ಮೊದಲ ಬಾರಿಗೆ ಮುಂಬೈನಲ್ಲಿ ನದಿ ಕೆಳಗೆ ಮೆಟ್ರೋ ಮಾರ್ಗ.!

ಮೊದಲ ಬಾರಿಗೆ ಮುಂಬೈನಲ್ಲಿ ನದಿ ಕೆಳಗೆ ಮೆಟ್ರೋ ಮಾರ್ಗ.!

ಮುಂಬೈ, ಮೇ. 16, ನ್ಯೂಸ್ ಎಕ್ಸ್ ಪ್ರೆಸ್: ಮೆಟ್ರೋ ಮಾರ್ಗ ಭೂಮಿ ಓಳಗೆ ಆಯಿತು ಇದೀಗ ನದಿ ಕೆಳಗೆ ಮೆಟ್ರೋ ಮಾರ್ಗ ನಿರ್ಮಿಸಲು ಪ್ರಯತ್ನ ನಡೆಯುತ್ತಿದೆ. ಹೌದು, ಮುಂಬೈ ಮೆಟ್ರೋ ನಿಗಮ ನದಿಯ ಕೆಳಗೆ ಮೆಟ್ರೋ ಮಾರ್ಗ ನಿರ್ಮಿಸಲು ಮುಂದಾಗಿದ್ದು, ಕಾಮಗಾರಿಯೂ  ಕೂಡ ಆರಂಭಗೊಂಡಿದೆ.

ಧಾರಾವಿ ಹಾಗೂ ಬಾಂದ್ರಾ ಕುರ್ಲಾ ಕಾಂಪ್ಲೆಕ್ಸ್ ನಡುವೆ ಮೀಠಿ ನದಿ ಆಳದಲ್ಲಿ ಅಂದಾಜು 170 ಮೀಟರ್ ಉದ್ದದ ಮೆಟ್ರೋ ಸಾಗಲಿದೆ.

ಈ ಯೋಜನೆಗೆ ಸುಮಾರು 54 ಸಾವಿರ ಕೋಟಿ ವೆಚ್ಚವಾಗಲಿದೆ ಎಂದು ಅಂದಾಜಿಸಲಾಗಿದೆ. ನದಿ ಕೆಳಗೆ ಸುರಂಗ ಕೊರೆಯುವ ಮೊದಲು ಸುರಕ್ಷಿತ ಪರದೆ ನಿರ್ಮಿಸಲಾಗುತ್ತದೆ.

ನದಿ ನೀರಿನ ಒತ್ತಡ 1 ಸವಾಲು ಅಷ್ಟೇ ಅಲ್ಲದೆ ಅಲ್ಲಿರುವ ಬಂಡೆಗಳು ದುರ್ಬಲವಾಗಿರುವುದರಿಂದ ನದಿ ನೀರಿನ ಪ್ರಮಾಣ ಹೆಚ್ಚಿದರೆ ಕೆಸರು ಮತ್ತು ನೀರು ಸುರಂಗದಲ್ಲಿ ಒಳನುಸುಳದಂತೆ ಮಾಡುವುದು ಮತ್ತೊಂದು ಸವಾಲಿನ ಕೆಲಸವಾಗಿದೆ.

ಮುಂಬೈ ಮೆಟ್ರೋದಲ್ಲಿ ಮೊದಲ ಬಾರಿಗೆ ಇಂಥ ಮಾರ್ಗ ನಿರ್ಮಾಣ ಮಾಡಲಾಗುತ್ತಿದೆ. ನದಿ ಕೆಳಗೆ 170 ಮೀಟರ್ ಉದ್ದದ ಸುರಂಗ ಮಾರ್ಗ ಕೊರೆಯುವುದು ಒಂದು ಸವಾಲಿನ ಕೆಲಸ, ಇದಕ್ಕೆ ಅತ್ಯಾಧುನಿಕ ತಂತ್ರಜ್ಞಾನದ ಅಗತ್ಯವಿದೆ. ಈಗ ನ್ಯೂ ಅಸ್ಟ್ರೇನ್ ಟೆಕ್ನಾಲಜಿ ಮೆಥೆಡ್ ಮೂಲಕ ಸುರಂಗ ಕಾಮಗಾರಿ ಆರಂಭಿಸಲಾಗಿದೆ ಎಂದು ಎಂಎಂಆರ್ಸಿ ಯೋಜನಾ ನಿರ್ದೇಶಕ ಎಸ್ ಕೆ ಗುಪ್ತಾ ಮಾಹಿತಿ ನೀಡಿದ್ದಾರೆ.

ಫ್ರೆಶ್ ನ್ಯೂಸ್

Latest Posts

Featured Videos