ಮುಂಬೈ: ಶೇರು 113 ಅಂಕ ಏರಿಕೆ

ಮುಂಬೈ: ಶೇರು 113 ಅಂಕ ಏರಿಕೆ

ಮುಂಬೈ: ಆರಂಭಿಕ ವಹಿವಾಟಿನಲ್ಲಿ ಕುಸಿತ ಕಂಡಿದ್ದ ಮುಂಬಯಿ ಶೇರು ಪೇಟೆ ಅನಂತರದಲ್ಲಿ ಚೇತರಿಕೆಯನ್ನು ಕಂಡು ಇಂದು ಸೋಮವಾರದ ವಹಿವಾಟನ್ನು 113.31 ಅಂಕಗಳ ಮುನ್ನಡೆಯೊಂದಿಗೆ
36,582.74 ಅಂಕಗಳ ಮಟ್ಟದಲ್ಲಿ ಕೊನೆಗೊಳಿಸಿತು.

ಮುಂಬಯಿ ಶೇರು ಮಾರುಕಟ್ಟೆಯ ಇಂದಿನ ತೇಜಿಗೆ ರಿಲಯನ್ಸ್‌ ಶೇರು ಮತ್ತು ವಿದೇಶೀ ಹೂಡಿಕೆದಾರರಿಂದ ನಡೆದ ಭರಾಟೆಯ ಮುಂಚೂಣಿ ಶೇರುಗಳ ಖರೀದಿಯೇ ಕಾರಣವಾಯಿತು.

ರಾಷ್ಟ್ರೀಯ ಶೇರು ಮಾರುಕಟ್ಟೆಯ ನಿಫ್ಟಿ ಸೂಚ್ಯಂಕ 18.60 ಅಂಕಗಳ ಏರಿಕೆಯೊಂದಿಗೆ ದಿನದ ವಹಿವಾಟನ್ನು 10,912.25
ಅಂಕಗಳ ಮಟ್ಟದಲ್ಲಿ ಕೊನೆಗೊಳಿಸಿತು.

ಮುಂಬಯಿ ಶೇರು ಪೇಟೆಯಲ್ಲಿಂದು ಒಟ್ಟು
2,761 ಕಂಪೆನಿಗಳ ಶೇರುಗಳು ವಹಿವಾಟಿಗೆ ಒಳಪಟ್ಟವು; ಈ ಪೈಕಿ
781 ಶೇರುಗಳು ಮುನ್ನಡೆ ಸಾಧಿಸಿದವು.

ಫ್ರೆಶ್ ನ್ಯೂಸ್

Latest Posts

Featured Videos