ಹಿಂದೂ ಮುಸ್ಲಿಂ ಸಾಮರಸ್ಯ ಸಾರುವ ಆಡು- ಕುರಿಗಳ ಭರ್ಜರಿ ಜಾತ್ರೆ

ಹಿಂದೂ ಮುಸ್ಲಿಂ ಸಾಮರಸ್ಯ ಸಾರುವ ಆಡು- ಕುರಿಗಳ ಭರ್ಜರಿ ಜಾತ್ರೆ

ಚಾಮರಾಪೇಟೆ, ಆ. 5: ಇಲ್ಲಿನ ಈದ್ಗಾ ಮೈದಾನದಲ್ಲಿ ನಡೆಯುತ್ತಿದೆ, ಭರ್ಜರಿ ಆಡು ಮತ್ತು ಕುರಿಗಳ ಜಾತ್ರೆ. ಇಪ್ಪತ್ತೈದು ದಿನಗಳ ಕಾಲ ನಡೆಯಲಿರುವ ಜಾತ್ರೆಯು ಮಸಲ್ಮಾನರ ಬಕ್ರಿದ್ ಹಬ್ಬದ ಪ್ರಯುಕ್ತ ನಡೆಯುತ್ತದೆ. ತರಹೇವಾರಿ ವಿವಿಧ ಜಾತಿಯ ಕುರಿ ಮತ್ತು ಮೇಕೆಗಳನ್ನು ಐದು, ಹತ್ತು ಸಾವಿರದಿಂದ 1ಲಕ್ಷ ,40 ಸಾವಿರದ ವರೆಗೆ ಮಾರಾಟದ ವಹಿವಾಟು ನಡೆಯುತ್ತಿರುವುದು ವಿಶೇಷ ಆಕರ್ಷಣೆಯಾಗಿದೆ. ಬೆಂಗಳೂರು ಗ್ರಾಮಾಂತರ ಅಲ್ಲದೆ,ಶಿರಾ, ಮಂಡ್ಯ ಮದ್ದೂರು, ಅನಂತಪುರ, ಮಡಕಶಿರ, ಚನ್ನಪಟ್ಟಣ, ಬಾಗಲಕೋಟೆ ಜಿಲ್ಲೆಯ ಅಮೀನಘಡ, ಪಾವಗಡ ಸೇರಿದಂತೆ ರಾಜ್ಯದ ವಿವಿದ ಮೂಲೆಗಳಿಂದ ರೈತರು ಮತ್ತು ದಲ್ಲಾಳಿಗಳು ವಿವಿಧ ಜಾತಿಯ ತಳಿಗಳನ್ನು ತಂದು ಮಾರಾಟಕಿಟ್ಟಿದ್ದಾರೆ.

ಈದ್ಗಾ ಮೈದಾನದಲ್ಲಿ ಕಾಲಿಡಲಾಗದಷ್ಟು ಮರಿಗಳ ಮಾರಾಟ ಮೇಳ ನಡೆಯತ್ತಿದೆ. ಬನ್ನೂರು ಕುರಿಗಳಿಗಿಲ್ಲಿ ಬೇಡಿಕೆ ಜಾಸ್ತಿ ಇದೆ. ಆದರೆ ಗ್ರಾಮೀಣ ಪ್ರದೇಶಗಳಲ್ಲಿ ರೈತರು ಕಾಡಿನಲ್ಲಿ ಮೇಯಿಸಿರುವ ಕುರಿ ಮತ್ತು ಆಡುಗಳ ಮಾಂಸಕ್ಕೆ ಬೇಡಿಕೆ ಜಾಸ್ತಿ ಎಂದು ಹೇಳುತ್ತಾರೆ ಮಟನ್ ಅಂಗಡಿ ಮಾಲೀಕ ಇಮ್ತಿಯಾಜ್ ಪಾಷ.

ಸಾವಿರಾರು ಸಂಖ್ಯೆಯಲ್ಲಿ ಕುರಿ, ಮೇಕೆಗಳು ವ್ಯಾಪಾರಕ್ಕೆ ಇಟ್ಟಿದ್ದಾರಾದರೂ ಈ ವರ್ಷ ವಹಿವಾಟು ಕಡಿಮೆಯಾಗಿದೆ ಎನ್ನುತ್ತಾರೆ ವ್ಯಾಪಾರಿಗಳು. ಕಳೆದ 15 ದಿನಗಳಿಂದ ಈದ್ಗಾ ಮೈದಾನದಲ್ಕಿ ಬೀಡು ಬಿಟ್ಟಿರುವ ವ್ಯಾಪಾರಿಗಳು ಮತ್ತು ರೈರತರು ಟಗರು ಮತ್ತು ಮೇಕೆ ಹೋತಗಳು ಸೊರಗದಿರಲೆಂದು ಮೆಕ್ಕೆಜೋಳ, ಹುರುಳಿ ಹಿಟ್ಟು, ಕಡ್ಲೆ ಹೊಟ್ಟಿನಂತಹ ಗುಣಮಟ್ಟದ ಮೇವು ಹಾಕುತ್ತಿದ್ದಾರೆ.

