೇಕು, ಸ್ಕಿನ್ ತುಂಬಾ ಚೆನ್ನಾಗಿರಬೇಕು, ಎಂಬ ಆಸೆ ಇರುತ್ತದೆ. ಅದಕ್ಕಾಗಿ ಮಾರುಕಟ್ಟೆಯಲ್ಲಿ ಸಿಗುವುದು ದುಬಾರಿ ಕ್ರೀಮ್ ಗಳನ್ನು ಬಳಸುತ್ತಾರೆ, ಆದರೆ ಇದರಲ್ಲಿರುವ ರಾಸಾಯನಿಕಗಳಿಂದ ತ್ವಚೆಗೆ ಹಾನಿ ಹೆಚ್ಚಾಗುತ್ತದೆ.
ಸಾಸಿವೆ ಎಣ್ಣೆಯಲ್ಲಿ ವಿಟಮಿನ್ ಬಿ ಎ ಇ ಕ್ಯಾಲ್ಸಿಯಂ ಪ್ರೋಟೀನ್ ಗಳಿವೆ. ಚರ್ಮದ ಸೋಂಕನ್ನು ತಡೆಗಟ್ಟುವ ಜೊತೆಗೆ ತ್ವಚೆಯನ್ನು ಬೆಳ್ಳಗಾಗಿಸುವ ಗುಣ ಸಾಸಿವೆ ಎಣ್ಣೆಗೆ ಇದೆ. ಕಪ್ಪು ಕಲೆಗಳನ್ನು ಹೋಗಲಾಡಿಸುವ ಜೊತೆಗೆ ಕಳೆಗುಂದಿದ ಮುಖವನ್ನು ಹೊಳೆಯುವಂತೆ ಮಾಡುತ್ತದೆ.
ಒಂದು ಚಮಚ ಸಾಸಿವೆ ಎಣ್ಣೆಗೆ ಒಂದು ಚಮಚ ತೆಂಗಿನ ಎಣ್ಣೆ ಸೇರಿಸಿ ರಾತ್ರಿ ಮಲಗುವ ಮುನ್ನ 15 ನಿಮಿಷ ಮಸಾಜ್ ಮಾಡಿ ಬಳಿಕ ಮುಖವನ್ನು ತೊಳೆಯಿರಿ ಸತತವಾಗಿ 15 ದಿನದವರೆಗೆ ಇದನ್ನು ಮುಂದುವರೆಸಿ ತ್ವಚೆ ಹೊಳಪು ಪಡೆದುಕೊಳ್ಳುತ್ತದೆ.
ಬಿಸಿಲಿನಿಂದ ಬಂದಂತಹ ಬಳಿಕ ನಿಮ್ಮ ತ್ವಚೆ ಬಾಡಿ ಕಪ್ಪಾಗಿರುತ್ತದೆ. ಅವಾಗ ಈ ಫೇಸ್ ಪ್ಯಾಕ್ ಪ್ರಯತ್ನಿಸಬಹುದು ಒಂದು ಚಮಚ ಸಾಸಿವೆ ಎಣ್ಣೆ ಅಂಗೈಗೆ ಹಾಕಿ ಸರಿಯಾಗಿ ತಿಕ್ಕಿ ಮುಖಕ್ಕೆ ಮಸಾಜ್ ಮಾಡಿ ಮುಖದಲ್ಲಿ ಕಪ್ಪಾದ ಜಾಗವಿದ್ದರೆ ಅಥವಾ ಮೊಡವೆ ಕಲೆ ಇದ್ದರೆ ಅದನ್ನು ಸಾಸಿವೆ ಎಣ್ಣೆ ಹೋಗಲಾಡಿಸುತ್ತದೆ.
ಒಂದು ಚಮಚ ಸಾಸಿವೆ ಎಣ್ಣೆಗೆ ಅರಿಶಿನ ಪುಡಿ ಕೇಸರಿ ಶ್ರೀಗಂಧ ಕಡಲೆ ಹಿಟ್ಟು ಬೆರೆಸಿ, ವಾರಕ್ಕೆರಡು ಬಾರಿ ಸ್ಕಬ್ ಹಚ್ಚಿಕೊಂಡರೆ ಮುಖ ಸತ್ತ ಚರ್ಮದ ಕೋಶಗಳು ಇಲ್ಲವಾಗುತ್ತದೆ. ಸಾಸಿವೆ ಎಣ್ಣೆಗೆ ನಿಂಬೆರಸ ಹಾಗೂ ಮೊಸರು ಬೆರೆಸಿ ಹಚ್ಚಿಕೊಂಡರೆ ಬ್ಯಾಕ್ಟೀರಿಯ ವಿರೋಧಿ ಗುಣ ಜಾಗೃತಗೊಂಡು ಮೊಡವೆಗಳು ಮೂಡದಂತೆ ತಡೆಯುತ್ತದೆ.