ಅಮ್ಮನ ಹೆಗಲೇ ಆಸರೆ

ಅಮ್ಮನ ಹೆಗಲೇ ಆಸರೆ

ಚಿತ್ರದುರ್ಗ, ನ. 29 : ಮನೆಯೇ ಮೊದಲ ಪಾಠ ಶಾಲೆ ತಾಯಿ ಮೊದಲು ಗುರು ಗಾದೆ ಸತ್ಯ. ತಂದೆ ತಾಯಿಯಂದಿರು ಇಂತಹ ವಿಶೇಷಚೇತನ ಮಗನ ಪ್ರೀತಿಗೆ ಒಳಗಾಗದೆ ಮಗುವಿನ ಬೆಳವಿನಿಗೆಗೆ ಪ್ರೋತ್ಸಾಹ ನೀಡಬೇಕು. ತನ್ನ ಮಗ ದೊಡ್ಡ ಮಟ್ಟ ಅಧಿಕಾರಿಯಾಗಬೇಕೆಂದು ವಿಶೇಷಚೇತನ ಮಗನ ವಿದ್ಯಾಭ್ಯಾಸಕ್ಕಾಗಿ ತಾಯಿಯ ಹೆಗಲೇ ಬಂಡಿಯಾಗಿರುವ ದೃಶ್ಯವೊಂದು ಚಿತ್ರದುರ್ಗ ಜಿಲ್ಲೆ ಚಳ್ಳಕೆರೆ ತಾಲೂಕಿನ ಕಡುದರಹಳ್ಳಿಯಲ್ಲಿ ಕಂಡು ಬಂದಿದೆ.
“ಊರಿಗೆ ದೊರೆ ಆದರೂ ತಾಯಿಗೆ ಮಗನೆ” ಗಾದೆಯನ್ನು ನೆನೆಯಬಹುದಾಗಿದೆ.  ತಾಯಿಗೆ ಅವಳ ಮಗು ದೊಡ್ಡವನಾಗಿ, ದೊಡ್ಡ ಸಾಧನೆ ಮಾಡಿದರೂ, ಅವನು ಇನ್ನು ಚಿಕ್ಕ ವಯಸ್ಸಿನವನು, ಎನ್ನುವ ಭಾವನೆ ಇರುತ್ತದೆ. ಎಷ್ಟು ವರ್ಷಗಳು ಆದರೂ ಇನ್ನು ತನ್ನ ಕೈ ಹಿಡಿದು ನಡೆಯುವ ಮಗು ಎಂದು ಎಣಿಸುತ್ತಾಳೆ. ತಂತ್ರಜ್ಞಾನದ ಯುಗದಲ್ಲೂ ಈ ಗ್ರಾಮಕ್ಕೆ ಸಾರಿಗೆ ವ್ಯವಸ್ಥೆಯಿಲ್ಲ. ಹೀಗಾಗಿ ಆಟೋ, ಬಸ್ ಇಲ್ಲವೆಂಬ ನೆಪ ಹೇಳಿ ತನ್ನ ಮಗನ ವಿದ್ಯಾಭ್ಯಾಸ ಮೊಟಕುಗೊಳಿಸದ ವಾತ್ಸಲ್ಯಮಯಿ ತಾಯಿ ಜಯಲಕ್ಷ್ಮಿ ತಮ್ಮ ವಿಶೇಷ ಚೇತನನಾಗಿರುವ ಮಗನಾದ ರಾಜೇಶ್ ಬಾಬುನನ್ನು ನಿತ್ಯ ತನ್ನ ಹೆಗಲ ಮೇಲೆ ನಾಲ್ಕು ಕಿ.ಮೀ ಹೊತ್ತುಕೊಂಡು ಓದಿಸುತ್ತಿದ್ದಾರೆ.
ಏಳನೇ ತರಗತಿಯವರೆಗೆ ತಮ್ಮ ಸ್ವ-ಗ್ರಾಮವಾಗಿರುವ ಕಡುದರಹಳ್ಳಿಯಲ್ಲಿ ಓದಿದ್ದ ಬಾಬುಗೆ ಓಡಾಡಲು ಶಕ್ತಿಯಿಲ್ಲವಾದರೂ ವಿದ್ಯಾಭ್ಯಾಸದ ಚಿತ್ತ ಮಾತ್ರ ಕಡಿಮೆಯಾಗಿಲ್ಲ. ಹೀಗಾಗಿ ತನ್ನ ತಾಯಿಯ ಹೆಗಲ ಆಸರೆ ಪಡೆದು ಕಡುದರಹಳ್ಳಿಯಿಂದ ಮಿರಾಸಾಬಿಹಳ್ಳಿಯ ರಾಣಿಕೆರೆ ಹೈಸ್ಕೂಲಿಗೆ ಬಂದು ಎಂಟನೇ ತರಗತಿ ಓದುತ್ತಿದ್ದಾನೆ.

ರಾಜೇಶನ ಕನಸು :

ಐಎಎಸ್ ಓದಬೇಕೆಂಬ ಕನಸು ಹೊತ್ತಿರುವ ರಾಜೇಶನ ಕನಸು ಈಡೇರಿಸಲು ಜಯಲಕ್ಷ್ಮಿ ತನ್ನ ಜೀವನ ಧಾರೆ ಎರೆಯುತ್ತಿದ್ದಾರೆ. ಜಯಲಕ್ಷ್ಮಿ ಅವರಿಗೆ ಮೂವರು ಮಕ್ಕಳಿದ್ದು, ಮೊದಲನೇ ಮಗ ರಾಜೇಶ್ಗೆ ಅಂಗವಿಕಲತೆ ಕಾಡುತ್ತಿದೆ. ಪತಿ ಇಲ್ಲವಾದರೂ ಎದೆಗುಂದದ ಜಯಲಕ್ಷ್ಮಿ, ಸಣ್ಣಪುಟ್ಟ ಕೂಲಿ ಕೆಲಸ ಮಾಡಿ ಮೂವರು ಮಕ್ಕಳ ವಿದ್ಯಾಭ್ಯಾಸಕ್ಕೆ ಒತ್ತು ನೀಡುತ್ತಿದ್ದಾರೆ.

ಫ್ರೆಶ್ ನ್ಯೂಸ್

Latest Posts

Featured Videos