ನೆಟ್ ಪ್ರಾಕ್ಟೀಸ್ ಆರಂಭಿಸಿದ ಎಂ ಎಸ್

ನೆಟ್ ಪ್ರಾಕ್ಟೀಸ್ ಆರಂಭಿಸಿದ ಎಂ ಎಸ್

ಬೆಂಗಳೂರು: ಅಂತರಾಷ್ಟ್ರೀಯ ಕ್ರಿಕೆಟ್‌ನಿಂದ ದೂರ ಉಳಿದಿರುವ ಮಹೇಂದ್ರ ಸಿಂಗ್ ಧೋನಿ ಮತ್ತೊಮ್ಮೆ ಮೈದಾನದಲ್ಲಿ ಅಭ್ಯಾಸ ನಡೆಸುತ್ತಿರುವುದು ಕಂಡುಬಂದಿದೆ. ಮಹೇಂದ್ರ ಸಿಂಗ್ ಧೋನಿ 2019ರಲ್ಲಿ ಭಾರತಕ್ಕಾಗಿ ಕೊನೆಯ ಪಂದ್ಯವನ್ನು ಆಡಿದ್ದರು. ಆದಾಗ್ಯೂ, ಅವರು ಇನ್ನೂ ಐಪಿಎಲ್  ಆಡುತ್ತಿದ್ದಾರೆ. 2023ರಲ್ಲಿ ಅವರು ಚೆನ್ನೈ ಸೂಪರ್ ಕಿಂಗ್ಸ್ ಪರ ಆಡಲಿದ್ದಾರೆ. ಮುಂಬರಲಿರುವ ಐಪಿಎಲ್​ಗಾಗಿ ಧೋನಿ ಈಗಾಗಲೇ ಅಭ್ಯಾಸ ಆರಂಭಿಸಿದ್ದಾರೆ. ಇದರ ವಿಡಿಯೋಗಳನ್ನು ಅಭಿಮಾನಿಗಳು ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಂಡಿದ್ದಾರೆ. ಇದರಲ್ಲಿ ಎಂಎಸ್ ಧೋನಿ ಐಪಿಎಲ್ ತಯಾರಿ ನಡೆಸುತ್ತಿದ್ದಾರೆ.

ಮೈದಾದಲ್ಲಿ ಮಹೇಂದ್ರ ಸಿಂಗ್ ಧೋನಿ ನೋಡಲು ಕಾತುರದಲ್ಲಿರುವ ಅಭಿಮಾನಿಗಳಿಗೆ ಖುಷಿ ಸುದ್ದಿಯೊಂದು ಸಿಕ್ಕಿದೆ. ಈ ಬಾರಿ ಐಪಿಎಲ್ ಗೆ ಧೋನಿ ತಯಾರಿ ಶುರುವಾಗಿದೆ. ಅವರು ನೆಟ್ ಪ್ರಾಕ್ಟೀಸ್ ಶುರು ಮಾಡಿದ್ದಾರೆ. ಧೋನಿಯ ನೆಟ್ ಪ್ರಾಕ್ಟೀಸ್ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ ಅವರ ಸ್ನೇಹಿತರು ವಿಡಿಯೋ ಹಂಚಿಕೊಂಡಿದ್ದಾರೆ.

ಧೋನಿ ಪ್ರಾಕ್ಟೀಸ್ ನಲ್ಲಿ ಅವರು ಹಿಡಿದಿರುವ ಬ್ಯಾಟ್ ವಿಶೇಷತೆ ಪಡೆದಿದೆ. ಧೋನಿ ತಮ್ಮ ಸ್ನೇಹಿತರ ಅಂಗಡಿಯಿಂದ ಬ್ಯಾಟ್ ಖರೀದಿ ಮಾಡಿದ್ದಾರೆ, ರಾಂಚಿಯಲ್ಲಿರುವ ಅವರ ಆಪ್ತ ಸ್ನೇಹಿತ ಪರಂಜಿತ್ ಸಿಂಗ್ ನಡೆಸುತ್ತಿರುವ ಅಂಗಡಿಯಿಂದ ಬ್ಯಾಟ್ ಕರೀದಿ ಮಾಡಿದ್ದಾರೆ.

ಧೋನಿ ಮುಂದಿನ ಐಪಿಎಲ್ ನಲ್ಲಿ ಯಾವುದೇ ಪ್ರಸಿದ್ಧ ಬ್ರಾಂಡ್‌ ಸ್ಟಿಕರ್ಗಳನ್ನು ಹೊಂದಿರುವ ಬ್ಯಾಟ್ ನೊಂದಿಗೆ ಆಡುವುದಿಲ್ಲ ಅವರ ಬ್ಯಾಟ್ ನಲ್ಲಿ ಪ್ರೈಮ್ ಸ್ಟೋರ್ಸ್ ಹೆಸರು ಕಾಣಿಸಲಿದೆ. ಅವರ ಸ್ನೇಹಿತನ ಪರಂಮ್‌ ಜೀತ್ ಸಿಂಗ್ ಅವರ ಅಂಗಡಿಯ ಹೆಸರಾಗಿದೆ ಧೋನಿ ಈ ಪ್ರಚಾರ ಸ್ನೇಹಿತನಿಗೆ ನೆರವಾಗುವುದರಲ್ಲಿ ಸಂಶಯವಿಲ್ಲ.‌

 

ಫ್ರೆಶ್ ನ್ಯೂಸ್

Latest Posts

Featured Videos