ಮುಸ್ಲಿಮರು ಮತ ಹಾಕದಿದ್ದರೂ ಏನೂ ಸಮಸ್ಯೆಇಲ್ಲ: ವರುಣ್ ಗಾಂಧಿ

ಮುಸ್ಲಿಮರು ಮತ ಹಾಕದಿದ್ದರೂ ಏನೂ ಸಮಸ್ಯೆಇಲ್ಲ: ವರುಣ್ ಗಾಂಧಿ

ಪಿಲಿಭಿಟ್, ಏ. 22 ನ್ಯೂಸ್ ಎಕ್ಸ್ ಪ್ರೆಸ್: ಪಿಲಿಭಿಟ್ ಲೋಕಸಭಾ ಕ್ಷೇತ್ರದ ಬಿಜೆಪಿ ಅಭ್ಯರ್ಥಿ ವರುಣ್ ಗಾಂಧಿ ಯವರು, ಒಂದು ವೇಳೆ ಮುಸ್ಲಿಮರು ನನಗೆ ಮತ ಹಾಕದಿದ್ದರೆ ಏನೂ ಸಮಸ್ಯೆಯಾಗದು ಎಂದು ಹೇಳಿದ್ದಾರೆ. ”ನನ್ನ ಮುಸ್ಲಿಮ್ ಸಹೋದರರಿಗೆ ಒಂದು ಮಾತು ಹೇಳಲು ಬಯಸುವೆ. ನೀವು ನನಗೆ ಮತ ಹಾಕಿದರೆ ತುಂಬಾ ಸಂತೋಷ. ಒಂದು ವೇಳೆ ಮತ ಹಾಕದಿದ್ದರೂ ಕೂಡ ಯಾವುದೇ ಸಮಸ್ಯೆಯಿಲ್ಲ. ಮತ ಹಾಕದಿದ್ದರೂ ನೀವು ನನ್ನ ಬಳಿ ಬಂದು ನಿಮ್ಮ ಕೆಲಸ ಮಾಡಿಸಿಕೊಳ್ಳಬಹುದು. ನಿಮ್ಮ ಸಕ್ಕರೆ ನನ್ನ ಚಹಾಕ್ಕೆ ಮಿಶ್ರಣವಾದರೆ ಚಹಾ ತುಂಬಾ ಸಿಹಿಯಾಗಿರುತ್ತದೆ” ಎಂದರು ತಿಳಿಸಿದರು.

ಫ್ರೆಶ್ ನ್ಯೂಸ್

Latest Posts

Featured Videos