ಎಂಟಿಬಿ ಜತೆ ಡಿಕೆಶಿ ಸಂಧಾನ ಸಭೆ

ಎಂಟಿಬಿ ಜತೆ ಡಿಕೆಶಿ ಸಂಧಾನ ಸಭೆ

ಮಹದೇವಪುರ, ಜು. 13: ನಾನು, ಎಂಟಿಬಿ ನಾಗರಾಜ್ ಒಟ್ಟಾಗಿ ಪಕ್ಷವನ್ನು ಕಟ್ಟಿದ್ದೇವೆ, ಅವರು ಗೆದ್ದಾಗಲೆಲ್ಲ ನಮ್ಮ ಪಕ್ಷ ಅಧಿಕಾರಕ್ಕೆ ಬಂದಿದೆ.

ನಾವೆಲ್ಲರೂ ಒಟ್ಟಾಗಿ ಇರೋಣ, ಒಟ್ಟಿಗೆ ಸಾಯೋಣಾ ಎಂದು ಹೇಳಿದ್ದೀನಿ ಎಂದು ಸಚಿವ ಡಿ ಕೆ ಶಿವಕುಮಾರ್ ತಿಳಿಸಿದ್ದಾರೆ.

ಕುಟುಂಬ ಎಂದಮೇಲೆ ಸಮಸ್ಯಗಳು ಇದ್ದೇ ಇರುತ್ತದೆ. ಅದನ್ನೆಲ್ಲ ಬಗಹರಿಸುತ್ತೇವೆ ಎನ್ನುವ ಅಭಯ ನೀಡಿದ್ದೇವೆ. ಸುಧಾಕರ್ ಅವರ ಮನವೊಲಿಸೋದಾಗಿ ಎಂಟಿಬಿ ಹೇಳಿದ್ದಾರೆ ಎಂದು ಹೇಳಿದರು.

ಎಂಟಿಬಿ ನಾಗರಾಜ್ ಮಾತನಾಡಿ, ನಾನು ಸುಧಾಕರ್ ಒಟ್ಟಿಗೆ ರಾಜೀನಾಮೆ ಕೊಟ್ಟಿದ್ದೀವಿ. ನಾನು ಪಕ್ಷದಲ್ಲೇ ಉಳಿಬೇಕು ಎಂದು ಸಿದ್ದರಾಮಯ್ಯ, ದಿನೇಶ್ ಗುಂಡೂರಾವ್ ದೂರವಾಣಿ ಜತೆ ಮಾತನಾಡಿದ್ದೀನಿ. ನಾನು ನನ್ನ ತೀರ್ಮಾನ ತಿಳಿಸೋಕೆ ಕಾಲಾವಕಾಶ ಕೇಳಿದ್ದೀನಿ. ನಾನು ಸುಧಾಕರ್ ಅವರ ಜತೆ ಚರ್ಚೆ ಮಾಡಿ ಮನವೊಲಿಸುತ್ತೀನಿ. ಸದ್ಯ ನಾನು ಪಕ್ಷದಲ್ಲೇ ಉಳಿಬೇಕು ಎಂದು ತೀರ್ಮಾನ ಮಾಡಿದ್ದೇನೆ. ಸುಧಾಕರ್ ಅವರ ಜತೆ ಮಾತನಾಡಿ ಆಮೇಲೆ ಅಂತಿಮ ನಿರ್ಧಾರ ಕೈಗೊಳ್ಳುತ್ತೇನೆ. ಅತೃಪ್ತರನ್ನು ಮನವೊಲಿಸುವ ಕೆಲಸವನ್ನು ನಮ್ಮ ನಾಯಕರು ಮಾಡುತ್ತಾರೆ ಎಂದು ತಿಳಿಸಿದರು.

