ಶ್ರೀ ಮುರಳಿ ಚಿತ್ರದಲ್ಲಿ ರಚಿತಾ ರಾಂ ಗೆಸ್ಟ್ ಅಪಿಯರೆನ್ಸ್

ಶ್ರೀ ಮುರಳಿ ಚಿತ್ರದಲ್ಲಿ ರಚಿತಾ ರಾಂ ಗೆಸ್ಟ್ ಅಪಿಯರೆನ್ಸ್

ಬೆಂಗಳೂರು, . 2, ನ್ಯೂಸ್ ಎಕ್ಸ್ ಪ್ರೆಸ್: ಕನ್ನಡ ಚಿತ್ರರಂಗದಲ್ಲಿ ರಚಿತಾ ರಾಂ ಇತ್ತೀಚೆಗೆ ಸ್ಟಾರ್ ನಟರಿಗೆ ಲಕ್ಕಿ ಸ್ಟಾರ್ ಆಗಿ ಗುರುತಿಸಿಕೊಳ್ಳುತ್ತಿದ್ದಾರೆ. ಇದೀಗ ಶ್ರೀಮುರಳಿ ಅಭಿನಯದ ‘ಭರಾಟೆ’ ಚಿತ್ರದ ಹಾಡೊಂದರಲ್ಲಿ ಗೆಸ್ಟ್ ಅಪಿಯರೆನ್ಸ್ ಮಾಡಲು ರಚಿತಾ ಒಪ್ಪಿಕೊಂಡಿರುವ ಸುದ್ದಿ ಬಂದಿದೆ.

ರಚಿತಾ ರಾಂ ಈ ಹಿಂದೆ ‘ರಥಾವರ’ ಚಿತ್ರದಲ್ಲಿ ಶ್ರೀ ಮುರಳಿಗೆ ಜೋಡಿಯಾಗಿದ್ದರು. ಈಗ ‘ಭರಾಟೆ’ಯಲ್ಲಿ ಸ್ಟಾರ್ ನಟಿಯಾಗಿಯೇ ಒಂದು ಹಾಡಿನಲ್ಲಿ ನಾಯಕ ಶ್ರೀ ಮುರಳಿ ಮತ್ತು ಶ್ರೀಲೀಲಾ ಜತೆಗೆ ಹೆಜ್ಜೆ ಹಾಕಲಿದ್ದಾರೆ.

ಹಾಡಿನ ದೃಶ್ಯವೊಂದಕ್ಕೆ ಸ್ಟಾರ್ ನಟಿಯೊಬ್ಬರ ಅಗತ್ಯವಿತ್ತು. ಅದಕ್ಕೆ ರಚಿತಾ ಬಳಿ ಕೇಳಿದಾಗ ಖುಷಿಯಿಂದಲೇ ಒಪ್ಪಿಕೊಂಡರು ಎಂದು ನಿರ್ದೇಶಕ ಚೇತನ್ ಹೇಳಿಕೊಂಡಿದ್ದಾರೆ

ಫ್ರೆಶ್ ನ್ಯೂಸ್

Latest Posts

Featured Videos