42ನೇ ಬಾರಿಗೆ ರಣಜಿ ಟ್ರೋಫಿ ಗೆದ್ದ ಮುಂಬೈ

42ನೇ ಬಾರಿಗೆ ರಣಜಿ ಟ್ರೋಫಿ ಗೆದ್ದ ಮುಂಬೈ

ಬೆಂಗಳೂರು: ರಣಜಿ ಟ್ರೋಫಿ ಫೈನಲ್ ಪಂದ್ಯದಲ್ಲಿ ವಿದರ್ಭ ತಂಡವನ್ನು 169 ರನ್​ಗಳ ಅಂತರದಿಂದ ಸೋಲಿಸಿದ ಮುಂಬೈ ತಂಡವು ದಾಖಲೆಯ 42ನೇ ಟ್ರೋಫಿಗೆ ಮುತ್ತಿಕ್ಕುವಲ್ಲಿ ಯಶಸ್ವಿಯಾಗಿದೆ.

ದಾಖಲೆಯ ರಣಜಿ ಟ್ರೋಫಿಗೆ ಮುಂಬೈ ತಂಡ ಮುತ್ತಿಕ್ಕಿದೆ. ಪ್ರಶಸ್ತಿ ಸುತ್ತಿನ ಪಂದ್ಯದಲ್ಲಿ ವಿದರ್ಭ ತಂಡವನ್ನು ಮಣಿಸಿ ಅಜಿಂಕ್ಯ ರಹಾನೆ ನೇತೃತ್ವದ ಮುಂಬೈ ದಾಖಲೆಯ 42ನೇ ಟ್ರೋಫಿಯನ್ನು ಎತ್ತಿಹಿಡಿದಿದೆ. ಫೈನಲ್​​ನಲ್ಲಿ 169 ರನ್​ಗಳಿಂದ ಸೋಲನುಭವಿಸಿದ ವಿದರ್ಭ, 3ನೇ ಪ್ರಶಸ್ತಿ ಗೆಲ್ಲುವಲ್ಲಿ ವಿಫಲವಾಗಿದ್ದು ರನ್ನರ್​ಅಪ್​ಗೆ ತೃಪ್ತಿಯಾಗಿದೆ.

538 ರನ್​ಗಳ ದೊಡ್ಡ ಮೊತ್ತದ ಗುರಿ ಪಡೆದಿದ್ದ ವಿದರ್ಭ, ಕರುಣ್ ನಾಯರ್ (74), ಅಕ್ಷಯ್ ವಾಡ್ಕರ್ (102), ಹರ್ಷ ದುಬೆ ಹೋರಾಟದ ನಡುವೆಯೂ ಚಾಂಪಿಯನ್ ಆಗಲು ಸಾಧ್ಯವಾಗಲಿಲ್ಲ. ಈ ಹಿಂದೆ ಫೈನಲ್​ಗೇರಿದ್ದ ಎರಡೂ ಬಾರಿಯೂ ಟ್ರೋಫಿ ಗೆದ್ದಿದ್ದ ವಿದರ್ಭ ಈ ಬಾರಿ ರನ್ನರ್​ಅಪ್​ನೊಂದಿಗೆ ಟೂರ್ನಿಯನ್ನು ಮುಗಿಸಿದೆ.

ಮುಂಬೈನ ವಾಂಖೆಡೆ ಮೈದಾನದಲ್ಲಿ ನಡೆದ ಈ ಪಂದ್ಯದಲ್ಲಿ ಮೊದಲು ಬ್ಯಾಟಿಂಗ್ ನಡೆಸಿದ ಮುಂಬೈ ಶಾರ್ದೂಲ್ ಠಾಕೂರ್ (75) ಅವರ ಭರ್ಜರಿ ಅರ್ಧಶತಕದ ನೆರವಿನಿಂದ 64.3 ಓವರ್​​ಗಳಲ್ಲಿ 224 ರನ್​ಗಳಿಗೆ ಆಲೌಟ್ ಆಗಿತ್ತು. ಇದಕ್ಕೆ ಉತ್ತರವಾಗಿ ಇನ್ನಿಂಗ್ಸ್​ ಆರಂಭಿಸಿದ ವಿದರ್ಭ 105 ರನ್​ಗಳ ಅಲ್ಪಮೊತ್ತಕ್ಕೆ ಆಲೌಟ್ ಆಯಿತು.’

ಇದರೊಂದಿಗೆ 119 ರನ್​ಗಳ ಮುನ್ನಡೆ ಪಡೆದ ಮುಂಬೈ, ಎರಡನೇ ಇನ್ನಿಂಗ್ಸ್​​ನಲ್ಲೂ ಭರ್ಜರಿ ಪ್ರದರ್ಶನ ನೀಡಿತು. 2ನೇ ಇನ್ನಿಂಗ್ಸ್​​ನಲ್ಲಿ 130.2 ಓವರ್​​ಗಳಲ್ಲಿ 418 ರನ್ ಕಲೆ ಹಾಕಿತು.

ಮುನ್ನಡೆ ಪಡೆದಿದ್ದ 119 ರನ್ ಮತ್ತು ಎರಡನೇ ಇನ್ನಿಂಗ್ಸ್​​ನಲ್ಲಿ ಕಲೆ ಹಾಕಿದ್ದ 418 ರನ್ ಸೇರಿ ಮುಂಬೈ, ವಿದರ್ಭ ತಂಡಕ್ಕೆ 537 ರನ್​​ಗಳ ಗುರಿ ನೀಡಿತು. ಈ ಗುರಿ ಹಿಂಬಾಲಿಸಿದ ವಿದರ್ಭ, 134.3 ಓವರ್​​ಗಳಲ್ಲಿ 368 ರನ್ ಗಳಿಸಿ 169 ರನ್​ಗಳಿಂದ ಸೋಲನುಭವಿಸಿತು. ಇದರೊಂದಿಗೆ ಮುಂಬೈ ಚಾಂಪಿಯನ್ ಪಟ್ಟ ಅಲಂಕರಿಸಿ ಸಂಭ್ರಮಿಸಿತು.

 

ಫ್ರೆಶ್ ನ್ಯೂಸ್

Latest Posts

Featured Videos