ಬಹುನೀರಿಕ್ಷಿತ ಚಪಾಕ್ ಟ್ರೈಲರ್ ಬಿಡುಗಡೆ

ಬಹುನೀರಿಕ್ಷಿತ ಚಪಾಕ್ ಟ್ರೈಲರ್ ಬಿಡುಗಡೆ

ಮುಂಬೈ, ಡಿ. 11: ಆಸಿಡ್ ದಾಳಿಗೆ ಒಳಗಾಗಿದ್ದ  ಲಕ್ಷ್ಮೀ ಅಗರ್‌ವಾಲ್ ಅವರ ನೈಜ ಜೀವನಾಧರಿತ ಕಥೆಯ ‘ಚಪಾಕ್’ ಚಿತ್ರದ ಮೊದಲ ಟ್ರೈಲರ್ ಬಿಡುಗಡೆಯಾಗಿದೆ. ಆಸಿಡ್ ಸಂತ್ರಸ್ತೆಯಾಗಿ ನಟಿ ದೀಪಿಕಾ ಮನಮಟ್ಟುವ ಅಭಿನಯವನ್ನು ಪ್ರದರ್ಶಿಸಿದ್ದಾರೆ.

ಸಾಮಾನ್ಯ ಯುವತಿಯೊಬ್ಬಳು ಆಸಿಡ್ ದಾಳಿಗೆ ತುತ್ತಾಗಿ ಆಕೆ ಪಡುವ ಕಷ್ಟ, ಆಕೆಯ ರೂಪದ ಕುರಿತು ಜನರಲ್ಲಿ ಮೂಡುವ ಭಯ, ತನ್ನ ವಿರೂಪಕ್ಕೆ ಕಾರಣರಾದವರ ವಿರುದ್ಧ ಹೋರಾಡುವ ಛಲ ಹೊಂದಿರುವ ಕಥೆ ಇದಾಗಿದೆ.

ಆಸಿಡ್ ದಾಳಿ ಸಂತ್ರಸ್ತೆಯಾಗಿ ಕಾಣಿಸಿಕೊಂಡಿರುವ ದೀಪಿಕಾ ಅಭಿನಯ ಹಾಗೂ ಮೇಕಪ್ ಎಲ್ಲಿಯೂ ಕಳೆಕುಂದದಂತೆ ನಟಿಸಿರುವುದು ಚಿತ್ರದ ಹೈ ಲೈಟ್. ಚಿತ್ರದಿಂದ ಚಿತ್ರಕ್ಕೆ ವಿಭಿನ್ನ ಪಾತ್ರದಲ್ಲಿ ಕಾಣಿಸಿಕೊಂಡಿರುವ ದೀಪಿಕಾಗೆ ಈ ಚಿತ್ರ ವಿಶೇಷವಾಗಿದ್ದು ಎಂದು ತಿಳಿಸಿದ್ದಾರೆ. ಇನ್ನು ಇದೇ ಜನವರಿ 10ರಂದು ಈ ಚಿತ್ರ ಬಿಡುಗಡೆಯಾಗುತ್ತಿದೆ.

ಫ್ರೆಶ್ ನ್ಯೂಸ್

Latest Posts

Featured Videos