ಲೋಕಾ ಚುನಾವಣೆ: ಬೆಟ್ಟಿಂಗ್ ತಡೆಯಲು ‘ಗೂಂಡಾ ಕಾಯ್ದೆ’ ಬಳಕೆ

ಲೋಕಾ ಚುನಾವಣೆ: ಬೆಟ್ಟಿಂಗ್ ತಡೆಯಲು ‘ಗೂಂಡಾ ಕಾಯ್ದೆ’ ಬಳಕೆ

ಬೆಂಗಳೂರು, ಏ. 25, ನ್ಯೂಸ್ ಎಕ್ಸ್ ಪ್ರೆಸ್ :  ಲೋಕಸಭಾ ಚುನಾವಣೆ ಮುಗಿದಿದ್ದು, ಈ ಸಂದರ್ಭದಲ್ಲಿ ಯಾರೆಲ್ಲಾ ಬೆಟ್ಟಿಂಗ್ ದಂಧೆಯಲ್ಲಿ ತೊಡಗಿದ್ದಾರೋ ಅವರ ವಿರುದ್ಧ ಗೂಂಡಾ ಹಾಗೂ ಕೋಕಾ ಕಾಯಿದೆ ಜಾರಿಗೊಳಿಸುವುದಾಗಿ ಡಿಜಿ & ಐಜಿಪಿ ನೀಲಮಣಿ ಎನ್.ರಾಜು ಖಡಕ್​ ಎಚ್ಚರಿಕೆ ನೀಡಿದ್ದಾರೆ. ಯಾರು ಬೆಟ್ಟಿಂಗ್ ದಂಧೆಯಲ್ಲಿ ತೊಡಗಿದ್ದಾರೋ ಅವರ ವಿರುದ್ಧ ಗೂಂಡಾ ಕಾಯ್ದೆ ತೆರೆಯಿರಿ ಎಂದು ನಗರದ ಎಲ್ಲಾ ಪೊಲೀಸ್ ಅಧಿಕಾರಿಗಳಿಗೆ ಡಿಜಿ & ಐಜಿಪಿ ಆದೇಶಿಸಿದ್ದಾರೆ. ಚುನಾವಣೆ ಬಳಿಕ, ಅತಿಹೆಚ್ಚು ಬೆಟ್ಟಿಂಗ್ ಮಂಡ್ಯದಲ್ಲಿ ನಡೆಯುತ್ತಿದೆ. ಈ ಹಿನ್ನೆಲೆ, ಎಲ್ಲರ ವಿರುದ್ಧ ಗೂಂಡಾ ಕಾಯ್ದೆ ತೆರೆಯಲು ಚಿಂತನೆ ನಡೆಸಲಾಗಿದೆ. ಒಮ್ಮೆ ಈ ಕೋಕಾ ಕಾಯ್ದೆ ಅಥವಾ ಗೂಂಡಾ ಕಾಯ್ದೆ ಹಾಕಿದರೆ ಬಂಧಿತ ಆರೋಪಿಗಳನ್ನ ನ್ಯಾಯಾಲಯಕ್ಕೆ‌ ಹಾಜರುಪಡಿಸುವ ಅಗತ್ಯವಿಲ್ಲ. ನೇರವಾಗಿ ಜೈಲಿಗೆ ಕಳುಹಿಸಬಹುದು. ಈ ಹಿನ್ನೆಲೆ ಬೆಟ್ಟಿಂಗ್ ತಡೆಯಲು ಡಿಜಿ & ಐಜಿಪಿ ಸೂಚನೆ ನೀಡಿದ್ದಾರೆ.

ಫ್ರೆಶ್ ನ್ಯೂಸ್

Latest Posts

Featured Videos