ತಾಯಿ-ಸಹೋದರನಿಂದಲೇ ನಟಿ ಅಂಚಲ್ ಹತ್ಯೆ..!

  • In Crime
  • April 2, 2019
  • 145 Views
ತಾಯಿ-ಸಹೋದರನಿಂದಲೇ ನಟಿ ಅಂಚಲ್ ಹತ್ಯೆ..!

ಬೆಂಗಳೂರು, ಏ. 2, ನ್ಯೂಸ್ ಎಕ್ಸ್ ಪ್ರೆಸ್: ಜಾರ್ಖಂಡದ ದಂಥಾರಿಯಲ್ಲಿ ನಡೆದ ನಟಿ ಆಂಚಲ್ ಯಾದವ್ ಹತ್ಯೆ ಪ್ರಕರಣ ಬೇಧಿಸುವಲ್ಲಿ ಪೊಲೀಸರು ಯಶಸ್ವಿಯಾಗಿದ್ದಾರೆ. ಆಂಚಲ್ ಸಹೋದರ ಸಿದ್ದಾರ್ಥ ಹಾಗೂ ತಾಯಿ ಮಮತಾ ಈ ಹತ್ಯೆಯಲ್ಲಿ ಭಾಗಿಯಾಗಿದ್ದಾರೆಂದು ಪೊಲೀಸರು ಹೇಳಿದ್ದಾರೆ. ಬಹುಬೇಗ ಯಶಸ್ಸಿನ ಶಿಖರ ಏರಲು ಆಂಚಲ್ ಬಯಸಿದ್ದಳಂತೆ. ಇದೇ ಕಾರಣಕ್ಕೆ ಅನೇಕ ಬಾಬಾರ ಬಳಿ ಹೋಗ್ತಿದ್ದಳಂತೆ. ಒಬ್ಬ ಬಾಬಾ ಜೊತೆ ಸಂಬಂಧ ಕೂಡ ಬೆಳೆಸಿದ್ದಳು ಎನ್ನಲಾಗಿದೆ. ಘಟನೆ ನಡೆದ ದಿನ ಅಂದ್ರೆ ಮಾರ್ಚ್ 25ರಂದು ಆಂಚಲ್ ಹಾಗೂ ಸಿದ್ಧಾರ್ಥ್ ಮಧ್ಯೆ ಗಲಾಟೆ ನಡೆದಿತ್ತು. ಸಹೋದರಿ ಬಟ್ಟೆ ಬಗ್ಗೆ ಸಿದ್ಧಾರ್ಥ್ ವಿರೋಧ ವ್ಯಕ್ತಪಡಿಸಿದ್ದ. ಆಂಚಲ್, ಸಿದ್ಧಾರ್ಥ್ ಗೆ ನಾಯಿ ಎಂದಿದ್ದಳಂತೆ. ಇದ್ರಿಂದ ಕೋಪಗೊಂಡ ಸಿದ್ಧಾರ್ಥ್ ಕಪಾಳಮೋಕ್ಷ ಮಾಡಿದ್ದನಂತೆ. ಆಂಚಲ್ ಬ್ಯಾಗ್ ನಿಂದ ಚಾಕು ತೆಗೆದು ಸಿದ್ಧಾರ್ಥ್ ಮೇಲೆ ಹಲ್ಲೆ ನಡೆಸಿದ್ದಳಂತೆ. ಇದ್ರಿಂದ ಕೋಪಗೊಂಡ ಸಿದ್ಧಾರ್ಥ್, ಆಂಚಲ್ ಯಾದವ್ ಮೇಲೆ ಹಲ್ಲೆ ನಡೆಸಿ, ಆಕೆ ಕತ್ತು ಹಿಸುಕಿದ್ದಾನೆ. ಘಟನೆ ನಂತ್ರ ಎಲ್ಲ ವಿಷ್ಯವನ್ನು ತಾಯಿಗೆ ಹೇಳಿದ್ದಾನೆ. ತಾಯಿ ಹೆಣ ಸಾಗಿಸಲು ನೆರವಾಗಿದ್ದಾಳೆ. ಇಬ್ಬರೂ ನಂತ್ರ ನಾಟಕವಾಡಿದ್ದಾರೆ. ಆದ್ರೆ ಪೊಲೀಸರು ಸತ್ಯ ಬಯಲಿಗೆಳೆದಿದ್ದಾರೆ. ವಿಚಾರಣೆ ವೇಳೆ ಆಂಚಲ್ ಬಗ್ಗೆ ಅನೇಕ ಸಂಗತಿಗಳು ಗೊತ್ತಾಗಿವೆ. ಕೋಲ್ಕತ್ತಾ ಬಾಬಾ ಒಬ್ಬನ ಜೊತೆ ಸಂಬಂಧ ಹೊಂದಿದ್ದ ಆಂಚಲ್ ನಂತ್ರ ಪೊಲೀಸರಿಗೆ ದೂರು ನೀಡಲು ಮುಂದಾಗಿದ್ದಳಂತೆ. ಪ್ರಭಾವಶಾಲಿ ವ್ಯಕ್ತಿಗಳ ಜೊತೆ ಆಕೆ ಸಂಪರ್ಕದಲ್ಲಿದ್ದಳು ಎನ್ನಲಾಗಿದೆ.

ಫ್ರೆಶ್ ನ್ಯೂಸ್

Latest Posts

Featured Videos