ಮಾಸ್ಕೊ ವಿತರಣೆ

  • In State
  • March 22, 2020
  • 137 Views
ಮಾಸ್ಕೊ ವಿತರಣೆ

ಕೆ.ಆರ್.ಪುರ, ಮಾ. 22:  ದೇಶದಲ್ಲಿ  ಕಾಡುತ್ತಿರುವ ಕೊರೋನಾ ಮಹಮಾರಿಯಿಂದ ಉಂಟಾಗುವ ಅವಾಂತರ ತಡೆಯಲು ಮುನ್ನೆಚ್ಚರಿಕೆ ವಹಿಸಲು ಗಿರೀಶ್ ಚಾರಿಟ್ರಬಲ್ ಟ್ರಸ್ಟ್  ವತಿಯಿಂದ ಪೊಲೀಸ್ ಅಧಿಕಾರಿಗಳಿಗೆ ಮಾಸ್ಕೊ ವಿತರಿಸಲಾಯಿತು ಎಂದು ಟ್ರಸ್ಟ್ ನ ಅಧ್ಯಕ್ಷ ಗಿರೀಶ್ ಕುಮಾರ್ ತಿಳಿಸಿದರು.

ಪ್ರಪಂಚದಲ್ಲೇ ಜನರ ಮನಸ್ಸಿನಲ್ಲಿ ತಲ್ಲಣ ಮೂಡಿಸಿರುವ ಕೊರೊರೋನಾ ವೈರಸ್ ಜನರ ಜೀವದ ಜೋತೆ ಆಟವಾಡುತ್ತಿದೆ ಎಂದರು.

ಕೊರೊನಾ ವೈರಸ್ ಹರಡುವ ವಿರುದ್ದ ಎಲ್ಲರೂ ಕೈಜೋಡಿಸಿಲು ಆಯಾ ರಾಜ್ಯ ಸರ್ಕಾರಗಳ ಜನರಿಗೆ ಮನವಿಯನ್ನು ಮಾಡುತ್ತಿದ್ದಾರೆ. ಕೊರೋನಾ ದೇಶದಲ್ಲಿ ಹರಡದಂತೆ ತಡೆಯಲು ಪ್ರಧಾನ ಮಂತ್ರಿ ನರೇಂದ್ರ ಮೋದಿಯವರು ಇಂದು ಜನತಾ ಕರ್ಪೂ ಸ್ವಯಂ ಪ್ರೇರಿತರಾಗಿ ಎಲ್ಲರೂ ಬೆಳಿಗ್ಗೆ 7ರಿಂದ ರಾತ್ರಿ 9 ಗಂಟೆಯ ವರೆಗೆ ಮನೆಯ ಹೊರಗಡೆ ಬರದಂತೆ ದೃಡ ನಿರ್ದಾರ ತೆಗೆದು ಕೊಳ್ಳಲು ಮನವಿ ಮಾಡಿದ್ದರು.

ಗಿರೀಶ್ ಚಾರಿಟ್ರಬಲ್ ಟ್ರಸ್ಟ್ ವತಿಯಿಂದ ಪ್ರಧಾನ ಮಂತ್ರಿ ಮೋದಿಯವರು ತೆಗೆದುಕೊಂಡಿರುವ ನಿರ್ಧಾರಕ್ಕೆ ಬೆಂಬಲವಾಗಿ ನಗರದ ಪೋಲಿಸ್ ಅಧಿಕಾರಿಗಳಿಗೆ ಮಾಸ್ಕ್ ಮತ್ತು ಸ್ಯಾನಿಟೈಜರ್ ವಿತರಿಸುವ ಕಾರ್ಯ ಮಾಡಲಾಗಿದೆ ಎಂದರು.

ಎಡಿಜಿಪಿ ಸಂದು, ಹೆಚ್ಚುವರಿ ಪೋಲಿಸ್ ಮಹಾ ನಿರ್ದೇಶಕ ಮತ್ತು ಹೆಚ್ಚುವರಿ ಆಯುಕ್ತರಾದ ವೆಂಕಟೇಶ, ಪೋಲಿಸ್ ಉಪ ಆಯುಕ್ತರಾದ ನಾಗರಾಜ್ ರವರಿಗೆ ವಿವರಿಸಲಾಯಿತು. ಅಲ್ಲದೆ ಎಲ್ಲಾ ಪೋಲಿಸ್ ನ ಟ್ರಾಪಿಕ್ ಸಿಬ್ಬಂದಿಗೆ, ನಗರದ ನ್ಯಾಯಾಲಯದಲ್ಲಿ ಸಹ ಉಚಿತ ಮಾಸ್ಕೊ ಮತ್ತು ಸ್ಯಾನಿಟೈಜರ್ ವಿತರಿಸಲಾಗುವುದೆಂದು ಅವರು ತಿಳಿಸಿದರು.

ಫ್ರೆಶ್ ನ್ಯೂಸ್

Latest Posts

Featured Videos