ಮುದ್ದಹನುಮೇಗೌಡ 3.5 ಕೋಟಿ ಪಡೆದಿದ್ದಾರೆ: ಡಿಸಿಎಂ ಆಪ್ತನ ಆಡಿಯೋ ವೈರಲ್!

ಮುದ್ದಹನುಮೇಗೌಡ 3.5 ಕೋಟಿ ಪಡೆದಿದ್ದಾರೆ: ಡಿಸಿಎಂ ಆಪ್ತನ ಆಡಿಯೋ ವೈರಲ್!

ತುಮಕೂರು, ಏ. 26, ನ್ಯೂಸ್ ಎಕ್ಸ್ ಪ್ರೆಸ್:  ತುಮಕೂರು ಲೋಕಸಭಾ ಕ್ಷೇತ್ರದ ಕಾಂಗ್ರೆಸ್​ ಸಂಸದ ಮುದ್ದಹನುಮೇಗೌಡ ಅವರಿಗೆ ಟಿಕೆಟ್​ ಕೈ ತಪ್ಪಿ ಜೆಡಿಎಸ್​ ವರಿಷ್ಠ ಎಚ್​.ಡಿ.ದೇವೇಗೌಡ ಅವರಿಗೆ ನೀಡಲಾಗಿತ್ತು. ಇದರಿಂದ ಅಸಮಾಧಾನಗೊಂಡಿದ್ದ ಮುದ್ದಹನುಮೇಗೌಡ ಬಂಡಾಯ ಅಭ್ಯರ್ಥಿಯಾಗಿ ನಾಮಪತ್ರ ಸಲ್ಲಿಕೆ ಮಾಡಿದ್ದರು. ಆದರೆ, ಕೊನೆ ಗಳಿಕೆಯಲ್ಲಿ ತಮ್ಮ ನಾಮಪತ್ರವನ್ನು ವಾಪಸ್​ ಪಡೆದಿದ್ದರು. ಹೀಗೆ ನಾಮಪತ್ರವನ್ನು ವಾಪಸ್ ಪಡೆಯಲು ಮುದ್ದಹನುಮೇಗೌಡ ಮೂರೂವರೆ ಕೋಟಿ ಹಣ ಪಡೆದುಕೊಂಡಿದ್ದಾರೆ. ಇದರ ಮಧ್ಯವರ್ತಿಯಾಗಿ ಕೆಲಸ ಮಾಡಿದ್ದ ಕೆ.ಎನ್.ರಾಜಣ್ಣ ಕೂಡ ಇಷ್ಟೇ ಹಣವನ್ನು ಪಡೆದಿದ್ದಾರೆ ಎಂದು ಡಿಸಿಎಂ ಪರಮೇಶ್ವರ್ ಅವರ ಆಪ್ತ ದರ್ಶನ್​ ಎಂಬುವವರು ಕಾರ್ಯಕರ್ತರೊಂದಿಗೆ ನಡೆಸಿರುವ ಫೋನ್​ ಸಂಭಾಷಣೆ ವೈರಲ್​ ಆಗಿದ್ದು, ಭಾರೀ ಸಂಚಲನ ಮೂಡಿಸಿದೆ.

