ಪಾಂಡ್ಯಗೆ 100 ಕೋಟಿ ನೀಡಿದ ಮುಂಬೈ!!

ಪಾಂಡ್ಯಗೆ 100 ಕೋಟಿ ನೀಡಿದ ಮುಂಬೈ!!

ಬೆಂಗಳೂರು: ಭಾರತದ ಅತ್ಯಂತ ದೊಡ್ಡ ಕ್ರಿಕೆಟ್‌ ಎಂದರೆ ಅದು ಐ ಪಿ ಎಲ್‌ . ಇದರಲ್ಲಿ ಯಾರು ಬೇಕಾದರು ಹೀರೋಗಳಾಗಬಹುದು. ಪಾಂಡ್ಯ ಇಂಜ್ಯೂರಿಯಿಂದ ಬಳಲುತ್ತಿದ್ದಾಗ ಮುಂಬೈ ಅವರನ್ನು ಕೈ ಬಿಟ್ಟಿತ್ತು. ಅಗ ಗುಜರಾತ್ ಟೈಟಾನ್ಸ್  ಅವರನ್ನು ಕೊಂಡಿಕೊಂಡು ಅವರನ್ನು ಟೀಂ ನಾಯಕರನ್ನಾಗಿ ಮಾಡಿದರು. ಇವರು  ಮೊದಲ ಆವೃತ್ತಿಯಲ್ಲಿ ತಂಡವನ್ನು ಚಾಂಪಿಯನ್‌ ಮಾಡಿದರು. ಇಂಡಿಯನ್ ಪ್ರೀಮಿಯರ್ ಲೀಗ್​ ಸೀಸನ್​-17 ರಲ್ಲಿ ಹಾರ್ದಿಕ್ ಪಾಂಡ್ಯ  ಮುಂಬೈ ಇಂಡಿಯನ್ಸ್​ ಪರ ಕಣಕ್ಕಿಳಿಯಲಿರುವುದು ಗೊತ್ತೇ ಇದೆ. ಗುಜರಾತ್ ಟೈಟಾನ್ಸ್ ತಂಡದಲ್ಲಿದ್ದ ಪಾಂಡ್ಯರನ್ನು ಐಪಿಎಲ್ ಹರಾಜಿಗೂ ಮುನ್ನ ಮುಂಬೈ ಇಂಡಿಯನ್ಸ್​ ಫ್ರಾಂಚೈಸಿ ಟ್ರೇಡ್ ಮಾಡಿಕೊಂಡಿತ್ತು.ಗುಜರಾತ್ ಟೈಟಾನ್ಸ್​ ಫ್ರಾಂಚೈಸಿ ಮುಂದಿಟ್ಟ ವರ್ಗಾವಣೆ ಶುಲ್ಕವನ್ನು ಒಪ್ಪಿಕೊಂಡ ಮುಂಬೈ ಇಂಡಿಯನ್ಸ್, ಅಂತಿಮವಾಗಿ 100 ಕೋಟಿ ರೂ. ಪಾವತಿಸಿ ಹಾರ್ದಿಕ್ ಪಾಂಡ್ಯರನ್ನು ಟ್ರೇಡ್ ಮಾಡಿಕೊಂಡಿದೆ ಎಂದು ವರದಿಯಲ್ಲಿ ತಿಳಿಸಲಾಗಿದೆ. ಅಂದರೆ ಇಲ್ಲಿ ಪಾಂಡ್ಯ ಖರೀದಿಗಾಗಿ ಮುಂಬೈ ಇಂಡಿಯನ್ಸ್ ಬರೋಬ್ಬರಿ ನೂರು ಕೋಟಿ ರೂ. ಖರ್ಚು ಮಾಡಿದೆ.

ಇತ್ತ ಬೃಹತ್ ಮೊತ್ತ ಪಾವತಿಸಿ ಖರೀದಿಸಿದ ಪಾಂಡ್ಯ ಇದೀಗ ಮುಂಬೈ ಇಂಡಿಯನ್ಸ್​ ತಂಡದ ಹೊಸ ನಾಯಕರಾಗಿ ಆಯ್ಕೆಯಾಗಿದ್ದಾರೆ. ಅದರಂತೆ ಐಪಿಎಲ್ 2024 ರಲ್ಲಿ ಮುಂಬೈ ಇಂಡಿಯನ್ಸ್ ತಂಡವನ್ನು ರೋಹಿತ್ ಶರ್ಮಾ ಬದಲಿಗೆ ಹಾರ್ದಿಕ್ ಪಾಂಡ್ಯ ಮುನ್ನಡೆಸಲಿದ್ದಾರೆ.

ಫ್ರೆಶ್ ನ್ಯೂಸ್

Latest Posts

Featured Videos