ಕಾಂಗ್ರೇಸ್ ಪಕ್ಷದ ವಿರುದ್ದ ಎಂಟಿಬಿ ವಾಗ್ದಾಳಿ‌

ಕಾಂಗ್ರೇಸ್ ಪಕ್ಷದ ವಿರುದ್ದ ಎಂಟಿಬಿ  ವಾಗ್ದಾಳಿ‌

ಹೊಸಕೋಟೆ, . 3: ಮೈತ್ರಿ ಪಕ್ಷದ ಆಡಳಿತ ವೈಪಲ್ಯದಿಂದ ನಾವು ರಾಜಿನಾಮೇ ನೀಡಿದ್ದು, ನಾವು ಪಕ್ಷಬಿಟ್ಟ ಮೇಲೆ ಯಾವ ಪಕ್ಷಕ್ಕಾದ್ರು ಹೋಗ್ತಿವಿ ಅದು ನಮ್ಮ ಸ್ವಾತಂತ್ರ್ಯ ಅವರಿಗೆ ಕೇಳುವ ಹಕ್ಕಿಲ್ಲ. ಮೈತ್ರಿ ಸರ್ಕಾರದಲ್ಲಿ ನಮಗೆ ಅನುದಾನ ಕೊಡಿಸಲು ಇವರಿಂದ ಆಗಲಿಲ್ಲ.

ಇಂತಹವರ ಆಡಳಿತದಂದಲೆ ದೇಶ ಮತ್ತು ರಾಜ್ಯದಲ್ಲಿ ಕಾಂಗ್ರೇಸ್ ಮುಳುಗೋಗಿರೂದು‌‌. ಕೇಂದ್ರದಲ್ಲಿ ವಿರೋಧ ಪಕ್ಷದಲ್ಲಿ ಕೂರಲು ಇವರಿಗೆ ಶಕ್ತಿಯಿಲ್ಲ‌. ನರೇಂದ್ರ ಮೋದಿ ನಾಯಕತ್ವದ  ದೇಶದಲ್ಲಿ ಮುಂದಿನ ದಿನಗಳಲ್ಲಿ ಯಾವುದೇ ಪ್ರಾದೇಶಿಕ ಮತ್ತು ರಾಷ್ಟ್ರೀಯ ಪಕ್ಷಗಳು ತಲೆ ಎತ್ತಲು ಸಾಧ್ಯವಿಲ್ಲ. ಕಾಂಗ್ರೇಸ್ ಅವರೆ ಕಾಂಗ್ರೇಸ್ ಮುಗಿಸಿಬಿಟ್ಟಿದ್ದಾರೆ.

ಕಾಂಗ್ರೇಸ್ ಗೆ  ನಾಯಕತ್ವವಿಲ್ಲ, ಕಾಂಗ್ರೇಸ್ ರಾಷ್ಟ್ರ ನಾಯಕರು ಯಾರು….? ರಾಹುಲ್ ಗಾಂಧೀ ಬೇಡ ಅಂತ ರಾಜುನಾಮೇ ನೀಡಿದ್ರು, ಅವರ ತಾಯಿ ತಾತ್ಕಲಿಕವಾಗಿ ಅಧ್ಯಕ್ಷರಾಗಿದ್ದಾರೆ. ಸೋನಿಯಾಗಾಂಧಿಗೆ ಆರೋಗ್ಯ ಸರಿಯಿಲ್ಲ‌, ನಾಯಕರಿಲ್ಲದ ಕಾಂಗ್ರೇಸ್ ಪಕ್ಷವಾಗಿದೆ.

ಇಲ್ಲಿ ಕಾಂಗ್ರೇಸ್ ನಾಯಕರಲ್ಲೆ ಅಧ್ಯಕ್ಷ ಗಿರಿ, ಶಾಸಕಾಂಗ ನಾಯಕ ಸ್ಥಾನ ಬೇಕಯ ಅಂತ ಗಲಾಟೆಗಳು ಮಾಡಿಕೊಳ್ತಿದ್ದಾರೆ‌. ಕೇಂದ್ರ ಮತ್ತು ರಾಜ್ಯದಲ್ಲಿ ಸುಭದ್ರ ಮತ್ತು ಸ್ಥಿರ ಸರ್ಕಾರ ಬಿಜೆಪಿನೆ ಅಂತ ನಾನು ಸ್ವಷ್ಟವಾಗಿ ಹೇಳ್ತಿನಿ‌. ಬೆಂಗಳೂರು ಗ್ರಾಮಾಂತರ ಜಿಲ್ಲೆ ಹೊಸಕೋಟೆಯಲ್ಲಿ ಅನರ್ಹ ಶಾಸಕ ಎಂಟಿಬಿ ನಾಗರಾಜ್ ಹೇಳಿಕೆ.

ಫ್ರೆಶ್ ನ್ಯೂಸ್

Latest Posts

Featured Videos