ಮುಳ್ಳಯ್ಯನ ಗಿರಿಗೆ ಪ್ರವಾಸಿಗರು ಫಿದಾ!

ಮುಳ್ಳಯ್ಯನ ಗಿರಿಗೆ ಪ್ರವಾಸಿಗರು ಫಿದಾ!

ಚಿಕ್ಕಮಗಳೂರು, ಸೆ. 24 : ಮುಳ್ಳಯ್ಯನ ಗಿರಿ ಸೊಬಗಿಗೆ ಪ್ರವಾಸಿಗರು ನೋಡಿ ಫಿದಾ ಆಗಿದ್ದಾರೆ. ಹಸಿರು ಮುತ್ತೈದೆ ಮುಡಿಗೆ ದುಂಡು ಮಲ್ಲಿಗೆ ಸೊಬಗು ಎನ್ನುವಂತೆ, ಮೋಡವೇ ಗಿರಿಗೆ ಮುತ್ತಿಕುತ್ತಿರುವಂತೆ, ಪಶ್ಚಿಮ ಘಟ್ಟದಲ್ಲಿ ಪ್ರಕೃತಿಯೇ ನಾಚುವ ಸೌಂದರ್ಯ ಹೊತ್ತು ಬೀಗುತ್ತಿರುವ ಮುಳ್ಳಯ್ಯನಗಿರಿ ಸೊಬಗಿಗೆ ಪ್ರವಾಸಿಗರು ಫಿದಾ.
ಪ್ರಕೃತಿ ಪ್ರಿಯರಿಗೆ ಹಾಗೂ ಪ್ರವಾಸಿಗರ ಕಣ್ಣಿಗೆ ರಸದೌತಣ ನೀಡುವ ಕಾಫಿನಾಡ ಮುಳ್ಳಯ್ಯನಗಿರಿ ಸೌಂದರ್ಯದ ಬಗ್ಗೆ ಹೇಳಲು ಪದ ಸಾಲದು. ಬರೆಯಲು ಪುಟ ಸಾಲದು. ಪದಗಳಲ್ಲಿ ಪುಟದ ತುಂಬಾ ಬರೆದರೂ ಕಣ್ಣುಗಳು ಆನಂದಿಸುವ ವೈಭೋಗವೇ ಬೇರೆ. ಅರಬ್ಬಿ ಸಮುದ್ರದಲ್ಲಿನ ವಾಯುಭಾರ ಕುಸಿತ ಕಾಫಿನಾಡಲ್ಲಿ ಹೊಸದೊಂದು ಲೋಕವನ್ನೇ ಸೃಷ್ಟಿಸಿದೆ. ಮುಳ್ಳಯ್ಯನಗರಿಯಲ್ಲಿನ ಮೋಡಕವಿದ ವಾತವಾರಣದಲ್ಲಿ ಮೋಡದ ಕಣ್ಣಾಮುಚ್ಚಾಲೆ ಆಟಕ್ಕೆ ಪ್ರವಾಸಿಗರು ಮನಸೋತಿದ್ದಾರೆ.

ಫ್ರೆಶ್ ನ್ಯೂಸ್

Latest Posts

Featured Videos