“ಮುದ್ದಹನುಮೇಗೌಡರು ನಾಮಪತ್ರ ವಾಪಸ್​ ಪಡೆಯಲು ಮೂರೂವರೆ ಕೋಟಿ ಪಡೆದುಕೊಂಡಿದ್ದಾರೆ. ಈ ಮೂಲಕ ದುಡ್ಡಿಗೆ ಆಸೆ ಬಿದ್ದು ತಮ್ಮನ್ನು ಮಾರಿಕೊಂಡಿದ್ದಾರೆ. ದುಡ್ಡು ಪಡೆದು ಕೆಲಸ ಮಾಡುವುದಾಗಿ ಹೇಳಿ, ಸುಮ್ಮನೆ ಕುಳಿತುಕೊಂಡು ಬಿಟ್ಟರು. ಅಷ್ಟೇ ಅಲ್ಲದೇ, ಗೆದ್ದ ಮೇಲೂ ಇನ್ನಷ್ಟು ಹಣಕ್ಕೆ ಡಿಮಾಂಡ್​ ಮಾಡಿದ್ದಾರೆ. ಮುದ್ದಹನುಮೇಗೌಡ ಒಳ್ಳೆಯ ವ್ಯಕ್ತಿ, ಒಳ್ಳೆಯ ಯೋಜನೆಗಳನ್ನು ತಂದಿದ್ದಾರೆ, ಉತ್ತಮ ಕೆಲಸಗಳನ್ನು ಮಾಡಿಸಿದ್ದಾರೆ. ಆದರೆ, ವೈಯಕ್ತಿಕ ಲಾಭಗಳನ್ನು ಮಾಡಿಕೊಂಡಿದ್ದಾರೆ. ತಮ್ಮವರಿಗೆ ಬೇಕಾದ ಹಾಗೆ ಮಾಡಿಕೊಟ್ಟಿದ್ದಾರೆ. 172 ದೊಡ್ಡ ದೊಡ್ಡ ಅಧಿಕಾರಿಗಳನ್ನು ಟ್ರಾನ್ಸ್​ಫರ್​ ಮಾಡಿಸಿ, ಕಮಿಷನ್​ ಪಡೆದುಕೊಂಡಿದ್ದಾರೆ. ಒಂದು ವೇಳೆ ದೇವೇಗೌಡರು ಅಲ್ಲಿ ಸೋತರೆ ರಾಜಣ್ಣ ಪಕ್ಷದಿಂದ ಸಸ್ಪೆಂಡ್​ ಆಗ್ತಾರೆ, ಮುದ್ದಹನುಮೇಗೌಡ ಟಾರ್ಗೆಟ್​ ಆಗುತ್ತಾರೆ. ಕುಮಾರಸ್ವಾಮಿ ಅವರಿಗೆ ಆರೋಗ್ಯ ಸಮಸ್ಯೆ ಇದೆ. ಕುಮಾರಸ್ವಾಮಿ ಅವಕಾಶವಾದಿ. ದೇವೇಗೌಡರು ಸಮಾಜವಾದಿ. ಮುಂದೆ ಜೆಡಿಎಸ್​ನಲ್ಲಿ ಸಿಎಂ ಆಗುವ ಒಬ್ಬೆ ಒಬ್ಬ ಅಭ್ಯರ್ಥಿ ಕೂಡ ಇಲ್ಲ. ಆಗ ದೇವೇಗೌಡರು ನಮ್ಮ ಸಾಹೇಬರನ್ನು (ಪರಮೇಶ್ವರ್) ಸಿಎಂ ಮಾಡುತ್ತಾರೆ. ರೇವಣ್ಣ ಅವರನ್ನು ಡಿಸಿಎಂ ಮಾಡುತ್ತಾರೆ. ಇಲ್ಲಿ ದೇವೇಗೌಡರಿಗೆ ನೊಗ ಕಟ್ಟಿಕೊಂಡು ಬಂದು ಓಡಾಡಿದ್ದು ನಮ್ಮ ಸಾಹೇಬರು ಎಂಬುದು ಅವರಿಗೆ ಗೊತ್ತಿದೆ. ಅಲ್ಲದೇ, ದಲಿತರನ್ನು ಸಿಎಂ ಮಾಡಿದ ಹೆಗ್ಗಳಿಕೆ ಅವರಿಗೆ ಸಲ್ಲುತ್ತದೆ,” ಎಂದು ಇಬ್ಬರು ಸಂಭಾಷಣೆ ನಡೆಸಿದ್ದಾರೆ.

ಫ್ರೆಶ್ ನ್ಯೂಸ್

Latest Posts

Featured Videos