ಮುಂಬೈನಲ್ಲಿ ಇನ್ನೂ 2ದಿನ ಭಾರೀ ಮಳೆ

ಮುಂಬೈನಲ್ಲಿ ಇನ್ನೂ 2ದಿನ ಭಾರೀ ಮಳೆ

ಮುಂಬೈ, ಜು. 3 : ಮುಂಬೈ ಸೇರಿದಂತೆ ಮಹಾರಾಷ್ಟ್ರದ ವಿವಿಧ ಭಾಗಗಳಲ್ಲಿ ಭಾನುವಾರದಿಂದೀಚೆಗೆ ಭಾರೀ ಮಳೆ ಸುರಿದಿದ್ದು ಸಾಮಾನ್ಯ ಜನಜೀವನವನ್ನು ಸಂಪೂರ್ಣ ಅಸ್ತವ್ಯಸ್ಥಗೊಳಿಸಿದೆ. ಜೊತೆಗೆ ಭಾರೀ ಮಳೆ  ಮುಂಬೈನಲ್ಲಿ 25, ಪುಣೆಯಲ್ಲಿ 6 ಸೇರಿದಂತೆ ಮಹಾರಾಷ್ಟ್ರದಲ್ಲಿ ಒಟ್ಟು 35 ಜನ ಬಲಿಯಾಗಿದ್ದಾರೆ. 24 ಗಂಟೆಗಳ ಅವಧಿಯಲ್ಲಿ ಮುಂಬೈನಲ್ಲಿ 375 ಮಿ.ಮೀನಷ್ಟುಭಾರೀ ಮಳೆ ಸುರಿದಿದೆ. ಇದು 2005ರಲ್ಲಿ ಮುಂಬೈ ನಗರಿಯನ್ನು ಮುಳುಗಿಸಿದ್ದ ಮಹಾಮಳೆ ಮತ್ತು ಪ್ರವಾಹದ ಬಳಿಕ ಮಹಾನಗರಿಯಲ್ಲಿ ಸುರಿದ ಭಾರೀ ಪ್ರಮಾಣದ ಮಳೆಯಾಗಿದೆ.

ಮುಂದಿನ 48 ಗಂಟೆಗಳ ಅವಧಿಯಲ್ಲಿ ಮುಂಬೈ ಸೇರಿದಂತೆ ಮಹಾರಾಷ್ಟ್ರದ ವಿವಿಧ ಭಾಗಗಳಲ್ಲಿ ಭಾರೀ ಮಳೆಯಾಗುವ ಸಾಧ್ಯತೆ ಇದೆ ಎಂದು ಹವಾಮಾನ ಇಲಾಖೆ ಮುನ್ನೆಚ್ಚರಿಕೆ ನೀಡಿದೆ.

ಫ್ರೆಶ್ ನ್ಯೂಸ್

Latest Posts

Featured Videos