ಎಂ.ಟಿ.ಬಿ. ನಾಗರಾಜ್ ಮನೆಯಲ್ಲಿ ಡಿಕೆಶಿ

ಜಲ ಸಂಪನ್ಮೂಲ ಕನ್ನಡ ಮತ್ತು ಸಂಸ್ಕೃತಿ ಸಚಿವ ಡಿ.ಕೆ. ಶಿವಕುಮಾರ್ ಅವರು ಬೆಂಗಳೂರಿನ ಮಹದೇವಪುರದ ಹೂಡಿಯ ಆಶ್ರಯ ಲೇಔಟ್ನಲ್ಲಿರುವ ಸಚಿವ ಎಂ.ಟಿ.ಬಿ. ನಾಗರಾಜ್ ನಿವಾಸಕ್ಕೆ ಇಂದು ಬೆಳಗಿನ ಜಾವ 5 ಗಂಟೆಗೆ ದಿಢೀರ್ ಭೇಟಿ ನೀಡಿದ್ದು, ಅವರ ಮನವೊಲಿಸುವ ಕಾರ್ಯದಲ್ಲಿ ನಿರತರಾಗಿದ್ದರು. ಸಂಧಾನ ಸಭೆ ಬಳಿಕ ಎಂಟಿಬಿ ಭುಜದ ಮೇಲೆ ಕೈ ಹಾಕಿ ಎಂಟಿಬಿ ಅವರನ್ನು ಡಿಕೆಶಿ ಕರೆದುಕೊಂಡು ಬಂದರು.

ಸಂಧಾನ ಸಭೆ ಬಳಿಕ ಎಂಟಿಬಿ ನಾಗರಾಜ್ ಹೇಳಿಕೆ

ನನ್ನನ್ನು ಭೇಟಿ ಆಗಲು ಬಂದ ನಾಯಕರನ್ನು ಗೌರವದಿಂದ ಸ್ವಾಗತ ಮಾಡಿದ್ದೇನೆ. ಕೆಲ ಬೇಸರದಿಂದ ಶಾಸಕ ಸ್ಥಾನಕ್ಕೆ ರಾಜೀನಾಮೆ ಕೊಟ್ಟಿದ್ದೀನಿ. 40 ವರ್ಷಗಳಿಂದ ನೀವು ಕಾಂಗ್ರೆಸ್ನಲ್ಲಿ ಇದ್ದೀರಿ. ಹಾಗಾಗಿ ಪಕ್ಷ ಬಿಡುವುದು ಬೇಡ ಎಂದು ಹೇಳಿದರು.

ಸಿದ್ದರಾಮಯ್ಯ ಅವರೊಂದಿಗೆ ಫೋನ್ ಮೂಲಕ ಮಾತುಕತೆ

ಎಂಟಿಬಿ ನಾಗರಾಜ್ ಮನೆಗೆ ಹಿರಿಯ ನಾಯಕರ ಭೇಟಿ ಬೆನ್ನಲ್ಲೇ ಎಂಟಿಬಿ ನಾಗರಾಜ್ ಅವರೊಂದಿಗೆ ಸಿದ್ದರಾಮಯ್ಯ ಅವರು ದೂರವಾಣಿ ಮೂಲಕ ಮಾತುಕತೆ ನಡೆಸಿದರು. ಕಾಂಗ್ರೆಸ್ ನಲ್ಲಿ ನೀವು ಹಿರಿಯ ನಾಯಕರು ನೀವೇ ಪಕ್ಷ ಬಿಟ್ಟು ಹೋದರೆ ಹೇಗೆ ಎಂದು ಸಿದ್ದರಾಮಯ್ಯ ಕೇಳಿದ್ದಕ್ಕೆ ನಿಮ್ಮ ಜತೆಯೇ ಖುದ್ದು ಮಾತನಾಡಬೇಕು. ಬಂದು ಭೇಟಿಯಾಗುತ್ತೇನೆ ಎಂದು ಎಂಟಿಬಿ ಹೇಳಿದ್ದಾರೆ. ಇದೀಗ ಸಂಧಾನಸಭೆ ಬಳಿಕ ಸಿದ್ದು ನಿವಾಸದತ್ತ ನಾಯಕರು ತೆರಳುತ್ತಿದ್ದಾರೆ.

ಸಚಿವ ಎಂಟಿಬಿ ನಾಗರಾಜ್ ಮನೆಯಲ್ಲಿ ಉಪ ಮುಖ್ಯಮಂತ್ರಿ ಪರಮೇಶ್ವರ್, ಸಚಿವ ಡಿ.ಕೆ. ಶಿವಕುಮಾರ್, ಕೃಷ್ಣಬೈರೆ ಗೌಡ, ಕುಣಿಗಲ್ ಶಾಸಕ ಡಾ. ರಂಗನಾಥ್, ಎಂಎಲ್ ಸಿ ಎಸ್. ರವಿ, ರಿಜ್ವಾನ್ ಅರ್ಷದ್ ಜತೆಗಿದ್ದಾರು.

ಫ್ರೆಶ್ ನ್ಯೂಸ್

Latest Posts

Featured Videos