ಬರ್ತಡೇ ಸಂಭ್ರಮ: ʻಮಿಸ್ಟರ್‌ 360..

ಬರ್ತಡೇ ಸಂಭ್ರಮ: ʻಮಿಸ್ಟರ್‌ 360..

ಬೆಂಗಳೂರು: ವಿಶ್ವ ಕ್ರಿಕೆಟ್‌ನ ʻಮಿಸ್ಟರ್‌ 360ʼ ಎಂದೇ ಪ್ರಖ್ಯಾತಿ ಪಡೆದಿರುವ ಸೌತ್‌ ಆಫ್ರಿಕಾ ತಂಡದ ಮಾಜಿ ಕ್ರಿಕೆಟಿಗ ಎಬಿ ಡಿವಿಲಿಯರ್ಸ್‌ ಇಂದು ತಮ್ಮ 40ನೇ ವಸಂತಕ್ಕೆ ಕಾಲಿಟ್ಟಿದ್ದಾರೆ. ತಮ್ಮ ಚಾಣಾಕ್ಷ ಬ್ಯಾಟಿಂಗ್‌ ಟ್ಯಾಲೆಂಟ್‌ ಮೂಲಕವೇ ಕೋಟ್ಯಾಂತರ ಕ್ರಿಕೆಟ್‌ ಪ್ರೇಮಿಗಳ ಮನಗೆದ್ದಿರುವ ಎಬಿಡಿ, ವಿಶ್ವ ಕ್ರಿಕೆಟ್‌ನ ʻಮೋಸ್ಟ್‌ ಟ್ಯಾಲೆಂಟೆಡ್‌ ಕ್ರಿಕೆಟರ್‌ʼ ಎನಿಸಿಕೊಂಡಿದ್ದಾರೆ. ಒಂದೂವರೆ ದಶಕಗಳ ಕಾಲ ಅಂತಾರಾಷ್ಟ್ರೀಯ ಕ್ರಿಕೆಟ್‌ನಲ್ಲಿ ಮಿಂಚಿದ್ದ ಡಿವಿಲಿಯರ್ಸ್‌, ಸೌತ್‌ ಆಫ್ರಿಕಾ ತಂಡದ ಪ್ರಮುಖ ಬ್ಯಾಟಿಂಗ್‌ ಅಸ್ತ್ರವಾಗಿದ್ದರು.

1984ರ ಫೆ.17ರಂದು ಜನಿಸಿದ ಎಬಿ ಡಿವಿಲಿಯರ್ಸ್‌, 2004ರಲ್ಲಿ ಅಂತಾರಾಷ್ಟ್ರೀಯ ಕ್ರಿಕೆಟ್‌ಗೆ ಎಂಟ್ರಿಕೊಟ್ಟರು. ನಂತರದ ದಿನಗಳಲ್ಲಿ ಎಂದೂ ಹಿಂದಿರುಗಿ ನೋಡದ ಡಿವಿಲಿಯರ್ಸ್‌, ಟೆಸ್ಟ್‌, ಏಕದಿನ ಹಾಗೂ ಟಿ20 ಕ್ರಿಕೆಟ್‌ನಲ್ಲಿ ತಮ್ಮದೇ ಛಾಪು ಮೂಡಿಸಿದ್ದರು. ಕೇವಲ ಬ್ಯಾಟರ್‌ ಆಗಿ ಮಾತ್ರವಲ್ಲದೇ ಮೂರು ಫ್ಯಾರ್ಮ್ಯಾಟ್‌ನಲ್ಲೂ ಸೌತ್‌ ಆಫ್ರಿಕಾ ತಂಡದ ಕ್ಯಾಪ್ಟನ್‌ ಆಗಿಯೂ ತಂಡವನ್ನ ಮುನ್ನಡೆಸಿದ್ದರು. ಯಶಸ್ಸಿನ ಉತ್ತುಂಗದಲ್ಲಿದ್ದ ಸಂದರ್ಭದಲ್ಲಿಯೇ ಎಬಿ ಡಿವಿಲಿಯರ್ಸ್‌ ಅವರು, 2018ರಲ್ಲಿ ಭಾರತದ ವಿರುದ್ದ ತಮ್ಮ ಕೊನೆಯ ಏಕದಿನ ಪಂದ್ಯವನ್ನಾಡುವ ಮೂಲಕ ಒಂದೂವರೆ ದಶಕಗಳ ಕಾಲ ಅಂತಾರಾಷ್ಟ್ರಿಯ ಕ್ರಿಕೆಟ್‌ಗೆ ವಿದಾಯ ಹೇಳಿದರು.

ಅಂತಾರಾಷ್ಟ್ರೀಯ ಕ್ರಿಕೆಟ್‌ನಲ್ಲಿ ಮಿಂಚಿದ್ದ ಡಿವಿಲಿಯರ್ಸ್‌, ಐಪಿಎಲ್‌ ಟೂರ್ನಿಯ ಮೂಲಕ ಭಾರತೀಯ ಕ್ರಿಕೆಟ್‌ ಪ್ರೇಮಿಗಳಿಗೆ ಹತ್ತಿರವಾದರು. ರಾಯಲ್‌ ಚಾಲೆಂಜರ್ಸ್‌ ಬೆಂಗಳೂರು ತಂಡದ ಸ್ಟಾರ್‌ ಬ್ಯಾಟರ್‌ ಆಗಿ ಹಲವು ವರ್ಷಗಳ ಕಾಲ ಆಡಿದ ಎಬಿಡಿ, ಇಂದಿಗೂ ಎಲ್ಲರ ನೆಚ್ಚಿನ ಕ್ರಿಕೆಟರ್‌ ಆಗಿದ್ದಾರೆ. ಐಪಿಎಲ್‌ ಟೂರ್ನಿಯಲ್ಲಿ ಹಲವು ಅವಿಸ್ಮರಣೀಯ ಬ್ಯಾಟಿಂಗ್‌ ಹಾಗೂ ಅದ್ಭುತ ಫೀಲ್ಡಿಂಗ್‌ ಮೂಲಕ ಕೋಟ್ಯಾಂತರ ಕ್ರಿಕೆಟ್‌ ಪ್ರೇಮಿಗಳ ಮನಗೆದ್ದಿದ್ದಾರೆ. ಎಬಿಡಿ ಅವರ ಹುಟ್ಟುಹಬ್ಬಕ್ಕೆ ಕೋಟ್ಯಾಂತರ ಕ್ರಿಕೆಟ್‌ ಪ್ರೇಮಿಗಳು ಶುಭಕೋರಿದ್ದಾರೆ.

 

ಫ್ರೆಶ್ ನ್ಯೂಸ್

Latest Posts

Featured Videos