ಸೊಳ್ಳೆ ಬತ್ತಿ ಆರೋಗ್ಯಕ್ಕೆ ಅಪಾಯಕಾರಿ!

ಸೊಳ್ಳೆ ಬತ್ತಿ ಆರೋಗ್ಯಕ್ಕೆ ಅಪಾಯಕಾರಿ!

ಬೆಂಗಳೂರು, ಜ. 04: ಇತ್ತೀಚಿನ ದಿನಗಳಲ್ಲಿ ನಮ್ಮ ಸುತ್ತಮುತ್ತಲಿನ ವಾತವರ್ಣದಲ್ಲಿ ಸೊಳ್ಳೆಗಳ ಕಾಟ ಹೆಚ್ಚಾಗಿದ್ದು, ಇದರಿಂದ ನಾವೆಲ್ಲರು ಸಾಮಾನ್ಯವಾಗಿ ಸೊಳ್ಳೆಗಳನ್ನು ಓಡಿಸಲು ಕ್ವಾಯಿಲ್ ಬಾಡಿ ಅನ್ನು ಉರಿಸುತ್ತೇವೆ. ಇದರ ಹೊಗೆಯಿಂದ ಸೊಳ್ಳೆಗಳು ಸಾಯುತ್ತವೆ ಅಥವಾ ಕೋಣೆಯಿಂದ ಹೊರಗಡೆ ಓಡುತ್ತವೆ. ಆದರೆ ಅಚ್ಚರಿಯೆಂದರೆ ಕ್ವಾಯಿಲ್ ಗಳ ಹೊಗೆಯಿಂದ ಆರೋಗ್ಯಕ್ಕೆ ಹಾನಿಯಾಗುತ್ತದೆ.

ಹೌದು, ಸೊಳ್ಳೆ ಬತ್ತಿಗಳನ್ನು ಉರಿಸುವುದರಿಂದ ಶ್ವಾಸಕೋಶದ ಮೇಲೇ ಗಂಭೀರ ಪರಿಣಾಮ ಬೀರುತ್ತದೆ. ಸಂಶೋಧನೆಯ ಪ್ರಕಾರ, ಆ ರಾಸಾಯನಿಕಗಳನ್ನು ಭತ್ತಿಗಳಲ್ಲಿ ಬಳಸಲಾಗುತ್ತದೆ, ಇದನ್ನು ಬಗ್ ಸ್ಪ್ರೇಗಳಲ್ಲಿಯೂ ಬಳಸಲಾಗುತ್ತದೆ. ತಜ್ಞರ ಪ್ರಕಾರ, ಸೊಳ್ಳೆ ಭತ್ತಿಗಳನ್ನು ಬಳಸುವ ಬದಲು, ನಿಮ್ಮ ದೇಹಕ್ಕೆ ಅಪಾಯಕಾರಿಯಲ್ಲದ ಬೇರೆ ವಿಧಾನಗಳನ್ನು ಬಳಸಬೇಕು.

ಈ ಸೊಳ್ಳೆ ಬತ್ತಿಯಿಂದ ಬರುವ ಹೊಗೆಯಿಂದ ಗರ್ಭಿಣಿ ಮಹಿಳೆ, ವಯಸ್ಕರು ಮತ್ತು ಮಕ್ಕಳ ಮೇಲೆ ಗಂಭೀರವಾದ ಕೆಟ್ಟ ರೀತಿಯ ಪರಿಣಾಮ ಬೀರುತ್ತದೆ. ಹೀಗಾಗಿ ಸೊಳ್ಳೆ ಬತ್ತಿ ಹಚ್ಚಿದ ನಂತರ ಅದರಿಂದ ಸ್ವಲ್ಪ ಕಾಲ ದೂರವಿರಬೇಕು. ಕೋಣೆಯ ಬಾಗಿಲು ಮತ್ತು ಕಿಡಕಿಯನ್ನು ತೆರೆದಿಡಿ ಇದರಿಂದ ಆರೋಗ್ಯ ಕೂಡ ಉತ್ತಮವಾಗಿರುತ್ತದೆ.

ಫ್ರೆಶ್ ನ್ಯೂಸ್

Latest Posts

Featured Videos