ಮದ್ದೂರಿನ ರಿಯಾಜ್ ಅವರು ತಮ್ಮ ಮನೆಯ ಕುರಿಯೊಂದರ ಮರಿಯನ್ನು ಒಂದು ವರ್ಷದಿಂದ ಬೆಳೆಸಿ ತಂದಿರುವ  ಟಗರು 85 ಕೆಜಿ ತೂಕವಿದೆ. ಶಿರಾ ತಾಲ್ಲೂಕಿನ ದಾಸರಹಳ್ಳಿ ವಾಸಿ ದಲ್ಲಾಳಿ ಕೆಂಪಣ್ಣ ಅವರು ಕಳೆದ 10 ವರ್ಷಗಳಿಂದ ಇಲ್ಲಿಗೆ  ಕುರಿ ಮೇಕೆಗಳನ್ನು ತಂದು ಮಾರಾಟ ಮಾಡುತ್ತಾರೆ. ಪ್ರತಿ ವರ್ಷ ಉತ್ತಮ ವ್ಯಾಪಾರ ಆಗುತ್ತಿತ್ತು. ಈ ವರ್ಷವೆ ವ್ಯಾಪಾರ ಅಷ್ಟಾಗಿ ಇಲ್ಲ ಎಂದು ಬೇಸರ ವ್ಯಕ್ತ ಪಡಿಸಿದರು.

ಬಾಗಲಕೋಟೆ ಅಮೀನಘಡದ

ಮಹಮದ್ ಪಾಷ ಅವರ ಕಂದು ಬಣ್ಣದ ಟಗರಿಗೆ 1ಲಕ್ಷ 50 ಸಾವಿರ ವ್ಯಾಪಾರ ಹೇಳುತ್ತಿದ್ದಾರೆ. ಆದರೆ, ಇನ್ನೂ ಮಾರಾಟ ಆಗಿಲ್ಲ ನನ್ನ ಟಗರು ಮಾರಾಟ ಆಗದಿದ್ದರೂ ಪರವಾಗಿಲ್ಲ ಮರಿಕೊಳ್ಳಲು ಬರುವವರು ನನ್ನ ಟಗರು ನೋಡಿ ಶಬ್ಬಾಸ್ ಎನ್ನಲಿ ಸಾಕು ಎನ್ನುವ ಪಾಷ ನಾನು ಕ್ರೇಜಿಗಾಗಿ ಹೊರ ರಾಷ್ಟ್ರಗಳ ಮರಿಗಳನ್ನು ತಂದು ಮೇಯಿಸುವುದು ನಮ್ಮ ಮನೆತನದ ವಂಶಪಾರಂಪರ್ಯವಾಗಿ ಬಂದಿದೆ ಎಂದು ಹೇಳಿದರು.

ಚನ್ನಪಟ್ಟಣ ತಾಲ್ಲೂಕಿನ ಸಿದ್ದನಹಳ್ಳಿ ಪುಟ್ಟಲಿಂಗಯ್ಯ ಅವರು ತಾವೇ ಸಾಕಿ ಬೆಳೆಸಿರುವ 10 ಆಡುಗಳನ್ನು ತಂದು ಮಾರಾಟಕ್ಕೆ ಒಂದೊಂದು ಆಡು ಅರವತ್ತರಿಂದ ಎಪ್ಪತ್ತು ಕೇಜಿ ತೂಕ ಬರುತ್ತವೆ. ತಲೆಗೆ ಎಂಭತ್ತು ಸಾವರ ವ್ಯಾಪಾರ ಹೇಳ್ತಿದಿನಿ ಒಂದೈದು ಸಾವಿರ ಕಡಿಮೆ ಮಾಡಿಕೊಂಡು ಬಿಡುತ್ತೇನೆ ಎಂದು ಹೇಳಿದರು.

ಒಟದಟಾರೆ ಈ ವರ್ಷ ವ್ಯಾಪಾರ ಅಷ್ಟಾಗಿ ನಡಿತಿಲ್ಲ, ಲಾಭನೋ ನಷ್ಟನೋ ಹೆಚ್ಚು ಕಮ್ಮಿ ನೋಡಿಕೊಂಡು ವ್ಯಾಪಾರ ಮಾಡಬೇಕು.

ನಾವು ಪ್ರತಿ ವಾರ ನಡೆಯವ ಸಂತೆಗಳಿಗೆ ಹೋಗುತ್ತೇವೆ ಅಲ್ಲಿನ ವ್ಯಾಪಾರ ಇಲ್ಲಿ ಆಗ್ತಿಲ್ಲ ಎಂದು ಹೇಳಿದ ಅನಂತಪುರದ ಅಶ್ವತ್ತಪ್ಪ ಇಲ್ಲಿ ನಡೆಯೊದು ಇಪ್ಪತ್ತೈದು ದಿನಗಳ ಸಂತೆ ಆದರೂ, ಜಾತ್ರೆ ರೀತಿ ಇರುತ್ತದೆ. ಹೊರಗಿನಿಂದಲೂ ವ್ಯಾಪಾರಿಗಳು ಬರುತ್ತಾರೆಂದು ನಾವು ಪ್ರತಿ ವರ್ಷ ಇಲ್ಲಿಗೆ ವ್ಯಾಪಾರಕ್ಕೆ ಬರುತ್ತಿರುವುದಾಗಿ ತಿಳಿಸಿದರು.

ಫ್ರೆಶ್ ನ್ಯೂಸ್

Latest Posts

Featured Videos