ಕೊಲೆ ಆರೋಪಿ ಕಾಲಿಗೆ ಗುಂಡೇಟು

ಕೊಲೆ ಆರೋಪಿ ಕಾಲಿಗೆ ಗುಂಡೇಟು

ಪೀಣ್ಯದಾಸರಹಳ್ಳಿ, ಜು. 17 : ಕೊಲೆ ಮಾಡಿ ಪರಾರಿಯಾಗಿದ್ದ ಆರೋಪಿ ಕಾಲಿಗೆ ಪೀಣ್ಯ ಪೊಲೀಸರ ತಂಡ ಗುಂಡು ಹೊಡೆದು ಬಂಧಿಸಿರುವ ಘಟನೆ ಸೋಲದೇವನಹಳ್ಳಿ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ನಡೆದಿದೆ.

ಭಾನುವಾರ ಸಿದ್ದ ಉಡುಪು ಕಾರ್ಖಾನೆಯಲ್ಲಿ ಕೆಲಸ ಮಾಡುತ್ತಿದ್ದ ಕಿರಣ್ ಜೊತೆಯಲ್ಲಿ ತಡರಾತ್ರಿವರೆಗೂ ಬಾರ್ ನಲ್ಲಿ ಕಂಠ ಪೂರ್ತಿ ಕುಡಿದಿದ್ದಾರೆ. ಕುಡಿದ ಅಮಲಿನಲ್ಲಿ ಇಬ್ಬರಿಗೂ ಮಾತಿಗೆ ಮಾತು ಬೆಳೆದು ಜಗಳ ಮಾಡಿಕೊಂಡಿದ್ದಾರೆ. ಮೊದಲೇ ಕುಡಿದ ಮತ್ತಿನಲ್ಲಿದ್ದ ಸಂದೀಪ್ ಕೈಗೆ ಸಿಕ್ಕ ಕಬ್ಬಿಣದ ರಾಡ್ನಿಂದ ಕಿರಣ್ ತಲೆಗೆ ಹೊಡೆದು ಸಾಯಿಸಿದ್ದಾನೆ. ನಂತರ ಕಲ್ಲಿನಿಂದ ಮುಖ ಜಜ್ಜಿ ಸಂದೀಪ್ ಪರಾರಿಯಾಗಿದ್ದನು.

ಕೊಲೆ ಮಾಡಿದ್ದು ಯಾಕೆ…?

ಕೊಲೆಯಾದ ಕಿರಣ್ ತನ್ನ ಸ್ನೇಹಿತನಿಗೆ ಹ ನೀಡಿದ್ದು ಆತ ಕೊಡುತ್ತಿಲ್ಲ ಹೇಗಾದರೂ ಆತನಿಂದ ದುಡ್ಡನ್ನು ವಸೂಲಿ ಮಾಡಿಕೊಡು ಎಂದು ಸಂದೀಪ್ ಗೆ 20000 ಹಣ ನೀಡಿದ್ದನಂತೆ, ಕೆಲಸ ಆಗದೇ ಇರುವುದರಿಂದ ಕಿರಣ್ ಸಂದೀಪ್ ಬಳಿ ಹಣ ವಾಪಸ್ ಕೇಳಿದ್ದಾನೆ, ಇದರಿಂದ ರೊಚ್ಚಿಗೆದ್ದು ಈ ಕೊಲೆ ಮಾಡಿದ್ದಾನೆ, ಈ ಕೊಲೆಯಿಂದ ಏರಿಯಾದಲ್ಲಿ ದೊಡ್ಡ ರೌಡಿಯಾಗಬಹುದು ಎಂಬ ಆಲೋಚನೆ ಸಂದೀಪ್ ಗೆ ಬಂದಿದ್ದೇ ಕೊಲೆಗೆ ಕಾರಣವಾಗಿದೆ.

ಇನ್ನೂ ಕಿರಣ್ ಕೊಲೆ ಪ್ರಕರಣ ಪೀಣ್ಯ ಪೊಲೀಸ್ ಠಾಣೆಯಲ್ಲಿ ದಾಖಲಿಸಿಕೊಂಡ ಪೊಲೀಸರು ಕೊಲೆ ಆರೋಪಿಗಾಗಿ ಇನ್ಸ್ಪೆಕ್ಟರ್ ಶ್ರೀನಿವಾಸ್ ನೇತೃತ್ವದಲ್ಲಿ ಒಂದು ತಂಡ ರಚನೆ ಮಾಡುತ್ತಾರೆ. ಈ ವೇಳೆ ಸಂದೀಪ್ ಚಿಕ್ಕಬಾಣಾವರದ ಗಾಣಿಗರಹಳ್ಳಿಯಲ್ಲಿ ಆಶ್ರಯ ಪಡೆದಿದ್ದಾನೆ ಅನ್ನೋ ಮಾಹಿತಿ ಸಿಕ್ಕಿತು.

ಕೂಡಲೆ ಕಾರ್ಯ ಪ್ರವೃತ್ತರಾದ ಪೀಣ್ಯ ಪೊಲೀಸರು ನೆನ್ನೆ ಸಬ್ ಇನ್ಸ್ಪೆಕ್ಟರ್ ರಘುಪ್ರಸಾದ್, ಪೊಲೀಸ್ ಪೇದೆ ತಿಮ್ಮರಾಜು ಅವರನ್ನೊಳಗೊಂಡ ಇನ್ಸ್ಪೆಕ್ಟರ್ ಶ್ರೀನಿವಾಸ್ ತಂಡ ಗಾಣಿಗರಹಳ್ಳಿಗಡ ತೆರಳಿ ಸಂದೀಪ್ ನನ್ನ ಶರಣಾಗುವಂತೆ ಹೇಳುತ್ತಾರೆ. ಆ ಸಮಯದಲ್ಲಿ ಸಬ್ ಇನ್ಸ್ಪೆಕ್ಟರ್ ಮತ್ತು ಪೇದೆ ಮೇಲೆ ಮಾರಾಕಾಸ್ತ್ರದಿಂದ ಹಲ್ಲೆ ಮಾಡಿ ಎಸ್ಕೇಪ್ ಆಗಲು ಪ್ರಯತ್ನಿಸುತ್ತಾನೆ. ಈ ವೇಳೆ ಮೂರು ಗುಂಡು ಹಾರಿಸಿದಾಗ ಎರಡು ಗುಂಡುಗಳು ಆರೋಪಿ ಸಂದೀಪ್ ಕಾಲಿಗೆ ಹೊಕ್ಕಿ ಕುಸಿದು ಬೀಳುತ್ತಾನೆ. ಕೂಡಲೆ ಆತನನ್ನು ಬಂಧಿಸಿದ ಪೊಲೀಸರು ಚಿಕಿತ್ಸೆಗೆ ಸಪ್ತಗಿರಿ ಆಸ್ಪತ್ರೆಗೆ ಸೇರಿಸಿದ್ದಾರೆ.

 

 

ಫ್ರೆಶ್ ನ್ಯೂಸ್

Latest Posts

Featured Videos