ಸಂಸದರಿಗೆ ಸಿಕ್ತಿದೆ ಐಷಾರಾಮಿ ಕಾರ್..!

ಸಂಸದರಿಗೆ ಸಿಕ್ತಿದೆ ಐಷಾರಾಮಿ ಕಾರ್..!

ಬೆಂಗಳೂರು,ಜ. 5 : ರಾಜ್ಯ ಸರ್ಕಾರದ ಬೊಕ್ಕಸ ಖಾಲಿಯಾಗಿದೆ. ಖಜಾನೆ ಖಾಲಿಯಾಗಿದೆ ಅಂತಾ ಸರ್ಕಾರ ನೇಮಕಾತಿ ರದ್ದು ಮಾಡಿದೆ. ಆದ್ರೆ ಸಂಸದರಿಗೆ ಐಷಾರಾಮಿ ಕಾರ್ ನೀಡೋದಕ್ಕೆ ಒಪ್ಪಿಗೆ ಸೂಚಿಸಲಾಗಿದೆ ಎಂಬ ಮಾತು ಕೇಳಿ ಬರ್ತಿದೆ.
ನೂತನ ಸಂಸದರಿಗೆ ಲಕ್ಸೂರಿ ಕಾರ್ ಬೇಕೆಂಬ ಬೇಡಿಕೆ ಬಂದಿದ್ದು, ಈ ಕಾರಣಕ್ಕಾಗಿ ಸರ್ಕಾರ ಈಗಾಗಲೇ 17 ಐಷಾರಾಮಿ ಕಾರ್ ಖರೀದಿಗೆ ಸರ್ಕಾರ ಮುಂದಾಗಿದೆ.

ಸಂಸದರಿಗೆ ಒಟ್ಟು 23 ಲಕ್ಷದ ಐಷಾರಾಮಿ ಕಾರ್ ಖರೀದಿ ಮಾಡಲು ಸರ್ಕಾರ ಒಪ್ಪಿಗೆ ಸೂಚಿಸಿದೆ.
ಇನ್ನು ಇತ್ತೀಚೆಗಷ್ಟೇ ಸಿಎಂ ಯಡಿಯೂರಪ್ಪ 33 ಲಕ್ಷದ ಟೊಯೋಟಾ ಫಾರ್ಚುನರ್ ಕಾರ್ ಖರೀದಿಸಿದ್ದರು. ಅಲ್ಲದೇ ವಿಪಕ್ಷ ನಾಯಕ ಸಿದ್ದರಾಮಯ್ಯ ಕೂಡ ಲಕ್ಸೂರಿ ಕಾರಿಗಾಗಿ ಬೇಡಿಕೆ ಇಟ್ಟಿದ್ದರು. ಆದ್ರೆ ಸ್ಪೀಕರ್ ಸಿದ್ದರಾಮಯ್ಯ ಪ್ರಸ್ತಾವನೆಗೆ ಬ್ರೇಕ್ ಹಾಕಿದ್ದಾರೆಂದು ಕೇಳಿಬಂದಿತ್ತು.

ಫ್ರೆಶ್ ನ್ಯೂಸ್

Latest Posts

Featured Videos