ಮುದ್ದು ಮಗು ಚಿತ್ರರಂಗದ ಹಾಟ್ ಬ್ಯೂಟಿ: ಗುರುತಿಸುವಿರಾ?

ಮುದ್ದು ಮಗು ಚಿತ್ರರಂಗದ ಹಾಟ್ ಬ್ಯೂಟಿ: ಗುರುತಿಸುವಿರಾ?

ನವದೆಹಲಿ,ಜು. 24 : ಅಭಿಮಾನಿಗಳಿಗೆ ತಮ್ಮ ನೆಚ್ಚಿನ ನಟ-ನಟಿಯರು ಮಗುವಾಗಿದ್ದಾಗ ಎಷ್ಟು ಮುದ್ದಾಗಿದ್ದರು ಎಂದು ನೋಡುವ ಕುತೂಹಲ. ಅದೇ ರೀತಿಯಾಗಿ ಕೆಲ ಸೆಲೆಬ್ರೆಟಿಗಳು ತಮ್ಮ ಹುಟ್ಟುಹಬ್ಬ ಸೇರಿದಂತೆ ವಿಶೇಷ ಸಂದರ್ಭದಲ್ಲಿ ತಮ್ಮ ಬಾಲ್ಯಾವಸ್ಥೆಯ ಫೋಟೊಗಳನ್ನು ಹಂಚಿಕೊಂಡು ಅಭಿಮಾನಿಗಳಿಗೆ ಸರ್ಪ್ರೈಸ್ ನೀಡುತ್ತಿರುತ್ತಾರೆ. ಬಹುಭಾಷ ನಟಿ ರಾಕುಲ್ ಪ್ರೀತ್ ಸಿಂಗ್ ಸೇರಿಕೊಂಡಿದ್ದಾರೆ. ತಮ್ಮ ಇನ್ಸ್ಟಾಗ್ರಾಂ ಖಾತೆಯಲ್ಲಿ ತಮ್ಮ ಬಾಲ್ಯಾವಸ್ಥೆಯ ವೈರಲ್ ಆಗಿದೆ. ಬಿಳಿ ಬಣ್ಣದ ಫ್ರಾಕ್ ತೊಟ್ಟು, ತಲೆಯ ಮೇಲೆ ಕನ್ನಡಕ ನಗುವಿನೊಂದಿಗೆ ಕ್ಯಾಮರಾಗೆ ಪೋಸ್ ನೀಡಿರುವ ರಾಕುಲ್ ಬಾಲ್ಯದ ಫೋಟೊ ಅಭಿಮಾನಿಗಳಿಗೆ ಖುಷಿ ತಂದಿದೆ.
28 ವರ್ಷದ ಯುವ ನಟಿ ರಾಕುಲ್ ತಮ್ಮ ಬಾಲ್ಯದ ಫೋಟೊ ಕುರಿತು, ನಾನು ಬೆಳವಣಿಗೆಯಾಗಿದ್ದೇನೆ ಎಂದು ನನಗನಿಸಿಲ್ಲ. ಬೆಳವಣಿಗೆಯನ್ನು ಬಯಸುತ್ತೇನೆ ಎಂದು ಯೋಚನೆಯನ್ನೂ ಮಾಡಲ್ಲ ಎಂದು ಬರೆದುಕೊಂಡಿದ್ದಾರೆ.
3 ಲಕ್ಷಕ್ಕೂ ಹೆಚ್ಚು ಮಂದಿ ವೀಕ್ಷಣೆ ಮಾಡಿದ್ದು, ಸಾಕಷ್ಟು ಮಂದಿ ಮೆಚ್ಚುಗೆಯ ಸುರಿಮಳೆಗೈದಿದ್ದಾರೆ. ಸಾಮಾಜಿಕ ಜಾಲತಾಣದಲ್ಲಿ ಸಾಕಷ್ಟು ಸಕ್ರಿಯರಾಗಿರುವ ರಾಕುಲ್ ಆಗಾಗ ತಮ್ಮ ಹಾಟ್ ಫೋಟೊಗಳನ್ನು ಅಪ್ಲೋಡ್ ಮಾಡುವ ಮೂಲಕ ಅಭಿಮಾನಿಗಳಿಗೆ ಸರ್ಪ್ರೈಸ್ ನೀಡುತ್ತಿರುತ್ತಾರೆ.

ಫ್ರೆಶ್ ನ್ಯೂಸ್

Latest Posts

Featured Videos